ಅಕ್ರಮವಾಗಿ ಬಾರ್ಜ್ ಕಟಿಂಗ್
ಹೊನ್ನಾವರ: ಬಂದರು ಪ್ರದೇಶದ ಶರಾವತಿ ನದಿತೀರದಲ್ಲಿ ಲಂಗರು ಹಾಕಿದ್ದ ರು. ಕೋಟ್ಯಂತರ ಮೌಲ್ಯದ ಬಾರ್ಜ್ನ್ನು ನೆರೆಯ ಗೋವಾದ ಗುಜರಿ ದಂಧೆ ನಡೆಸುವ ಖಾಸಗಿ ಮಾಲೀಕರ ಕಾರ್ಮಿಕರು ಸ್ಕ್ರ್ಯಾಪ್ ಮಾಡಿ ಸಾಗಣಿಕೆ ಮಾಡುತ್ತಿರುವ ವಿದ್ಯಮಾನಕ್ಕೆ ಸಂಬಂಧಿಸಿ ಮಂಗಳವಾರ ಸಂಜೆ ವೇಳೆ ದಿಢೀರ್ ಭೇಟಿಯಿತ್ತ ಭಟ್ಕಳ ಉಪವಿಭಾಗಾಧಿಕಾರಿ ವಿ. ಮನೋಹರ ಅವರು ಪರಿಶೀಲನೆ ನಡೆಸಿ ಈ ವಿದ್ಯಮಾನದಲ್ಲಿ ಸಹಕಾರ ನೀಡಿದ ಬಂದರು ಸಂರಕ್ಷಣಾಧಿಕಾರಿ ಸಹಿತ ಇನ್ನಿತರರ ಮೇಲೆ ಪ್ರಕರಣ ದಾಖಲಿಸಲು ಸೂಚಿಸಿದ್ದಾರೆ.
ಭಟ್ಕಳ ಉಪವಿಭಾಗಾಧಿಕಾರಿ ವಿ. ಮನೋಹರ, ತಹಸೀಲ್ದಾರ್ ಗಾಯತ್ರಿ ನಾಯಕ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಬಂದರು ಪ್ರದೇಶಕ್ಕೆ ತೆರಳಿ ಪರಿಶೀಲನೆ ನಡೆಸಿ ಬಂದರು ಸಂರಕ್ಷಣಾಧಿಕಾರಿ ಜೆ.ಪಿ. ಕಿಣಿ ಇವರಲ್ಲಿ ವಿವರಣೆ ಕೇಳಿದಾಗ ತಬ್ಬಿಬ್ಬುಗೊಂಡು ಈ ಸಂಗತಿ ತಿಳಿದಿಲ್ಲ. ಅವರಿಗೆ ಪರವಾನಿಗೆ ಪಡೆದುಕೊಳ್ಳಲು ಈ ಹಿಂದೆಯೇ ಸೂಚಿಸಿರುವುದಾಗಿ ಜಾರಿಕೊಳ್ಳಲು ಹವಣಿಸಿದರು.
ಸ್ಪಷ್ಟ ವಿವರಗಳಿಲ್ಲ: ಆದರೆ ಸೂಕ್ತ ದಾಖಲಾತಿಗಳನ್ನು ನೀಡುವಂತೆ ಬಾರ್ಜ್ ಕೆಲಸಗಾರರ ಮುಖ್ಯಸ್ಥರಲ್ಲಿ ಉಪವಿಭಾಗಾಧಿಕಾರಿಗಳು ಕೇಳಿದಾಗ, ಸ್ಪಷ್ಟ ವಿವರಗಳಿಲ್ಲದ ಝೆರಾಕ್ಸ್ ಪ್ರತಿಯನ್ನು ನೀಡಿದಾಗ ಅದರಲ್ಲಿ ಈ ಬಾರ್ಜ್ ನೋಂದಣಿಯಾದ ಮಾಲೀಕರ ಹೆಸರುಗಳು ಮಾತ್ರವಿದ್ದು, ಬಾರ್ಜ್ನ್ನು ಕಟ್ಮಾಡಿ ಸ್ಕ್ರ್ಯಾಪ್ ಮಾಡುವ ಬಗ್ಗೆ ಅಥವಾ ಬಂದರು ಅಧಿಕಾರಿಯಿಂದಾಗಲಿ, ಜಿಲ್ಲಾಧಿಕಾರಿಗಳಿಂದಾಗಲಿ ಪರವಾನಿಗೆ ಪಡೆದ ಬಗ್ಗೆ, ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಿರಪೇಕ್ಷಣಾ ಪತ್ರ ಪಡೆದ ಬಗ್ಗೆ ಯಾವುದೇ ದಾಖಲೆಗಳಿರಲಿಲ್ಲ. ಸಿಪಿಐ ಎಂ. ಮಂಜುನಾಥ ತಮ್ಮ ಸಿಬ್ಬಂದಿಯೊಂದಿಗೆ ಪಂಚನಾಮೆ ನಡೆಸಿ, ಅಕ್ರಮವಾಗಿ ಕೆಲಸ ನಡೆಸಲು ತಂದಿದ್ದ ಪರಿಕರಗಳು, ಕಟ್ಟಿಂಗ್ಗೆ ಬಳಸಲು ತಂದಿದ್ದ ಗ್ಯಾಸ್ ಸಿಲಿಂಡರ್ಗಳನ್ನು, ಬಾರ್ಜ್ನ ಸ್ಕ್ರ್ಯಾಪ್ ಮಾಡಿದ ಬಿಡಿಭಾಗಗಳನ್ನು ಮತ್ತು ಸಾಗಣಿಕೆಗೆ ತಂದಿದ್ದ ಇನ್ನೊಂದು ಬೋಟ್ನ್ನು ವಶವಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಸಂರಕ್ಷಣಾಧಿಕಾರಿಯೇ ಶಾಮೀಲಾಗಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

