ಸಿಮ್ ವಿತರಣಾ ಶಾಖೆ
ಭಟ್ಕಳ: ದಕ್ಷಿಣ ಭಾರತದಲ್ಲಿ ರೋಮ್-1 ಪ್ರೀಪೇಡ್ ಸಿಮ್ ಕಾರ್ಡ್ ಅಧಿಕೃತ ವಿತರಣಾ ಶಾಖೆಯನ್ನು ಭಟ್ಕಳದಲ್ಲಿ ರೋಮ್-1 ದೂರವಾಣಿ ಸಂಪರ್ಕದ ಅಧ್ಯಕ್ಷರಾದ ಮನ್ಪ್ರಿತ ಸಿಂಗ್ ಬುಧವಾರ ಮಧ್ಯಾಹ್ನ ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು, ರೋಮ್-1 ದೇಶ ವಿದೇಶಗಳಲ್ಲಿ ಒಳಬರುವ ಕರೆಯನ್ನು ಉಚಿತವಾಗಿ ನೀಡುವ ಪ್ರಪ್ರಥಮ ದೂರವಾಣಿ ಸಂಸ್ಥೆಯಾಗಿದ್ದು, ಹೊರ ದೇಶದಲ್ಲಿ ವ್ಯವಹಾರ ಮತ್ತು ಉದ್ಯೋಗ ಹೊಂದಿದವರಿಗೆ ಈ ಸಿಮ್ ಕಾರ್ಡ್ ಅತ್ಯಂತ ಉಪಯುಕ್ತವಾಗಿದೆ. ಇದೊಂದು ನಿರಂತರ ಉಪಯೋಗವಾಗುವ ಸಿಮ್. ಅಂತಾ ರಾಷ್ಟ್ರೀಯ ಮಟ್ಟದ 110 ದೇಶಗಳಲ್ಲಿ ಈ ಸಿಮ್ ಕಾರ್ಡ್ ಉಚಿತವಾಗಿ ರೋಮಿಂಗ್ ಕರೆಯನ್ನು ಹೊಂದಿದ್ದು, ಹೊರ ಹೋಗುವ ಕರೆಯೂ ಅತಿ ಕಡಿಮೆ ದರದಲ್ಲಿ ಲಭ್ಯವಿದೆ. ದೇಶದಲ್ಲಿ 50 ಸಾವಿರ ಗ್ರಾಹಕರ ಸಂಪರ್ಕ ಹೊಂದಿದ್ದು, ಭಾರತ ದೇಶದಲ್ಲಿ ಇನ್ನಷ್ಟು ಗ್ರಾಹಕರನ್ನು ಸೆಳೆಯುವ ಗುರಿ ಹೊಂದಲಾಗಿದೆ ಎಂದರು. ಈ ಸಂದರ್ಭದಲ್ಲಿ ಸುನಿಕೆ ಸ್ಪೋಕ್ನ ನಿರ್ದೇಶಕ ಕೃಷ್ಣ ಹೆಗಡೆ, ರಮೇಶ ಸೊಲ್ಲಾಪುರ, ಭಟ್ಕಳದ ವಿತರಣ ಕೇಂದ್ರದ ಮುಖ್ಯಸ್ಥ ಆನಂದ ಬಾಳಗಿ, ವಿವಿಧ ಭಾಗಗಳಿಂದ ಬಂದ ಸಂಪರ್ಕ ಅಧಿಕಾರಿಗಳು ಉಪಸ್ಥಿತರಿದ್ದರು.
---
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

