ಉತ್ತರ ಕನ್ನಡ

ಇಂದು ವಿದ್ಯುತ್ ವ್ಯತ್ಯಯ

Published On :

ಜೋಯಿಡಾ: ಅಂಬೇವಾಡಿಯ 220 ಕೆವಿ ವಿತರಣಾ ಕೇಂದ್ರದ ವಿದ್ಯುತ್ ಲೈನ್ ತುರ್ತು ರಿಪೇರಿ ಹಿನ್ನೆಲೆಯಲ್ಲಿ ಫೆ. 5ರಂದು ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ ಜೋಯಿಡಾ ತಾಲೂಕಾದ್ಯಂತ ಹಾಗೂ ಅಂಬೇವಾಡಿ, ದಾಂಡೇಲಿ, ಆಲೂರು ಮತ್ತು ಅಂಬಿಕಾನಗರದ ವ್ಯಾಪ್ತಿಯಲ್ಲಿ ವಿದ್ಯುತ್ ಕಡಿತಗೊಳಿಸಲಾಗುತ್ತದೆ ಎಂದು ಹೆಸ್ಕಾಂ ಸಹಾಯಕ ಅಭಿಯಂತರ ಪುರುಷೋತ್ತಮ ಮಲ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
10ರಂದು ವಾಲಿಬಾಲ್ ಪಂದ್ಯ
ಯಲ್ಲಾಪುರ:  ತಾಲೂಕಿನ ಉಚಗೇರಿ-ಚಿಪಗೇರಿಯ ನಂದಿಕೇಶ್ವರ ಸ್ಪೋರ್ಟ್ಸ್ ಕ್ಲಬ್ ಮತ್ತು ಗೆಳೆಯರ ಬಳಗದ ಆಶ್ರಯದಲ್ಲಿ ನಂದಿಕೇಶ್ವರ ಕ್ರೀಡಾಂಗಣದಲ್ಲಿ ಫೆ. 10ರ ಬೆಳಗ್ಗೆ 8.30ಕ್ಕೆ ಮುಕ್ತ ವಾಲಿಬಾಲ್ ಪಂದ್ಯಾವಳಿ ಏರ್ಪಡಿಸಲಾಗಿದೆ. ಜೆಡಿಎಸ್ ಮುಖಂಡ ಡಿ. ಅನಿಲಕುಮಾರ ಪಂದ್ಯಾವಳಿ ಉದ್ಘಾಟಿಸಲಿದ್ದು, ಜಿಪಂ ಸದಸ್ಯ ರಾಘವೇಂದ್ರ ಭಟ್ಟ ಅಧ್ಯಕ್ಷತೆ ವಹಿಸುವರು. ವಿಶೇಷ ಆಹ್ವಾನಿತರಾಗಿ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎಂ. ಹೆಬ್ಬಾರ್ ಪಾಲ್ಗೊಳ್ಳಲಿದ್ದು, ಅತಿಥಿಗಳಾಗಿ ತಾಪಂ ಸದಸ್ಯ ನಟರಾಜ ಗೌಡರ್, ಕುಂದರಗಿ ಗ್ರಾಪಂ ಅಧ್ಯಕ್ಷೆ ಪಾರ್ವತಿ ನಾಯ್ಕ, ಉಪಾಧ್ಯಕ್ಷೆ ರಾಧಾ ದೇವಡಿಗ, ಗ್ರಾಪಂ ಸದಸ್ಯರಾದ ನಾರಾಯಣ ಚಿಪಗೇರಿ, ಶೇಖರ ನಾಯ್ಕ, ಗಣೇಶ ಹೆಗಡೆ, ಗಂಗೂಬಾಯಿ ಲಾಂಬೋರ್, ನಾಗವೇಣಿ ನಾಯ್ಕ, ಅರಣ್ಯ ಇಲಾಖೆಯ ಸುರೇಶ ರಾಠೋಡ, ಗ್ರಾಮದ ಪ್ರಮುಖರಾದ ಎಂ.ಎನ್. ಹೆಗಡೆ, ಹರಿಹರ ಹೆಗಡೆ, ಶಾಂತಾರಾಮ ಹೆಗಡೆ, ಎಂ.ಕೆ. ಹೆಗಡೆ, ಬಾಬು ಶೇರೂಗಾರ, ದೇವರು ಭಟ್ಟ ಪಾಲ್ಗೊಳಿದ್ದಾರೆ.

ಹುಲಿಗೆ ಆಕಳು, ಕರು ಬಲಿ
ಜೋಯಿಡಾ: ತಾಲೂಕಿನ ಹುಲಿಯೋಜನಾ ವ್ಯಾಪ್ತಿಗೆ ಬರುವ ಅವುಲರ್ ಗ್ರಾಮದಲ್ಲಿ ಹುಲಿಯೊಂದು ಆಕಳು ಮತ್ತು ಕರುವನ್ನು ಕೊಂದು ತಿಂದಿರುವ ಘಟನೆ  ಸೋಮವಾರ ಬೆಳಗ್ಗೆ ನಡೆದಿದೆ. ಅವುಲರ್ ಗ್ರಾಮದ ಕೃಷ್ಣ ಭಾಗ್ವತ್ ಎನ್ನುವವರ ಆಕಳು ಹಾಗೂ ಅದರ ಎರಡು ವರ್ಷದ ಕರು ಹುಲಿಗೆ ಬಲಿಯಾಗಿದೆ. ಅವುಲರ್ ವಲಯ ವ್ಯಾಪ್ತಿಯ ಪೋಟೊಲಿ-ಗುಂದ ಮುಖ್ಯ ರಸ್ತೆಯಲ್ಲಿಯೇ ಈ ಘಟನೆ ಜರುಗಿದೆ. ವಿರ್ನೋಲಿ ವಲಯಕ್ಕೆ ಸಂಬಂಧಿಸಿದ ಈ ಅರಣ್ಯದಲ್ಲಿ ಇತ್ತೀಚೆಗೆ ಹುಲಿ ಉಪಟಳ ಹೆಚ್ಚಾಗಿದ್ದು ರೈತರನ್ನು ಆತಂಕಕೀಡುಮಾಡಿದೆ. ಅರಣ್ಯ ಇಲಾಖೆ ನೀಡುತ್ತಿರುವ ಪರಿಹಾರ ಅಲ್ಪವಾಗಿದ್ದು, ರೈತರ ಹಿತದೃಷ್ಟಿಯಿಂದ ನಷ್ಟ ಪರಿಹಾರದಲ್ಲಿ ಅನುಕೂಲಕರವಾಗಿರುವಂತೆ ಪರಿಗಣಿಸಬೇಕಿದೆ ಎನ್ನುವದು ಇಲ್ಲಿನ ರೈತರ ಆಗ್ರಹವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.