ಟ್ಯೂಶನ್ಗೆ ಹೋಗಿದ್ದ ಬಾಲಕಿ ನಾಪತ್ತೆ
ಭಟ್ಕಳ: ಮನೆಯ ಪಕ್ಕದಲ್ಲೆ ಇರುವ ಟ್ಯೂಶನ್ ಕ್ಲಾಸಿಗೆಂದು ತೆರಳಿದ್ದ ಬಾಲಕಿ ನಾಪತ್ತೆಯಾಗಿರುವ ಘಟನೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ನಡೆದಿದೆ. ನಾಪತ್ತೆಯಾದವಳನ್ನು ನೀಹಾ (11) ಶಕೀಲ ಹಸನ ಸಿದ್ಧಿ ಬಾಪಾ, ಉಮರ ಸ್ಟ್ರೀಟ್ ಭಟ್ಕಳ ಎಂದು ಗುರುತಿಸಲಾಗಿದೆ. ಈಕೆ ಟ್ಯೂಶನ್ಗೆಂದು ತೆರಳಿದ್ದಳು. ನೀಹಾ ಮನೆಗೆ ಬರದಿದ್ದರಿಂದ ಆತಂಕಗೊಂಡ ತಾಯಿ ನಸೀಪಾ ಬಾನು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಿಪಿಐ ಬೆಳ್ಳಿಯಪ್ಪ ತನಿಖೆ ಕೈಗೊಂಡಿದ್ದಾರೆ.
ಸಕಾಲದಲ್ಲಿ ಕೆಲಸವಾಗುತ್ತಿಲ್ಲ
ಕಾರವಾರ: ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ಸಿಬ್ಬಂದಿಯೇ ಇರುವುದಿಲ್ಲ. ಕೇಳಿದರೆ ರಜೆ ಹಾಕಿದ್ದಾರೆ ಎಂದು ಕಾರಣ ನೀಡುತ್ತಾರೆ. ಜನ ಸಾಮಾನ್ಯರಿಗೆ ಸಕಾಲದಲ್ಲಿ ಕೆಲಸಗಳಾಗದೇ ಪ್ರತಿನಿತ್ಯ ಅಲೆಯುವಂತಾಗಿದೆ ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಹೇಳಿದರು. ಕಚೇರಿಯಲ್ಲಿ ಸೋಮವಾರ ತಹಸೀಲ್ದಾರ್ ಸಾಜಿದ್ ಮುಲ್ಲಾ ಅವರೊಂದಿಗೆ ಚರ್ಚಿಸಿದ ಅವರು, ಕಾರವಾರದಲ್ಲಿ ಬಹಳಷ್ಟು ಬಡ ಕುಟುಂಬಗಳಿವೆ. ಅವರ ಹತ್ತಿರ ಬಸ್ ಕರ್ಚಿಗೂ ಒಮ್ಮೊಮ್ಮೆ ಹಣ ಇರುವುದಿಲ್ಲ. ಹಲವು ಬಾರಿ ಬಂದು ಬೆಳಗ್ಗೆಯಿಂದ ಸಂಜೆ ತನಕ ತಹಸೀಲ್ದಾರ್ ಕಚೇರಿಯಲ್ಲಿ ಕುಳಿತು ಹೋಗುತ್ತಾರೆ. ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳುವ ಅನಿವಾರ್ಯತೆ ಇದೆ. ಸಿಬ್ಬಂದಿ ಕದ್ದು ಮುಚ್ಚಿ ಹಣ ತೆಗೆದುಕೊಳ್ಳುತ್ತಾರೆ ಎಂದು ಆರೋಪಿಸಿದರು. ನಿಧಾನಗತಿಯ ಸರ್ಕಾರಿ ಕಾರ್ಯಗಳಿಗೆ ಕಡಿವಾಣ ಹಾಕಬೇಕು. ಜನ ಸಾಮಾನ್ಯರು ತಮ್ಮ ಎಲ್ಲಾ ಕೆಲಸಗಳನ್ನು ಬಿಟ್ಟು ಪ್ರತಿನಿತ್ಯ ಅಲೆಯುವಂತಾಗಬಾರದು ಎಂದು ಮಾಧವ ನಾಯಕ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

