ಉತ್ತರ ಕನ್ನಡ

ನಾಳೆ ಪ್ರಶಸ್ತಿ ಪ್ರದಾನ ಸಮಾರಂಭ

Published On :

ಕುಮಟಾ: ಕಲಾಗಂಗೋತ್ರಿ ಆಶ್ರಯದಲ್ಲಿ ಫೆ. 17ರಂದು ಕುಮಟಾದ ಮಹಾತ್ಮಾಗಾಂಧಿ ಮೈದಾನದಲ್ಲಿ ದಿ. ದುರ್ಗಾದಾಸ ಗಂಗೊಳ್ಳಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ.
ಸಂಗ್ಯಾಬಾಳ್ಯಾ ಹಿರಿಯ ಕಲಾವಿದ ಸಹೋದರರಾದ ಕುಮಟಾ ಉಪ್ಪಿನ ಗಣಪತಿಯ ನಾಗಪ್ಪ ಮಾರು ಗೌಡ ಹಾಗೂ ಹುಲಿಯಪ್ಪ ಮಾರು ಗೌಡ ಅವರಿಗೆ ಜಂಟಿಯಾಗಿ ರು. 15 ಸಾವಿರ ನಗದು, ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಸಮಾರಂಭವನ್ನು ಉದ್ಯಮಿ ಶೈಲೇಶ ನಾಯ್ಕ ಉದ್ಘಾಟಿಸಲಿದ್ದಾರೆ. ಕಲಾಗಂಗೋತ್ರಿ ಅಧ್ಯಕ್ಷ ಶ್ರೀಧರ ನಾಯ್ಕ ವಕ್ಕನಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪೆರ್ಡೂರು ಮೇಳದ ಯಜಮಾನ ವೈ. ಕರುಣಾಕರ ಶೆಟ್ಟಿ ಬ್ರಹ್ಮಾವರ, ಉದ್ದಿಮೆದಾರರಾದ ಹರೀಶ ಶೇಟ್, ರವಿಕುಮಾರ ಮೋಹನ ಶೆಟ್ಟಿ, ನಾಗರಾಜ ಸಾರಿಂಗ ನಾಯ್ಕ ಬಸ್ತಿಪೇಟೆ, ಯುವ ಸಂಯುಕ್ತ ಸಂಘದ ಅಧ್ಯಕ್ಷ ಸೂರಜ ನಾಯ್ಕ ಸೋನಿ, ವರ್ತಕರಾದ ರಾಜು ಶೇಟ್, ರವಿ ಶೇಟ್, ಅರುಣ ಶೇಟ್, ವೆಂಕಟೇಶ ನಾಯ್ಕ ಭಾಗವಹಿಸಲಿದ್ದಾರೆ. ಬಳಿಕ ಪೆರ್ಡೂರು ಮೇಳ ಹಾಗೂ ಅತಿಥಿ ಕಲಾವಿದರಿಂದ 'ಬ್ರಹ್ಮಕಪಾಲ' ಹಾಗೂ 'ಮಾಯಾ ಮೃಗಾವತಿ' ಪ್ರಸಂಗಗಳ ಪ್ರದರ್ಶನವಿದೆ. ಅತಿಥಿ ಕಲಾವಿದರಾಗಿ ಅಭಿನಯಿಸಲಿರುವ ಯಕ್ಷಲೋಕದ ತ್ರಿಮೂರ್ತಿಗಳಾದ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ, ರಾಜ್ಯ ಪ್ರಶಸ್ತಿ ಪುರಸ್ಕೃತ ಜಲವಳ್ಳಿ ವೆಂಕಟೇಶ ರಾವ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗೋಡೆ ನಾರಾಯಣ ಹೆಗಡೆ ಅವರನ್ನು ಗೌರವಿಸಲಾಗುವುದು. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.