18ರಂದು ಪ್ರತಿಭಾ ಪುರಸ್ಕಾರ
ಕುಮಟಾ: ಗ್ರಾಮ ಒಕ್ಕಲಿಗ ಸಮಾಜದ 2011-12ನೇ ಸಾಲಿನ ಪ್ರತಿಭಾ ಪುರಸ್ಕಾರ ಹಾಗೂ ಗ್ರಾಮ ಒಕ್ಕಲು ವಾರ್ಷಿಕ ಸಂಚಿಕೆ ಬಿಡುಗಡೆ ಕಾರ್ಯಕ್ರಮವು ಉಕ ಜಿಲ್ಲಾ ಗ್ರಾಮ ಒಕ್ಕಲಿಗ ನೌಕರರ ಸಂಘ ಕುಮಟಾ, ಬಾಡ ಮತ್ತು ಗುಡೇಕೊಪ್ಪ ಹಳ್ಳಿ ಪಟಗಾರ ಸಮಾಜದ ಒಕ್ಕೂಟಗಳ ಆಶ್ರಯದಲ್ಲಿ ಫೆ. 18ರ ಬೆಳಗ್ಗೆ 10ಕ್ಕೆ ತಾಲೂಕಿನ ಬಾಡ ಶ್ರೀ ಕಾಂಚಿಕಾಂಬಾ ದೇವಸ್ಥಾನ ಗುಡೇಅಂಗಡಿ ಆವರಣದ ದತ್ತ ಮಂದಿರದ ಸಮೀಪದ ವೇದಿಕೆಯಲ್ಲಿ ಜರುಗಲಿದೆ.
ಕಾರ್ಯಕ್ರಮವನ್ನು ಆದಿಚುಂಚನಗಿರಿ ಶಿವಮೊಗ್ಗ ಹಾಗೂ ಕುಮಟಾ ಶಾಖಾಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಉದ್ಘಾಟಿಸಿ, ಸಾನ್ನಿಧ್ಯ ವಹಿಸಲಿದ್ದಾರೆ. ಜಿಲ್ಲಾ ಗ್ರಾಮ ಒಕ್ಕಲಿಗ ನೌಕರರ ಸಂಘದ ಅಧ್ಯಕ್ಷ ಎಂ.ಕೆ. ಪಟಗಾರ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ವಾಣಿಜ್ಯ ಕೈಗಾರಿಕೆ ಮತ್ತು ಗೃಹ ಇಲಾಖೆ ಬೆಂಗಳೂರು ಕಾರ್ಯದರ್ಶಿ ಕೆ. ಅಮರ ನಾರಾಯಣ (ಭಾ.ಆ.ಸೇ.), ಕೇಂದ್ರ ಒಕ್ಕಲಿಗರ ಸಂಘ ಬೆಂಗಳೂರು ನಿರ್ದೇಶಕ ಡಿ.ವಿ. ರಮೇಶ, ನಿವೃತ್ತ ಸುಪರಿಡೆಂಟ್ ಎಂಜಿನಿಯರ್, ಗ್ರಾಮ ಒಕ್ಕಲಿಗ ಸಮುದಾಯ ಭವನ ಕಟ್ಟಡದ ತಾಂತ್ರಿಕ ಸಲಹೆಗಾರ ಅನಂತ ಕೃಷ್ಣಮೂರ್ತಿ ಶಿವಮೊಗ್ಗ, ಜಿಪಂ ಉಪಾಧ್ಯಕ್ಷೆ ಲಲಿತಾ ಪಟಗಾರ, ಬಾಡ ಹಳ್ಳಿ ಪಟಗಾರ ಸಮಾಜದ ಯಜಮಾನ ಹನುಮಂತ ಜೋಗಿ ಪಟಗಾರ, ಗುಡೇಕೊಪ್ಪ ಹಳ್ಳಿ ಪಟಗಾರ ಸಮಾಜದ ಯಜಮಾನ ವೆಂಕಟ್ರಮಣ ಹನಮು ಪಟಗಾರ, ಗ್ರಾಪಂ ಹೊಲನಗದ್ದೆ ಸದಸ್ಯ ಈಶ್ವರ ಎನ್. ಪಟಗಾರ ಗುಡೇಕೊಪ್ಪ, ಬಾಡ ಗ್ರಾಪಂ ಸದಸ್ಯ ದತ್ತ ಎಚ್. ಪಟಗಾರ, ಜ್ಯೇಷ್ಠಪುರ ಇವರು ಆಗಮಿಸಲಿದ್ದಾರೆ.
ಸನ್ಮಾನ: ಈ ಸಂದರ್ಭದಲ್ಲಿ ಜಿಲ್ಲಾ ಗ್ರಾಮ ಒಕ್ಕಲಿಗ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಎಂ.ಡಿ. ಪಟಗಾರ ಪಡುವಣಿ, ಜಿಪಂ ಉಪಾಧ್ಯಕ್ಷೆ ಲಲಿತಾ ಪಟಗಾರ ಕಾಗಾಲ, ಸಚಿವಾಲಯ ಬೆಂಗಳೂರು ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಎಸ್.ಬಿ. ಪಟಗಾರ ಗುಡೇಅಂಗಡಿ, ವಿಧಾನಸೌಧ ಬೆಂಗಳೂರು ಆರ್ಥಿಕ ಇಲಾಖೆ ಶಾಖಾಧಿಕಾರಿ ಡಿ.ಜಿ. ಪಟಗಾರ ಗುಡೇಕೊಪ್ಪ, ಜಿಲ್ಲಾ ಸರ್ವೋತ್ತಮ ಸೇವಾ ಪ್ರಶಸ್ತಿ ಪುರಸ್ಕೃತ ಸಹಾಯಕ ಕೃಷಿ ಅಧಿಕಾರಿ ಸಿ.ಎಂ. ಪಟಗಾರ ಹೊಸ್ಕೇರಿ ಇವರನ್ನು ಸನ್ಮಾನಿಸಲಾಗುವುದು. ಸಮಾಜದ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ, ವಿಶೇಷ ಸಾಧಕರಿಗೆ, ದಾನಿಗಳಿಗೆ, ನಿವೃತ್ತ ನೌಕರರಿಗೆ ಗೌರವಿಸಲಾಗುವುದು. 2011-12ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಶೇ. 85, ಪಿಯುಸಿ ದ್ವಿತೀಯ ಶೇ. 80 ಹಾಗೂ ಪದವಿ ಶೇ. 70 ಅಂಕ ಗಳಿಸಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಅಂಕಪಟ್ಟಿ ಮತ್ತು ಟಿಸಿ ಪ್ರತಿಗಳನ್ನು ಸಲ್ಲಿಸದೇ ಇದ್ದಲ್ಲಿ ಕೂಡಲೇ ಸಲ್ಲಿಸಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಜಿಲ್ಲಾ ಗ್ರಾಮ ಒಕ್ಕಲಿಗ ನೌಕರರ ಸಂಘದ ಅಧ್ಯಕ್ಷ ಎಂ.ಕೆ. ಪಟಗಾರ ಹಾಗೂ ಗ್ರಾಮ ಒಕ್ಕಲು ವಾರ್ಷಿಕ ಸಂಚಿಕೆ ಪ್ರಧಾನ ಸಂಪಾದಕ ಆರ್.ಬಿ. ಪಟಗಾರ ಬರ್ಗಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

