ಉತ್ತರ ಕನ್ನಡ

ಸ್ಥಳೀಯ ಕಬ್ಬಿಗೆ ಪ್ರಾಶಸ್ತ್ಯ ನೀಡಿ

Published On :

ಹಳಿಯಾಳ:  ಪ್ಯಾರಿ ಶುಗರ್ಸ್ ಕಂಪನಿಯವರು ಸ್ಥಳೀಯರ ಕಬ್ಬನ್ನು ಪಡೆದು ನಂತರ ಬೇರೆ ಜಿಲ್ಲೆಯ ಕಬ್ಬು ಪಡೆಯುವಂತೆ ಮಾಜಿ ಕೈಗಾರಿಕೆ ಸಚಿವ ಆರ್.ವಿ. ದೇಶಪಾಂಡೆ ಸಲಹೆ ನೀಡಿದ್ದಾರೆ.
ಅವರು ಪಟ್ಟಣದಲ್ಲಿ ಈಚೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಳಿಯಾಳ ಕ್ಷೇತ್ರದ ರೈತರು ಬೆಳೆದ ಕಬ್ಬಿಗೆ ಪ್ರಥಮ ಪ್ರಾಶಸ್ತ್ಯ ನೀಡುವಂತೆ ಆಗ್ರಹಿಸಿದ ಅವರು, ಈ ಕುರಿತು ಈಗಾಗಲೇ ಲಿಖಿತವಾಗಿ ಪ್ಯಾರಿ ಕಂಪನಿಯ ಆಡಳಿತ ಮಂಡಳಿಯ ಗಮನ ಸೆಳೆಯಲಾಗಿದೆ. ಶೇ. 40ಕ್ಕಿಂತಲೂ ಅಧಿಕ ಕ್ಷೇತ್ರದ ಕಬ್ಬು ಬೇರೆ ಕಾರ್ಖಾನೆಗೆ ಸಾಗಿಸಿರುವುದು ದುರದೃಷ್ಟಕರ. ಬೇರೆ ಜಿಲ್ಲೆಯ ಕಬ್ಬು ಪಡೆದು ನುರಿಸಲು ಪ್ಯಾರಿ ಕಂಪನಿಯವರು ಮುಂದಾಗಿರುವ ಕ್ರಮವನ್ನು ಖಂಡಿಸಿದ ಅವರು, ಇದು ಮುಂದುವರಿದರೆ ತಾವು ಹೋರಾಟ ಮಾಡುವುದಾಗಿ ತಿಳಿಸಿದರು. ಪ್ರಸ್ತುತ ಸರ್ಕಾರ ಮೂರು ತುಂಡುಗಳಾಗಿದ್ದು, ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಕ್ಷಣ ರಾಜಿನಾಮೆ ನೀಡಿ ವಿಧಾನಸಭೆಯನ್ನು ವಿಸರ್ಜಿಸಬೇಕು. ರಾಜ್ಯ ಸರ್ಕಾರ ಬಹುಮತ ಕಳೆದುಕೊಂಡಿದ್ದರೂ ಬಜೆಟ್ ಮಂಡಿಸಲು ಮುಂದಾಗಿದ್ದು ಇದು ಕೇವಲ ಬಿಜೆಪಿಯ ಪ್ರಣಾಳಿಕೆಯಾಗುತ್ತದೆ, ಮುಂದೆ ಬರುವ ಸರ್ಕಾರ ಬಜೆಟ್ ಅನುಷ್ಠಾನಗೊಳಿಸಬೇಕಾಗುತ್ತದೆ ಎಂದು ದೇಶಪಾಂಡೆ ಆರೋಪಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಭಾಸ ಕೋವರ್‌ಕರ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.