ಉತ್ತಮ ಹವ್ಯಾಸ ರೂಢಿಸಿಕೊಳ್ಳಿ
ಕಾರವಾರ: ಮನುಷ್ಯ ಮಾನಸಿಕ ಹಾಗೂ ದೈಹಿಕವಾಗಿ ಸದೃಢನಾಗಬೇಕು. ಮಾನಸಿಕ ಪರಿಸ್ಥಿತಿ ಸರಿಯಾಗಿದ್ದರೆ ಎಲ್ಲ ಕಾರ್ಯಗಳು ವ್ಯವಸ್ಥಿತವಾಗಿ ನಡೆಯುತ್ತವೆ ಎಂದು ಜಿಲ್ಲಾ ಸರ್ಕಾರಿ ಆಸ್ಪತ್ರೆ ಮಾನಸಿಕ ತಜ್ಞ ಡಾ. ಮೊಹಮ್ಮದ್ ಖಾಜಾ ಕುತ್ಬುದ್ದೀನ್ ಸಲೀಂ ಅಭಿಪ್ರಾಯ ಪಟ್ಟರು.
ಇಲ್ಲಿನ ಸದಾಶಿವಗಡದ ಆಜಾದ್ ಯೂಥ್ ಕ್ಲಬ್ ಸಭಾಭವನದಲ್ಲಿ ಈಚೆಗೆ ನಡೆದ ಯುವಜನರಿಗಾಗಿ ಹಮ್ಮಿಕೊಂಡ ಒಂದು ದಿನದ ಜೀವನ ಕೌಶಲ್ಯ ಶೈಕ್ಷಣಿಕ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಮಕ್ಕಳು ಜೀವನದಲ್ಲಿ ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಮನುಷ್ಯನಿಗೆ ಎಕಾಗೃತೆ, ಜಾಗೃತಿ ಮತ್ತು ಆಸಕ್ತಿ ಅಗತ್ಯ. ಅಹಂಕಾರವನ್ನು ತ್ಯಜಿಸಿ ಎಲ್ಲ ವಿಚಾರಗಳನ್ನು ಸಕಾರಾತ್ಮಕವಾಗಿ ಯೋಚಿಸಿ ಜೀವನದಲ್ಲಿ ಮುನ್ನಡೆಯಿರಿ ಎಂದು ಹೇಳಿದರು. ಭಾರತೀಯ ರೆಡ್ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಉಪಾಧ್ಯಕ್ಷ ನಜೀರ್ ಅಹಮದ್ ಶೇಖ್, ಯುವ ಜನರು ದೇಶದ ಬೆನ್ನೆಲುಬು. ದೇಶವನ್ನು ಪ್ರಗತಿ ಪಥದತ್ತ ಕೊಂಡೊಯ್ಯಲು ಯುವಜನರಿಗಾಗಿ ಇಂತಹ ಕಾರ್ಯಾಗಾರಗಳನ್ನು ಏರ್ಪಡಿಸಲಾಗುತ್ತಿದ್ದು, ಇದರ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಸಕಾರಾತ್ಮಕ ಆಲೋಚನೆ: ಅಧ್ಯಕ್ಷತೆ ವಹಿಸಿದ್ದ ಶಿವಾಜಿ ಮಹಾವಿದ್ಯಾಲಯದ ಉಪನ್ಯಾಸಕ ಪ್ರೊ. ಎ.ಜಿ. ಕೆರಳೀಕರ್, ಯುವಜನರ ಜೀವನವು ಮುತ್ತಿನಂತೆ ಅಮೂಲ್ಯವಾದುದು. ಆ ಅಮೂಲ್ಯವಾದ ಜೀವನವನ್ನು ಸನ್ಮಾರ್ಗದಲ್ಲಿ ನಡೆದು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದು ನುಡಿದರು. ಉಪನ್ಯಾಸಕರಾಗಿ ಭಾರತೀಯ ರೆಡ್ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯ ಕಾರ್ಯದರ್ಶಿ ಕೆ. ಶಂಭು ಶೆಟ್ಟಿ, ನಾಯಕತ್ವದ ಗುಣಮಟ್ಟ, ಸಂವಹನ, ಅಂತರಿಕ ಹಾಗೂ ವೈಯಕ್ತಿಕ ಬಾಂಧವ್ಯ ಇತ್ಯಾದಿ ವಿಷಯಗಳ ಮಹತ್ವ ತಿಳಿಸಿದರು.
ಇನ್ನೊಬ್ಬ ಉಪನ್ಯಾಸಕ ಲಯನ್ಸ್ ಕ್ಲಬ್ ಸದಾಶಿಗಡದ ಕಾರ್ಯದರ್ಶಿ ಡಾ. ನಯೀಮ್ ಮುಕಾದಮ್, ಸಂದಿಗ್ಧ ಆಲೋಚನೆ ಬಗ್ಗೆ ಜೀವನದಲ್ಲಿ ನಿಖರತೆ ಹಾಗೂ ಸಕಾರಾತ್ಮಕ ಆಲೋಚನೆಗಳು ಇರಬೇಕು. ಉತ್ತಮ ಜೀವನ ರೂಪಿಸಲು ಕ್ರಿಯಾತ್ಮಕ ಆಲೋಚನೆ ಅಗತ್ಯ ಎಂದರು.
ಭಾರತೀಯ ರೆಡ್ಕ್ರಾಸ್ ಸಂಸ್ಥೆ ರಾಜ್ಯ ಆರೋಗ್ಯ ಸೇವೆಗಳ ಉಪಸಮಿತಿ ಸದಸ್ಯೆ ಫೈರೋಜಾ ಬೇಗಂ ಸ್ವಾಗತಿಸಿದರು. ಲಯನ್ಸ್ ಕ್ಲಬ್ ಸದಾಶಿವಗಡದ ಅಧ್ಯಕ್ಷ ಗಣೇಶ ಬಿಷ್ಟಣ್ಣನವರ್ ವಂದಿಸಿದರು. ನೆಹರು ಯುವ ಕೇಂದ್ರದ ಲೆಕ್ಕಾಧಿಕಾರಿ ಮೀರಾ ನಾಯ್ಕ, ಅಝಾದ್ ಯೂಥ್ ಕ್ಲಬ್ನ ಕೋಶಾಧ್ಯಕ್ಷ ಮೊಹಮ್ಮದ್ ಹಸನ್ ಶೇಖ್, ಮೊಹಮ್ಮದ್ ಉಸ್ಮಾನ್ ಶೇಖ್, ಪ್ರೊ. ಜವಾಹರ್ ರಾಣೆ, ಪ್ರಜ್ವಲ್ ನಾಯ್ಕ, ಮೊಹಮ್ಮದ್ ಫೌಜಿ, ಪ್ರತೀಕ ಕಲ್ಗುಟ್ಕರ್, ಕಾಲೇಜು ವಿದ್ಯಾರ್ಥಿಗಳು ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

