ಉತ್ತರ ಕನ್ನಡ

20, 21ರಂದು ಭಾರತ್ ಬಂದ್

Published On :

ದಾಂಡೇಲಿ:  ರಾಷ್ಟ್ರ ಮಟ್ಟದ 11 ಕಾರ್ಮಿಕ ಸಂಘಟನೆಗಳ ಒಕ್ಕೂಟದಿಂದ ದೇಶದಲ್ಲಿ ಪ್ರಪ್ರಥಮ ಬಾರಿಗೆ ಫೆ. 20, 21ರಂದು ಎರಡು ದಿನಗಳ ಕಾಲ ಭಾರತ ಬಂದ್ ಆಚರಿಸಲಾಗುವುದೆಂದು ಸಿಐಟಿಯುನ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್. ಪ್ರಸನ್ನಕುಮಾರ ತಿಳಿಸಿದರು.
ಅವರು ಈಚೆಗೆ ನಗರದ ಸಿಐಟಿಯು ಕಚೇರಿಯಲ್ಲಿ ಎರಡು ದಿನಗಳ ಭಾರತ ಬಂದ್ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿದೇಶಿ ಬಂಡವಾಳವನ್ನು ದೇಶಿಯ ಚಿಲ್ಲರೆ ವ್ಯಾಪಾರದಲ್ಲಿ ತೊಡಗಿಸುವುದರಿಂದ ಕೆಲ ವರ್ಗದ ಹಾಗೂ ದಿನನಿತ್ಯ ದುಡಿದು ಜೀವಿಸುವ ಮಧ್ಯಮ ವರ್ಗದ ಜನರಿಗೆ ತೊಂದರೆಯಾಗುವುದೆಂದು ನುಡಿದರು. ಎಲ್ಲ ರಂಗಗಳಲ್ಲಿ ವಿದೇಶಿಯರ ಹಣ ಹೂಡಿಕೆಗೆ ದೊರೆಯುತ್ತಿರುವ ಬೆಂಬಲ ನೋಡಿದರೆ ಭವಿಷ್ಯ ನಮ್ಮ ದೇಶ ಮತ್ತೊಮ್ಮೆ ಪರಕೀಯರ ಆಡಳಿತಕ್ಕೆ ಸೋತು ಶರಣಾಗುವ ಭೀತಿ ಉಂಟಾಗಿದೆ. ದೇಶದಲ್ಲಿ ಇದುವರೆಗೆ ಕಾರ್ಮಿಕ ಸಂಘಟನೆಗಳಿಂದ 1982ರಿಂದ 14 ಬಾರಿ ಕೇಂದ್ರ ಸರ್ಕಾರದ ನೀತಿ ವಿರುದ್ಧ ಒಂದು ದಿನದ ಬಂದ್ ಹಾಗೂ ಪ್ರತಿಭಟನೆ ನಡೆಸಲಾಗುತ್ತಿದೆ.
ಗೊಬ್ಬರ ಸಬ್ಸಿಡಿ ಸೌಲಭ್ಯ ಹೆಚ್ಚಿಸಿ: ಸರ್ಕಾರ ದಿನೇದಿನೇ ಡೀಸೆಲ್, ಪೆಟ್ರೋಲ್ ದರವನ್ನು ಏರಿಸುತ್ತಿದೆ. ನೌಕರರ ವೇತನವನ್ನು ಮಾತ್ರ 4 ವರ್ಷಗಳ ನಂತರ ಏರಿಸುವ ಕುರಿತು ಚಿಂತನೆ ಆರಂಭಿಸುತ್ತದೆ. ದೇಶದಲ್ಲಿ 20 ಕೋಟಿ ಚಿಲ್ಲರೆ ವ್ಯಾಪಾರಿಗಳು ಪ್ರಯಾಸದಿಂದ ಬಾಳುತ್ತಿದ್ದಾರೆ. ವಿದೇಶಿ ಬಂಡವಾಳ ಹೂಡಿಕೆ ಇವರನ್ನು ಬೀದಿಪಾಲು ಮಾಡುವುದರಲ್ಲಿ ಸಂಶಯವಿಲ್ಲ ಎಂದರು. ಕಾರ್ಮಿಕರಿಗೆ, ಸರ್ಕಾರಿ ನೌಕರರಿಗೆ ಪಿಂಚಣಿ ಸೌಲಭ್ಯ ಒದಗಿಸುವಲ್ಲಿ ಹಾಗೂ ಅಡುಗೆ ಅನಿಲ ನ್ಯಾಯ ಬೆಲೆ ಅಂಗಡಿ ರೈತರಿಗೆ ಕೊಡುವ ಬೀಜ ಹಾಗೂ ಗೊಬ್ಬರ ಸಬ್ಸಿಡಿ ಸೌಲಭ್ಯವನ್ನು ಹೆಚ್ಚಿಸುವಲ್ಲಿ ಸರ್ಕಾರ ಮುಂದೆ ಬರಬೇಕಾಗಿದೆ ಎಂದರು.
ಎಲ್‌ಐಸಿಯ ಯೂನಿಯನ್ ಆರ್.ಎನ್. ಭಟ್, ಬಿಎಂಎಸ್‌ನ ಶ್ರೀಪಾದ ಭಟ್ ಮಾತನಾಡಿ, ಬಂದ್ ನಿಮಿತ್ತ ಎಲ್ಲ ವ್ಯಾಪಾರದ ಮಳಿಗೆಗಳು, ಬ್ಯಾಂಕ್, ಎಲ್‌ಐಸಿ, ಶಿಕ್ಷಣ ಸಂಸ್ಥೆಗಳು, ಕೆಎಸ್‌ಆರ್‌ಟಿಸಿ ಬಸ್ ಸಂಚಾರಗಳನ್ನು ಎರಡು ದಿನಗಳ ಕಾಲ ಸ್ಥಗಿತಗೊಳಿಸಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.