ವಿದ್ಯಾರ್ಥಿಗಳ ಸಾಧನೆ
ಹೊನ್ನಾವರ: ಶಾಂತಿವನ ಟ್ರಸ್ಟ್ ಧರ್ಮಸ್ಥಳ ಇವರು ನಡೆಸಿದ ಜಿಲ್ಲಾಮಟ್ಟದ ಚಿತ್ರಕಲಾ ಸ್ಫರ್ಧೆಯಲ್ಲಿ ಹೊನ್ನಾವರ ನ್ಯೂ ಇಂಗ್ಲಿಷ್ ಶಾಲೆಯ ವಿದ್ಯಾರ್ಥಿ ಆಕಾಶ್ ಪುರುಷನ್ ಪ್ರಥಮ ಸ್ಥಾನ, ನಿತೇಶ್ ಹೆಗಡೆ ಅಣುಕು ಸಂಸತ್ತು ಸ್ಪರ್ಧೆಯಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಸಾದ ನಾಯಕ ಈತನೆ ವಿಷ್ಣು ಬಾಳೇರಿ ಇವರ ಸ್ಮರಣಾರ್ಥ ನಡೆದ ಚದುರಂಗ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಸ್ಪರ್ಧೆಯಲ್ಲಿ ವಿಜೇತರಾದ ಇವರನ್ನು ಶಾಲಾ ಮುಖ್ಯಾಧ್ಯಾಪಕರು, ಶಿಕ್ಷಕ ವೃಂದದವರು ಹಾಗೂ ಎಸ್ಡಿಎಂಸಿಯವರು ಅಭಿನಂದಿಸಿದ್ದಾರೆ.
ಸ್ಮಶಾನ ಆಧುನೀಕರಣ: ಚರ್ಚೆ
ಹಳಿಯಾಳ: ಗುತ್ತಿಗೇರಿ ಗಲ್ಲಿ ಸಮೀಪ ಇದ್ದ ಹಿಂದೂ ಸ್ಮಶಾನ ಭೂಮಿ ತೀರ ಹಳೆಯದಾಗಿದ್ದು, ಅನೇಕ ಸೌಲಭ್ಯಗಳಿಂದ ವಂಚಿತವಾಗಿದೆ. ಈ ಕುರಿತು ಮಂಗಳವಾರ ದೇಶಪಾಂಡೆ ರುಡ್ಸೆಟ್ ಸಭಾಭವನದಲ್ಲಿ ದೇಶಪಾಂಡೆ ನೇತೃತ್ವದಲ್ಲಿ ಸ್ಮಶಾನದ ಆಧುನೀಕರಣದ ಸವಿಸ್ತಾರ ಚರ್ಚೆ ನಡೆಯಿತು. ಬಳಿಕ ದೇಶಪಾಂಡೆ ಮಾತನಾಡಿ, ಹೊನ್ನಾವರ ರೀತಿಯಲ್ಲಿ ಹಳಿಯಾಳ ಸ್ಮಶಾನ ಭೂಮಿ ಸೃಷ್ಟಿಸಬಹುದು. ಹೊನ್ನಾವರದ ಸ್ಮಶಾನ ಭೂಮಿಯಲ್ಲಿ ಒಂದೇ ವೇಳೆಯಲ್ಲಿ ನಾಲ್ಕು ಶವ ಸಂಸ್ಕಾರವನ್ನು ನಡೆಸಬಹುದೆಂದರು. ತಮ್ಮ ವಿಆರ್ಡಿಎಂ ಟ್ರಸ್ಟ್ ವತಿಯಿಂದ ಹಾಗೂ ದಿವಂಗತ ಮಾತೋಶ್ರೀ ಹೆಸರಿನಲ್ಲಿ ಸ್ಮಶಾನದ ಉಪಯೋಗಕ್ಕಾಗಿ ಶವ ಸಾಗಿಸುವ ವಾಹನವೊಂದನ್ನು ನೀಡುವುದಾಗಿ ಘೋಷಿಸಿದರು. ಜಯಂತ ತೆಂಡೂಲ್ಕರ, ಬಂಡು ಬದ್ರಿ, ಡಾ. ಎಸ್.ಎನ್. ದಿವೇಕರ, ಜಿಪಂ ಅಧ್ಯಕ್ಷ ಕೃಷ್ಣಾ ಪಾಟೀಲ, ಪ್ರಸಾದ ಹುಣ್ಸವಾಡಕರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಭಾಸ ಕೊವರ್ಕರ, ಬಿ.ಆರ್. ವಿಭೂತೆ, ಅರುಣ ಕಾಶೀನಾಥ ನಾಯ್ಕ, ಅರವಿಂದ ಫಡ್ನಿಸ್, ದೀಲಿಪ ಫಡ್ನಿಸ್, ಚೇತನ ದೇಸಾಯಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

