ಉತ್ತರ ಕನ್ನಡ

ಸಂಗ್ಯಾ ಬಾಳ್ಯಾ ಯಕ್ಷಗಾನ

Published On :

ಯಲ್ಲಾಪುರ:  ತಾಲೂಕಿನ ಬಾಗಿನಕಟ್ಟಾದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ, ವನಸಿರಿ ಕಲಾ ಕೂಟ ಚಿಮ್ನಳ್ಳಿ, ಪ್ರಾಥಮಿಕ ಶಾಲೆ ಬಾಗಿನಕಟ್ಟಾ ಆಶ್ರಯದಲ್ಲಿ ನಾಗಪ್ಪಾ ಸಿದ್ದಿ ಸಂಗಡಿಗರಿಂದ 'ಸಂಗ್ಯಾ ಬಾಳ್ಯಾ' ಯಕ್ಷಗಾನ ಹಾಗೂ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಗ್ರಾಪಂ ಸದಸ್ಯ ವಿ.ಎನ್. ಭಟ್ಟ ನೆಡಿಗೆಮನೆ ಕಾರ್ಯಕ್ರಮ ಉದ್ಘಾಟಿಸಿ, ನಶಿಸುತ್ತಿರುವ ಇಂತಹ ಜಾನಪದ ಕಲೆ ಬೆಳೆಯಬೇಕಾದರೆ ಎಲ್ಲರ ಸಹಕಾರ ಅಗತ್ಯ. ನಾಗಪ್ಪಾ ಸಿದ್ದಿ ಸಂಗಡಿಗರು ಮೂಲ ಕಲೆಗೆ ಧಕ್ಕೆ ಬಾರದೆ ಪ್ರದರ್ಶಿಸುತ್ತಿರುವುದು ವಿಶೇಷವೆಂದರು.
ಅತಿಥಿಗಳಾಗಿ ಜಿ.ಎನ್. ಗಾಂವ್ಕರ ಬೀಗಾರ, ಮಹಾಬಲೇಶ್ವರ ಭಾಗ್ವತ, ರಾಮಕೃಷ್ಣ ಭಟ್ಟ ಬಾಗಿನಕಟ್ಟಾ, ನಾರಾಯಣ ಹೆಗಡೆ ಬೀಗಾರ, ಶಿವಾನಂದ ಸಿದ್ದಿ ಉಪಸ್ಥಿತರಿದ್ದು ಕಲಾವಿದರು ಬೆಳೆಯಬೇಕಾದರೆ ಸಾರ್ವಜನಿಕರ ಸಹಕಾರ ಅಗತ್ಯ ಹಾಗೂ ಇಲಾಖೆ ಕೂಡ ಈ ನಿಟ್ಟಿನಲ್ಲಿ ಕಾರ್ಯ ಕೈಗೊಂಡಿದೆ ಎಂದು ಶುಭ ಹಾರೈಸಿದರು. ಎಸ್‌ಡಿಎಂಸಿ ಅಧ್ಯಕ್ಷ ಸುಬ್ರಮ್ಮಣ್ಯ ಗಾಂವ್ಕರ ಸಭಾಧ್ಯಕ್ಷತೆ ವಹಿಸಿ, ಹಿಂದುಳಿದ ಕುಗ್ರಾಮದಲ್ಲಿ ಇಂತಹ ಕಲೆ ಕುರಿತು ಕಾರ್ಯಕ್ರಮ ನಡೆಸುತ್ತಿರುವುದು ಹೆಮ್ಮೆ. ಕಲೆ ಬೆಳೆಸುವ ಉದ್ದೇಶದಿಂದ ನಾವೆಲ್ಲ ಸಹಕಾರ ನೀಡುತ್ತಾ ಬಂದಿರುತ್ತೇವೆ ಎಂದರು. ಮಹೇಶ ಗಾಂವ್ಕರ ಬಾಗಿನಕಟ್ಟಾ ಸ್ವಾಗತಿಸಿದರು. ಮಹಾಬಲೇಶ್ವರ ಬಾಗಿನಕಟ್ಟಾ ಅಭಿನಂದಿಸಿದರು. ಬಾಗಿನಕಟ್ಟಾ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಭರತನಾಟ್ಯ, ಮಿಮಿಕ್ರಿ, ನಾಟಕ, ಭಜನೆ ಕಾರ್ಯಕ್ರಮಗಳು ಜರುಗಿತು. ನಂತರ ನಾಗಪ್ಪಾ ಸಿದ್ದಿ ಸಂಗಡಿಗರು ನಡೆಸಿದ ಸಂಗ್ಯಾ ಬಾಳ್ಯಾ ಯಕ್ಷಗಾನ ಜನರ ಮನ ತಲುಪುವಲ್ಲಿ ಯಶಸ್ವಿಯಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.