ಉತ್ತರ ಕನ್ನಡ

ಪಡ್ತಿ ಪ್ರತಿಭಾವಂತರಿಗೆ ನೆರವು

Published On :

ಕಾರವಾರ:  ಪಡ್ತಿ ಸಮುದಾಯದ ಎರಡು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಐಎಎಸ್, ಐಪಿಎಸ್ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧಗೊಳಿಸಲು ಪೂರ್ಣ ವೆಚ್ಚ ನೀಡಲು ನಾನು ಸಿದ್ಧನಿದ್ದೇನೆ ಎಂದು ಮೀನುಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಆನಂದ ಅಸ್ನೋಟಿಕರ್ ಹೇಳಿದ್ದಾರೆ.
ಅವರು ನಂದನಗದ್ದಾದಲ್ಲಿ ಭಾನುವಾರ ನಡೆದ ಪಡ್ತಿ ಸಮಾಜದ ಸಮುದಾಯ ಭವನದ ಶಿಲಾನ್ಯಾಸಗೈದು, ಫಲಕ ಅನಾವರಣಗೊಳಿಸಿ ಮಾತನಾಡಿದ ಅವರು, ಆರ್ಥಿಕ ಹಾಗೂ ಸಾಮಾಜಿಕವಾಗಿ ತೀರಾ ಹಿಂದುಳಿದರೂ ಇವರನ್ನು ಹಿಂದುಳಿದವರ ಪಟ್ಟಿಗೆ ಸೇರಿಸಲಾಗಿಲ್ಲ. ಹೀಗಾಗಿ ಸರ್ಕಾರದಿಂದ ದೊರೆಯುವ ಹಿಂದುಳಿದ ವರ್ಗದ ಸೌಲಭ್ಯ  ಪಡೆಯಲು ಅನರ್ಹರಾಗಿದ್ದಾರೆ. ಇಂತಹ ಅನ್ಯಾಯ ಪರಿಸ್ಥಿತಿಯಲ್ಲಿ ಅವರು ವಿವಿಧ ರೀತಿಯಲ್ಲಿ ಸೌಲಭ್ಯ ವಂಚಿತರಾಗಿದ್ದಾರೆ. ಎಲ್ಲಾ ಹಿಂದುಳಿದ ವರ್ಗದವರು ಒಂದೇ ವೇದಿಕೆಯಡಿಯಲ್ಲಿ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ನಡೆಸುವುದು ಅನಿವಾರ್ಯ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಸಮಾಜ ಕಲ್ಯಾಣ ಸಚಿವ ಎ. ನಾರಾಯಣ ಸ್ವಾಮಿ, ಹಿಂದುಳಿದ ವರ್ಗದ ಕಲ್ಯಾಣಕ್ಕಾಗಿ ಸರ್ಕಾರದಲ್ಲಿ ಅನುದಾನದ ಕೊರತೆ ಇಲ್ಲ. ಅರ್ಹ ಫಲಾನುಭವಿಗಳು ಇಲಾಖೆಯ ವಿವಿಧ ಸೌಲಭ್ಯ ಹಾಗೂ ಸೌಲತ್ತುಗಳನ್ನು ಪಡೆಯಲು ಶಕ್ಯರಾಗಿದ್ದಾರೆ. ಸ್ವಾತಂತ್ರ್ಯಗೊಂಡು ಆರು ದಶಕಗಳಾದರೂ ಹಿಂದುಳಿದ ವರ್ಗದವರಿಗೆ ಆದ ಅನ್ಯಾಯ ಸರಿಪಡಿಸಲಾಗಿಲ್ಲ. ಸಾವಿರಾರು ಜಾತಿಗಳು ಹಿಂದುಳಿದವರ ಪಟ್ಟಿಯಲ್ಲಿ ಸೇರ್ಪಡೆಯಾಗಿಲ್ಲ. ಇದರಿಂದಾಗಿ ಸರ್ಕಾರಕ್ಕೂ ಕಷ್ಟವಾಗಿದೆ. ಅನ್ಯಾಯಕ್ಕಾಗಿ ಒಳಗಾದವರೂ ಕಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿದರು. ರಮೇಶ ಡಿ. ತಳೇಕರ ನಿರೂಪಿಸಿದರು. ಅಧ್ಯಕ್ಷ ಕೃಷ್ಣಾ ಐ. ಕೊಚ್ರೇಕರ ಸಚಿವರಿಗೆ ಮಾಲಾರ್ಪಣೆ ಮಾಡಿ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.