ಉತ್ತರ ಕನ್ನಡ

ಪೀಠಾರೋಹಣ ಮಹೋತ್ಸವಕ್ಕೆ ಸಿದ್ಧತೆ

Published On :

ಹಗರಿಬೊಮ್ಮನಹಳ್ಳಿ:  ಪಟ್ಟಣದಲ್ಲಿ ಫೆ. 14ರಿಂದ 18ರ ವರೆಗೆ ಜರುಗುವ ವೀರಶೈವ ಪಂಚಮಸಾಲಿ ಸಮಾಜದ ಹರಿಹರ ಪೀಠದ ಜಗದ್ಗುರುಗಳ 5ನೇ ವರ್ಷದ ಪೀಠಾರೋಹಣ ಮಹೋತ್ಸವವನ್ನು ನಾಡಿನ ಜನೋತ್ಸವದಂತೆ ಸಂಘಟಿಸುವ ಮೂಲಕ ಮಾದರಿ ಮಹೋತ್ಸವವನ್ನಾಗಿ ಆಚರಿಸಲು ಸಕಲ ಸಿದ್ಧತೆ ಕೈಗೊಂಡಿದೆ ಎಂದು ಸಮಾಜದ ಮುಖಂಡ ಬಾವಿ ಬೆಟ್ಟಪ್ಪ ತಿಳಿಸಿದರು.
ಭಾನುವಾರ ಬೆಳಗ್ಗೆ ಪಟ್ಟಣದ ಕೆಚ್ಚಿನಬಂಡಿ ರಸ್ತೆಯಲ್ಲಿ 5 ದಿನ ಜರುಗುವ ಪೀಠಾರೋಹಣ ಮಹೋತ್ಸವದ ಮುಖ್ಯವೇದಿಕೆ ಮುಂತಾದ ಕಾಮಗಾರಿಗಳ ಭೂಮಿಪೂಜೆ ನೇರವೇರಿಸಿದ ಬಳಿಕ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ನಾಡಿನ ವಿವಿಧೆಡೆಯ ಸಮಾಜದ ಲಕ್ಷಾಂತರ ಬಾಂಧವರು ಭಾಗವಹಿಸುತ್ತಾರೆ. ಅವರಿಗೆಲ್ಲ ಕುಡಿಯುವ ನೀರು, ಊಟ, ವಸತಿ ಇತ್ಯಾದಿ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಅವರು ವಿವರಿಸಿದರು.
12 ಎಕರೆ ಜಾಗದಲ್ಲಿ ಜರುಗುವ ಈ ಕಾರ್ಯಕ್ರಮದ ಮುಖ್ಯ ವೇದಿಕೆಯನ್ನು 140 ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗುತ್ತಿದೆ. ವೇದಿಕೆಯಲ್ಲಿ 150 ಗಣ್ಯರಿಗೆ, ಕೆಳಗೆ 50 ಸಾವಿರ ಜನ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆಯುಳ್ಳ ಬೃಹತ್ ಪೆಂಡಾಲ್ ಹಾಕಲಾಗುತ್ತದೆ. ಮುಖ್ಯವೇದಿಕೆ ಸುತ್ತಲಿನ ಪ್ರದೇಶದಲ್ಲೇ ಊಟದ ಕೌಂಟರ್‌ಗಳನ್ನು ತೆರೆಯುವುದಾಗಿ ತಿಳಿಸಿದರು.
ಫೆ. 14ರಂದು ಹರದೇವಸ್ಥಾನ ಕಳಸರೋಹಣ, ನೇತ್ರ ಶಸ್ತ್ರಚಿಕಿತ್ಸೆ, ಕೃಷಿ ಮೇಳ,ನಗೆ ಹಬ್ಬ, ಪವಾಡ ಬಯಲು ಕಾರ್ಯಕ್ರಮ. ಫೆ. 15ರಂದು ಪಂಚಮಸಾಲಿ ಸಮಾಜದ ಸಾಮೂಹಿಕ ವಿವಾಹ, ಸಂಗೀತ, ನಗೆಹಬ್ಬ. ಫೆ. 16ರಂದು ಸಮಾಜದವರಿಗಾಗಿ ರೊಟ್ಟಿ ತಿನ್ನುವ ಸ್ಪರ್ಧೆ, ಜಾದೂ ಪ್ರದರ್ಶನ, ಮಕ್ಕಳ ಸಮಾವೇಶ, ನಗೆಹಬ್ಬ.
ಫೆ. 17ರಂದು ರೈತ ಗೋಷ್ಠಿ, ಕರ್ನಾಟಕ ರಾಜಕೀಯ ಚಿತ್ತ ಎತ್ತ? ಭಾವೈಕ್ಯತಾ ಗೋಷ್ಠಿ, ರಂಗೋಲಿ ಸ್ಪರ್ಧೆ. ಫೆ. 18ರಂದು 2008 ಕುಂಭಮೇಳ, ಪೀಠಾರೋಹಣ ಮಹೋತ್ಸವ, ಹರದೇವಸ್ಥಾನ, ಅನಾಥಮಕ್ಕಳ ವಸತಿ ನಿಲಯ, ನೀರಿನ ಟ್ಯಾಂಕ್, ಆಡಳಿತ ಕಚೇರಿ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ ಎಂದರು ತಿಳಿಸಿದರು.
ಪಂಚಮಸಾಲಿ ಗುರುಪೀಠದ ಪೀಠಾಧ್ಯಕ್ಷ ಸಿದ್ಧಲಿಂಗ ಶ್ರೀ ಸಾನ್ನಿಧ್ಯ ವಹಿಸಿದ್ದರು.
ಸಮಾಜದ ತಾಲೂಕಾಧ್ಯಕ್ಷ ಅಕ್ಕಿ ಶಿವಣ್ಣ, ಯುವ ಘಟಕದ ರಾಜ್ಯಾಧ್ಯಕ್ಷ ಹನಸಿ ಸಿದ್ಧೇಶ್, ತಾಲೂಕಾಧ್ಯಕ್ಷ ಬ್ಯಾಡಗಿ ರಾಜೇಶ, ಪ್ರಧಾನ ಕಾರ್ಯದರ್ಶಿ ಉಪ್ಪಾರಗಟ್ಟಿ ವೀರನಗೌಡ, ಪಂಚಮಸಾಲಿ ಸಹಕಾರಿ ಸೌಹಾರ್ದ ಬ್ಯಾಂಕಿನ ನಿರ್ದೇಶಕ ಎಚ್.ಪಿ. ಶಿವಶಂಕರಗೌಡ, ನೌಕರ ಸಂಘದ ಮೆಣಸಿಗಿ, ರವಿ, ಭದ್ರವಾಡಿ ವಿನಯ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.