ಜಿಎಸ್ಬಿ ಸಮಾಜದ ಜಿಲ್ಲಾ ಸಮಾವೇಶ
ಕುಮಟಾ: ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ 11ನೇ ವರ್ಷದ ಜಿಲ್ಲಾ ಸಮಾವೇಶ ಚಿತ್ರಿಗಿ ವಿಷ್ಣುತೀರ್ಥದ ಶ್ರೀ ಗೋಪಾಲಕೃಷ್ಣ ವೇದಿಕೆಯಲ್ಲಿ ಭಾನುವಾರ ಜರುಗಿತು.
ಹುಬ್ಬಳ್ಳಿಯ ಉದ್ಯಮಿ ಆರ್.ಎನ್. ನಾಯಕ ಸಮಾವೇಶ ಉದ್ಘಾಟಿಸಿದರು. ವಕ್ತಾರರಾಗಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ಮಂಗಳೂರಿನ ಕಾಸರಗೋಡು ಚಿನ್ನಾ ಮಾತನಾಡಿ, ಜಿಎಸ್ಬಿ ಸಮಾಜದವರು ಅತ್ಯಂತ ಪ್ರಭಾವಿಗಳಾಗಿದ್ದು, ದೇವರ ಕುರಿತಾಗಿ ನಂಬಿಕೆ ಹೊಂದಿದ್ದಾರೆ. ಸಂಸ್ಕಾರವಂತರಾಗಿದ್ದಾರೆ. ಅಂತಹ ಸಮಾಜದಲ್ಲಿ ಇಂದು ಸಂಸ್ಕಾರ ಕ್ಷೀಣಿಸುತ್ತಿದೆ. ಯುವಕರು ಐಟಿ-ಬಿಟಿಯಿಂದ ಆಕರ್ಷಿತರಾಗುತ್ತಿದ್ದಾರೆ. ಸಮಾಜ ಆರ್ಥಿಕವಾಗಿ ಹಾಗೂ ಸಾಹಿತ್ಯಿಕವಾಗಿ ಸದೃಢವಾಗಬೇಕಿದೆ. ಸಾಹಿತ್ಯ ರಚನೆಯಲ್ಲಿ ಸಮಾಜದ ಪಾಲ್ಗೊಳ್ಳುವಿಕೆ ಇಲ್ಲದಾಗಿದೆ. ಸಂಸ್ಕೃತಿ ಹಾಗೂ ಸಾಹಿತ್ಯದ ದಾರಿಯಲ್ಲಿ ಇಂದಿನ ಯುವ ಜನಾಂಗ ಮುನ್ನಡೆಯುವ ದಿಶೆಯಲ್ಲಿ ಪ್ರಯತ್ನಿಸಬೇಕು ಎಂದರು. ಸುಪ್ರೀಂ ಕೋರ್ಟ್ ನ್ಯಾಯವಾದಿ ದೇವದತ್ತ ಕಾಮತ್ ಮಾತನಾಡಿ, ಸಾರಸ್ವತ ಈ ಶಬ್ದದ ಹಿಂದೆ ಅಪಾರ ಜ್ಞಾನ, ಸಂಸ್ಕೃತಿಗಳು ಅಡಕವಾಗಿದೆ. ಉತ್ಕೃಷ್ಟ ಸಂಸ್ಕೃತಿ ಸಂಪ್ರದಾಯ ಹೊಂದಿರುವ ಜಿಎಸ್ಬಿ ಸಮಾಜ ಪಾಶ್ಚಿಮಾತ್ಯ ಸಂಸ್ಕೃತಿಯತ್ತ ಆಕರ್ಷಿತವಾಗುತ್ತಿದೆ ಎಂದು ವಿಷಾದಿಸಿದರು. ತಿರುಪತಿ ತಿರುಮಲ ಟ್ರಸ್ಟ್ನ ಧರ್ಮದರ್ಶಿ ಆರ್.ವಿ. ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು. ಯುವ ಸೇವಾವಾಹಿನಿ ಜಿಲ್ಲಾಧ್ಯಕ್ಷ ರಾಘವ ಬಾಳೇರಿ, ತಾಲೂಕು ಯುವ ಸೇವಾವಾಹಿನಿ ಗೌರವಾಧ್ಯಕ್ಷ ಚಂದ್ರಕಾಂತ ಎಂ. ಶಾನಭಾಗ ಮತ್ತು ಅಧ್ಯಕ್ಷ ಮಾಧವ ಕೆ. ಶಾನಭಾಗ ಇದ್ದರು. ಸೇವಾ ಗೌರವಾಧ್ಯಕ್ಷ, ಸಮಾವೇಶ ಸಮಿತಿ ಜಿಲ್ಲಾಧ್ಯಕ್ಷ ವಸುದೇವ ಪ್ರಭು ಸ್ವಾಗತಿಸಿ, ಪರಿಚಯಿಸಿದರು. ಯುವ ವಾಹಿನಿ ಜಿಲ್ಲಾ ಕಾರ್ಯದರ್ಶಿ ರವಿ ಲಕ್ಷ್ಮಣ ಶಾನಭಾಗ ಪ್ರಸ್ತಾವಿಕವಾಗಿ ಮಾತನಾಡಿದರು. ಸಹಕಾರ್ಯದರ್ಶಿ ಲಕ್ಷ್ಮೀನಾರಾಯಣ ಹೆಗಡೆಕರ ವರದಿ ಸಲ್ಲಿಸಿದರು. ಸಮಾವೇಶ ಸಮಿತಿ ಅಧ್ಯಕ್ಷ ರತ್ನಾಕರ ಬಿ. ಕಾಮತ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

