ಸಹಗುತ್ತಿಗೆ ಕಾಮಗಾರಿ ನೀಡಿ
ಕಾರವಾರ: ಸೀಬರ್ಡ್ ನೌಕಾನೆಲೆಯಲ್ಲಿ ಬರುವ ಕಂಪನಿಗಳಿಗೆ ಸರಕು ಸಾಗಾಣಿಕೆ ಮತ್ತು ಸಹ ಗುತ್ತಿಗೆ ಕಾಮಗಾರಿಯನ್ನು ನೀಡುವಂತೆ ಸೀಬರ್ಡ್ ಅಧಿಕಾರಿಗಳಿಗೆ ಮನವರಿಕೆ ಮಾಡುವಂತೆ ಆಗ್ರಹಿಸಿ ನೌಕಾನೆಲೆ ನಿರಾಶ್ರಿತರ ಗುತ್ತಿಗೆ ಕಾರ್ಮಿಕರ ಸಹಕಾರಿ ಸಂಘ ಈಚೆಗೆ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.
ನೌಕಾನೆಲೆ ಗುತ್ತಿಗೆ ಕಾರ್ಮಿಕ ಸಹಕಾರಿ ಸಂಘ 10-12 ವರ್ಷಗಳ ಹಿಂದೆಯೇ ಅಸ್ತಿತ್ವಕ್ಕೆ ಬಂದಿದೆ. ನೌಕಾನೆಲೆಗೆ ಬರುವ ಕಂಪನಿಗಳಿಗೆ ಸರಕು ಸಾಗಾಣಿಕೆ ಹಾಗೂ ಸಹಗುತ್ತಿಗೆ ಕಾಮಗಾರಿಗಳನ್ನು ಮಾಡುವ ಉದ್ದೇಶ ಹೊಂದಿದೆ. ಮುದಗಾದಲ್ಲಿ ಈ ಹಿಂದೆ ಬಂದ ಯುನಿಟಿ ಇನ್ಫ್ರಾ ಪ್ರಾಜೆಕ್ಟ್ ಸೇರಿ ಹಲವು ಕಂಪನಿಗಳಿಂದ ಈ ಸಂಘ ಸರಕು ಸಾಗಾಣಿಕೆ ಮತ್ತು ಗುತ್ತಿಗೆ ಕಾಮಗಾರಿಗಳನ್ನು ಪಡೆದು ಸಕಾಲದಲ್ಲಿ ಸರಕು ಸಾಮಗ್ರಿಗಳನ್ನು ಪೂರೈಸಿ ಉತ್ತಮ ಗುತ್ತಿಗೆ ಕಾಮಗಾರಿ ನಿರ್ವಹಿಸಿ ಪ್ರಶಂಸೆಗೆ ಪಾತ್ರವಾಗಿದೆ. ಅವಧಿ ಪೂವದಲ್ಲಿಯೇ ಕಾಮಗಾರಿ ಮಾಡಿಕೊಟ್ಟಿದೆ. ಸಹಕಾರಿ ಸಂಘದಲ್ಲಿ ಎಲ್ಲ ನಿರಾಶ್ರಿತರು ಹಾಗೂ ಸ್ಥಳೀಯರು ಒಟ್ಟಾಗಿ ಇದ್ದು, ಸೀಬರ್ಡ್ ನಿರಾಶ್ರಿತರ ಶ್ರೇಯಸ್ಸಿಗೆ ಸ್ಥಾಪಿತವಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ನೌಕಾನೆಲೆಗೆ ಬರುವ ಎಲ್ಲ ಕಂಪನಿಗಳಿಗೆ ಸಹಕಾರಿ ಸಂಘಕ್ಕೆ ಸರಕು ಸಾಗಾಣಿಕೆ ಹಾಗೂ ಗುತ್ತಿಗೆ ಕಾಮಗಾರಿಗಳನ್ನು ಮಾಡಲು ಅನುವು ಮಾಡಿಕೊಟ್ಟು ಸೀಬರ್ಡ್ ನೌಕಾನೆಲೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಅದರಂತೆಯೇ ಈ ಹಿಂದೆ ತಮಗೆ ಸಹಕಾರಿ ಸಂಘದ ಮೂಲಕ ಅರ್ಜಿ ಸಲ್ಲಿಸಿದ್ದು ಇದೆ. ನಮ್ಮ ಸಹಕಾರಿ ಸಂಘ ನೌಕಾನೆಲೆಯಲ್ಲಿ ಕಾಮಗಾರಿ ಮಾಡುತ್ತಿರುವಾಗ ಹೊರ ರಾಜ್ಯದವರು ಬಂದು ತೊಂದರೆ ನೀಡದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಗುತ್ತಿಗೆ ಕಾರ್ಮಿಕ ಸಹಕಾರಿ ಸಂಘದ ಪ್ರಮುಖರಾದ ಪ್ರಶಾಂತ ಕೊಡಸ್ಕರ್, ವಿನೋದ ಉಳ್ವೇಕರ್, ಉಮಾಕಾಂತ ಹರಿಕಂತ್ರ, ವಿಕ್ರಮ ನಾಯ್ಕ, ಮಾಧವ ನಾಯಕ, ಸತೀಶ ದುರ್ಗೇಕರ್, ಜಿ.ಎಂ. ತಾಂಡೇಲ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

