ಉತ್ತರ ಕನ್ನಡ

ಇಂದು ಪಾದಯಾತ್ರೆ

Published On :


ಶಿರಸಿ:  ಜಿಲ್ಲಾ ಅರಣ್ಯ ಅತಿಕ್ರಮಣ ಹೋರಾಟಗಾರರ ವೇದಿಕೆ ಆಶ್ರಯದಲ್ಲಿ ಜ.30ರಂದು ಸಿದ್ದಾಪುರದಿಂದ ಶಿರಸಿ ವರೆಗೆ ಅರಣ್ಯ ಅತಿಕ್ರಮಣದಾರರ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಪಾದಯಾತ್ರೆ ಬುಧವಾರ ಮುಂಜಾನೆ 9.30ಕ್ಕೆ ಸಿದ್ದಾಪುರ ತಾಲೂಕಿನ ಹೊಸೂರು ವೃತ್ತದಿಂದ ಆರಂಭವಾಗಿ ಮಧ್ಯಾಹ್ನ 1.15ಕ್ಕೆ ನಾಣಿಕಟ್ಟಾ, 2.30ಕ್ಕೆ ಕಾನಸೂರು ಹಾಗೂ 5 ಗಂಟೆಗೆ ಅಗಸೇಬಾಗಿಲಿಗೆ ಪ್ರವೇಶಿಸಲಿದೆ. ಅನಂತರ ಐದು ರಸ್ತೆ ವೃತ್ತ, ಶಿರಸಿ ಬಸ್ ನಿಲ್ದಾಣ, ಸಿ.ಪಿ. ಬಝಾರ್, ಗಣೇಶನಗರ ಮೂಲಕ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಅರ್ಪಿಸಲಾಗುವುದು. ಅರಣ್ಯ ಅತಿಕ್ರಮಣದಾರರ ಪ್ರಮುಖ 5 ಬೇಡಿಕೆಗಳನ್ನು ಈಡೇರಿಸುವ ದಿಶೆಯಲ್ಲಿ ಹಮ್ಮಿಕೊಳ್ಳಲಾದ ಸದರಿ ಪಾದಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವೇದಿಕೆ ಅಧ್ಯಕ್ಷ ಎ. ರವೀಂದ್ರ ನಾಯ್ಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಜಾಗೃತಿ ಸಮಾವೇಶ
ಮುಂಡಗೋಡ:  ದನಗರ ಗೌಳಿ, ಬಂಜಾರಾ, ಮರಾಠಾ ಸಮುದಾಯದವರ ಧರ್ಮ ಜಾಗೃತಿ ಸಮಾವೇಶ ಜ. 30ರಂದು ಬೆಳಗ್ಗೆ 10.30ಕ್ಕೆ ಇಲ್ಲಿಯ ವಿವೇಕಾನಂದ ಬಯಲು ರಂಗಮಂಟಪದಲ್ಲಿ ನಡೆಯಲಿದೆ.  ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಹನುಮಾಪುರ ಕಾಳಿಕಾ ಮಠದ ಶ್ರೀ ಸದಾನಂದ ಶಿವಾಚಾರ್ಯ ಸ್ವಾಮಿಗಳು ಹಾಗೂ ಅತ್ತಿವೇರಿ ಬಸವಧಾಮದ ಶ್ರೀ ಮಾತೆ ಬಸವೇಶ್ವರಿ ಅವರ ಸಮ್ಮುಖದಲ್ಲಿ ಬಾಗಲಕೋಟ ಡಯಾಬಿಟಾಲಜಿ ಪ್ರಾಂತ ಪರಿಯೋಜನಾ ಧರ್ಮ ಜಾಗರಣಾ ಪ್ರಮುಖ ಬಾಬು ರಾಜೇಂದ್ರ ನಾಯ್ಕ ಮುಖ್ಯ ವಕ್ತಾರರಾಗಿ ಆಗಮಿಸಲಿದ್ದಾರೆ.
ಕಡವೆ ಸಾವು: ವ್ಯಕ್ತಿ ಬಂಧನ
ಜೋಯಿಡಾ:  ವಾಹನ ಕಡವೆಗೆ ಡಿಕ್ಕಿ ಹೊಡೆದ ಪರಿಣಾಮ ಕಡವೆ ಸ್ಥಳದಲ್ಲೇ ಮೃತಪಟ್ಟಿದೆ. ಸೋಮವಾರ ನಡೆದ ಘಟನೆಗೆ ಸಂಬಂಧಿಸಿದಂತೆ ವಾಹನ ಚಾಲಕ ಮಾಳು ಬಾಬು ಪಿಂಗಳೆಯನ್ನು ವನ್ಯಜೀವಿ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.