ಉತ್ತರ ಕನ್ನಡ

ಖೊಟ್ಟಿ ಪಟ್ಟಾ ನೀಡಿ ಮೋಸ

Published On :

ಜೋಯಿಡಾ: ತಾಲೂಕಿನ ರಾಮನಗರದಲ್ಲಿ ಇತ್ತೀಚೆಗೆ ಸ್ಥಳೀಯ ಪಪಂ ಸದಸ್ಯರು ಅಧಿಕಾರಿಗಳ ಮೇಲೆ ಒತ್ತಡ ಹೇರಿ ಖೊಟ್ಟಿ ಪಟ್ಟಾ ವಿತರಣೆ ಮಾಡುವ ಮೂಲಕ ಫಲಾನುಭವಿಗಳಿಗೆ ಮೋಸ ಮಾಡಿರುತ್ತಾರೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ತುಕಾರಾಮ ಮಾಂಜ್ರೇಕರ ಆಪಾದಿಸಿದರು.
ಅವರು ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ರಾಮನಗರ ಗ್ರಾಪಂದಲ್ಲಿ ಬಸವ, ರಾಜೀವಗಾಂಧಿ ವಸತಿ ಯೋಜನೆಯಡಿಯಲ್ಲಿ ಶಾಸಕರ ಪ್ರಯತ್ನದಿಂದ ಮಂಜೂರಿಯಾದ ವಸತಿ ಮನೆಗಳನ್ನು ಜಾಗ್ರತ ಸಮಿತಿಯ ಅನುಮೋದನೆ ಪಡೆಯದೇ ವಿತರಿಸಿದ್ದರಿಂದ ಇದು ಸಿಂಧುವಾಗುವುದಿಲ್ಲ. ಸ್ಥಳೀಯ ಪಪಂ ಪ್ರತಿನಿಧಿಗಳು ಅಧಿಕಾರಿಗಳ ಮೇಲೆ ಒತ್ತಡ ತಂದು 600 ವಸತಿ ಫಲಾನುಭವಿಗಳಿಗೆ ವಿತರಿಸುವ ಮೂಲಕ ಜನತೆಗೆ ಮೋಸಮಾಡಲು ಹೊರಟಿದ್ದಾರೆ ಎಂದು ತುಕಾರಾಮ ಮಾಂಜ್ರೇಕರ್ ದೂರಿದರು.
ಹಣ ಮಂಜೂರಾಗಿಲ್ಲ: ಕಳೆದ ತಿಂಗಳಲ್ಲಿ ಅಖೇತಿ ಪಪಂ ವ್ಯಾಪ್ತಿಯಲ್ಲಿ 300 ಫಲಾನುಭವಿಗಳಿಗೆ ಇದೆ ರೀತಿ ಖೊಟ್ಟಿ ಪಟ್ಟಾ ವಿತರಿಸಿದ್ದು, ಈಗ ಈ ಫಲಾನುಭವಿಗಳು ಮನೆ ನಿರ್ಮಿಸಿಕೊಂಡಿದ್ದು ಹಣ ಮಂಜೂರಾಗದೆ ಪರಿತಪಿಸುತಿದ್ದಾರೆ. ರಾಮನಗರದಲ್ಲಿಯೂ ಇದೆ ಸಮಸ್ಯೆ ಉದ್ಭವಿಸಲಿದೆ ಎಂದು ಇವರು ಹೇಳಿದರು.
ಸುನೀಲ ಹೆಗಡೆಯವರು ತಾಲೂಕು ಜಾಗ್ರತ ಸಮಿತಿಯ ಅಧ್ಯಕ್ಷರಾಗಿದ್ದು, ಆಯಾ ಪಪಂ ವ್ಯಾಪ್ತಿಯ ವಸತಿ ಫಲಾನುಭವಿಗಳ ಯಾದಿಯನ್ನು ಜಾಗ್ರತ ಸಮಿತಿಯ ಸಭೆಯಲ್ಲಿ ಅನುಮೋದನೆ ಪಡೆದು ಪಟ್ಟಾ ವಿತರಿಸ ಬೇಕಿದೆ. 2011-12ನೇ ಸಾಲಿನಲ್ಲಿ ಶಾಸಕ ಸುನೀಲ ಹೆಗಡೆಯವರು ರಾಜೀವ ಗಾಂಧಿ ವಸತಿ ಯೋಜನೆಯಡಿಯಲ್ಲಿ 2000 ಮನೆಗಳನ್ನು ಮಂಜೂರಿ ಮಾಡಿ ತಂದು ವಿತರಿಸಿರುತ್ತಾರೆ.
2012-13ನೇ ಸಾಲಿನಲ್ಲಿಯೂ ಕೂಡ 2000 ಮನೆಗಳನ್ನು ಮಂಜೂರಿ ಮಾಡಿಕೊಂಡು ಬಂದಿರುತ್ತಾರೆ. ಜಾಗ್ರತ ಗ್ರಾಪಂಗಳಿಂದ ಜಾಗ್ರತ ಸಮಿತಿಗೆ ಫಲಾನುಭವಿಗಳ ಯಾದಿ ಬಂದಿರುವುದಿಲ್ಲವಾದರಿಂದ ಇನ್ನೂ ವಿತರಣೆ ಆಗಲಿಲ್ಲವಾಗಿತ್ತು. ಆದರೆ ಈ ನಿಯಮವನ್ನು ಗಾಳಿಗೆ ತೂರಿ ರಾಜಕೀಯ ಲಾಭದ ಉದ್ದೇಶದಿಂದ ಅಧಿಕಾರಿಗಳಿಗೆ ಹೆದರಿಸಿ ಪಟ್ಟಾ ವಿತರಿಸಿದ್ದರಿಂದ ಸಾಮಾನ್ಯ ಜನತೆ ಅನ್ಯಾಯಕ್ಕೊಳಗಾಗಲಿದೆ. ಕಾನೂನುಬಾಹಿರ ವಿತರಿಸುವದರಿಂದ ಜನತೆ ಮೋಸ ಹೋಗಬಾರದೆಂದು ಎಂದು ಈ ಸಂದರ್ಭದಲ್ಲಿ ಫಲಾನುಭವಿಗಳಿಗೆ ಮಾಜ್ರೇಕರ್ ಎಚ್ಚರಿಕೆ ನೀಡಿರುತ್ತಾರೆ.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಕಾರ್ಯದರ್ಶಿ ಅಶೋಕ ದೇಸಾಯಿ, ಉಪಾಧ್ಯಕ್ಷ ಸುಭಾಷ ಮಿರಾಶಿ, ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಶ್ಯಾಮ ಪೋಕಳೆ, ಪ್ರಮುಖರಾದ ಗುಣೊ ಗಾವಡಾ, ದೀಲಿಪ ದೇಸಾಯಿ, ಸಂಬಾಜಿ ಗವಾಳಕರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.