ಉತ್ತರ ಕನ್ನಡ

ವೇದಿಕೆಗೆ ಭೂಮಿಪೂಜೆ

Published On :

ಕುಮಟಾ:  ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳಿಂದ ಶ್ರೀ ಕ್ಷೇತ್ರ ಗೋರೆಯಲ್ಲಿ ಏಪ್ರಿಲ್ 3ರಿಂದ 9ರ ವರೆಗೆ ಜರುಗಲಿರುವ ರಾಮಕಥಾ ಕಾರ್ಯಕ್ರಮಕ್ಕಾಗಿ ನಿರ್ಮಿಸಲಿರುವ ಬೃಹತ್ ವೇದಿಕೆಗೆ ದಿವಗಿಯ ಶ್ರೀ ರಾಮನಂದ ಸ್ವಾಮಿಗಳು ಭೂಮಿಪೂಜೆ ನೆರವೇರಿಸಿ, ಮಂತ್ರಾಕ್ಷತೆ ಹಾಕಿ ಆಶೀರ್ವದಿಸಿದರು. ಗೋರೆಯ ಸುಂದರ ನಿಸರ್ಗದಲ್ಲಿ ರಾಮಕಥಾ ಕಾರ್ಯಕ್ರಮಕ್ಕಾಗಿ 60 ಅಡಿ ಅಗಲದ ವೇದಿಕೆ ನಿಮಣವಾಗಲಿದೆ. ರಾಘವೇಶ್ವರ ಶ್ರೀಗಳು ಏ. 2ರಂದೇ ಗೋರೆಗೆ ಆಗಮಿಸಲಿದ್ದಾರೆ. ಭಕ್ತಾದಿಗಳ ಪಾಲಿಗೆ ಗೋರೆಯ ರಾಮಕಥಾ ಕಾರ್ಯಕ್ರಮ ಸ್ಮರಣಯವಾಗುವಂತೆ ಸಿದ್ಧತೆಗಳು ನಡೆಯಲಿದೆ ಎಂದು ಸಂಘಟಕರು ತಿಳಿಸಿದರು. ಸುಬ್ರಾಯ ಭಟ್ಟ ದಂಪತಿ ಯಜಮಾನತ್ವದಲ್ಲಿ ಭೂಮಿ ಪೂಜೆ ನೆರವೇರಿಸಿ, ಅಡಿಗಲ್ಲನ್ನಿಡಲಾಯಿತು. ಗೋರೆ ಕ್ಷೇತ್ರ ಪ್ರಮುಖರಾದ ಎನ್.ಜಿ.ಪಿ. ಭಟ್ಟ, ಸುಬ್ರಹ್ಮಣ್ಯ ಭಟ್ಟ, ಹವ್ಯಕ ಮುಖಂಡರಾದ ಎಂ.ಕೆ. ಹೆಗಡೆ, ಡಾ೤ ಜಿ.ಜಿ. ಹೆಗಡೆ, ಶ್ರೀಕಾಂತ ಪಂಡಿತ, ವಿನಾಯಕ ಭಟ್ಟ, ಸೀತಾರಾಮ ಜೋಶಿ, ವಿನೋದ ಭಟ್ಟ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.