ನಾಳೆ ತಾಪಂ ಸಭೆ (ಸುದ್ದಿ ಸಂಕ್ಷೇಪ)
ಕುಮಟಾ: ತಾಲೂಕು ಪಂಚಾಯತ್ ಸಾಮಾನ್ಯ ಸಭೆ ಹಾಗೂ ಹಣಕಾಸು ಸ್ಥಾಯಿ ಸಮಿತಿ ಸಭೆಯು ತಾಪಂ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ 24ರ ಗುರುವಾರದಂದು ತಾಪಂ ಸಭಾಭವನದಲ್ಲಿ ಬೆಳಿಗ್ಗೆ 11ಕ್ಕೆ ಜರುಗಲಿದೆ ಎಂದು ತಾಪಂ ಕಾರ್ಯನಿರ್ವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚೌಡಯ್ಯ ಶ್ರೇಷ್ಠ ವಚನಕಾರ
ಕುಮಟಾ: ಅಂಬಿಗರ ಚೌಡಯ್ಯ ವಚನಕಾರರಲ್ಲಿ ಶ್ರೇಷ್ಠರು. ಈವರೆಗೆ ಚೌಡಯ್ಯ ನವರ ಸುಮಾರು 400 ವಚನಗಳು ಸಿಕ್ಕಿವೆ. ಶರಣರ ಕ್ರಾಂತಿಯ ಫಲ ರೂಪವಾಗಿ ಹೊರಹೊಮ್ಮಿದವರು ಅಂಬಿಗರ ಚೌಡಯ್ಯ ಎಂದು ಸಂಸ್ಕೃತಿ ಉಪನ್ಯಾಸ ವೇದಿಕೆ ಅಧ್ಯಕ್ಷ ಪ್ರೊ. ವಿಷ್ಣು ಜೋಶಿ ಹೇಳಿದರು. ಅವರು ಅಂಬಿಗರ ಚೌಡಯ್ಯ ಜಯಂತಿ ನಿಮಿತ್ತ ಸಂಸ್ಕೃತಿ ಉಪನ್ಯಾಸ ವೇದಿಕೆಯ ಕಚೇರಿಯಲ್ಲಿ ಇತ್ತೀಚೆಗೆ ಜರುಗಿದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ದೋಣಿ ನಡೆಸಿ, ಜನರನ್ನು ದಡದಿಂದ ದಡಕ್ಕೆ ದಾಟಿಸುವ ಕ್ರಿಯೆಗೆ ಅದ್ಭುತವಾದ ಪಾರಮಾರ್ಥಿಕ ಸಂಕೇತ ಕೊಟ್ಟ ಶ್ರೇಯಸ್ಸು ಚೌಡಯ್ಯನಿಗೆ ಸಲ್ಲುತ್ತದೆ. ದೇವರನ್ನು ಕಾಣಲಿಕ್ಕೆ ಅಂತರಾತ್ಮವನ್ನು ಪ್ರವೇಶಿಸಿ ನೋಡಿ ಎಂಬ ಸಂದೇಶ ಚೌಡ್ಯಯನದು. ಚೌಡಯ್ಯ ಸಿಡಿದೇಳುವ ಸ್ವಭಾದವನಾಗಿದ್ದ. ಯಾವಾಗಲೂ ಸರ್ವ ಸಮಾಜದ ಅಭ್ಯುದಯವನ್ನು ಬಯಸಿದವರಾಗಿದ್ದು ಚೌಡಯ್ಯನ ವಚನಗಳ ಅಧ್ಯಯನ ನಡೆಯಬೇಕಾಗಿದೆ ಎಂದರು. ನಾರಾಯಣ ಅಂಬಿಗ ಸ್ವಾಗತಿಸಿದರು. ವಾಸುದೇವ ಅಂಬಿಗ ವಂದಿಸಿದರು.
ಬಾವಿಗೆ ಬಿದ್ದು ಸಾವು
ಭಟ್ಕಳ: ತಾಲೂಕಿನ ಬೆಳಕೆ ಪಂಚಾಯಿತಿ ವ್ಯಾಪ್ತಿಯ ಸೋಡಿಗದ್ದೆಯಲ್ಲಿ ವಿದ್ಯಾರ್ಥಿನಿ ಮಂಗಳವಾರ ಕಾಲುಜಾರಿ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದಾಳೆ. ಬೆಳೆಕೆ ಪೌಢಶಾಲೆ ವಿದ್ಯಾರ್ಥಿನಿ ಮಹಾಲಕ್ಷ್ಮೀ ಮಂಜುನಾಥ ನಾಯ್ಕ (16) ಮೃತಪಟ್ಟವಳು. ಬೆಳಗ್ಗೆ ನೀರು ತರಲು ಮನೆ ಸಮೀಪದ ಬಾವಿಯ ಬಳಿ ತೆರಳಿದಾಗ ಕಾಲುಜಾರಿ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದಾಳೆ. ಭಟ್ಕಳ ಗ್ರಾಮಾಂತರ ಠಾಣೆ ಪಿಎಸ್ಐ ನವೀನಕುಮಾರ ಜೋಗಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ದಲೈ ಲಾಮಾಗೆ ಅದ್ಧೂರಿ ಬೀಳ್ಕೊಡುಗೆ
ಮುಂಡಗೋಡ: ನೋಬೆಲ್ ಪ್ರಶಸ್ತಿ ಪುರಸ್ಕೃತ ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಮಂಗಳವಾರ ಇಲ್ಲಿಂದ ನಿರ್ಗಮಿಸಿದರು. ಇಲ್ಲಿಯ ಟಿಬೆಟಿಯನ್ ಕಾಲನಿ ಧರ್ಮ ಗುರುಗಳು ಹಾಗೂ ಟಿಬೆಟಿಯನ್ನರು ದಲೈ ಲಾಮಾ ಅವರನ್ನು ಅದ್ಧೂರಿಯಾಗಿ ಬೀಳ್ಕೊಂಡರು. ಜ. 16ರಂದು ಇಲ್ಲಿಯ ಟಿಬೆಟಿಯನ್ ಕಾಲನಿಗೆ ಆಗಮಿಸಿದ್ದ ದಲೈ ಲಾಮಾ 7 ದಿನಗಳ ಕಾಲ ವಿವಿಧ ರಾಷ್ಟ್ರಗಳ ವಿಜ್ಞಾನಿಗಳೊಂದಿಗೆ ಸಂವಾದ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಮಂಗಳವಾರ ಬೆಳಗ್ಗೆ ಇಲ್ಲಿಂದ ಯಲ್ಲಾಪುರ-ಕಾರವಾರ ಮಾರ್ಗವಾಗಿ ಗೋವಾಕ್ಕೆ ತೆರಳಿ ಅಲ್ಲಿಂದ ವಿಮಾನ ಮೂಲಕ ಧರ್ಮಶಾಲಾಕ್ಕೆ ಪ್ರಯಾಣ ಬೆಳೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

