ಉತ್ತರ ಕನ್ನಡ

6ರಿಂದ ಕುಮಟಾ ಉತ್ಸವ

Published On :




ಕುಮಟಾ:  ತಾಲೂಕಿನ ಜನತೆಯ ನೆಚ್ಚಿನ ಮನರಂಜನಾ ಹಾಗೂ ಸಾಂಸ್ಕೃತಿಕ ಉತ್ಸವ, ಅದ್ಭುತ ಕಾರ್ಯಕ್ರಮಗಳ ಸಮ್ಮಿಲನವಾಗಿರುವ 5 ದಿನಗಳ ಕುಮಟಾ ಉತ್ಸವ ಫೆ. 6ರಿಂದ 10ರ ವರೆಗೆ ಮಣಕಿ ಮೈದಾನದಲ್ಲಿ ಜರುಗಲಿದೆ ಎಂದು ಉತ್ಸವ ಸಮಿತಿ ಅಧ್ಯಕ್ಷ ರವಿಕುಮಾರ ಮೋಹನ ಶೆಟ್ಟಿ ಹೇಳಿದರು.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕುಮಟಾ ಉತ್ಸವದ 5 ದಿನಗಳಲ್ಲಿ ಪ್ರತಿದಿನವೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಪ್ರಥಮ ದಿನ ಕೇರಳದ ನೃತ್ಯ ರೂಪ, ಚಂಡೆ ನೃತ್ಯ, ಎರಡನೇ ದಿನ ಮಂಗಳೂರು-ಬೆಂಗಳೂರಿನ ಗುರುಕಿರಣ್ ಅವರ ಗರಡಿಯಲ್ಲಿ ಪಳಗಿದವರಿಂದ ಆರ್ಕೆಸ್ಟ್ರಾ, ಮೂರನೇ ದಿನ ಮಂಗಳೂರಿನ ಭಾರ್ಗವಿ ಡ್ಯಾನ್ಸ್‌ಗ್ರೂಪ್ ಅವರಿಂದ ಜಿಮ್ನಾಸ್ಟಿಕ್ ಹಾಗೂ ಮೂರು ಮುತ್ತುಗಳು ಎಂಬ ನಾಟಕ, ನಾಲ್ಕನೇ ದಿನ ನಾಗಶ್ರೀ ಮತ್ತು ಅರ್ಪಿತ ತಂಡದಿಂದ ಒಂದುವರೆ ಗಂಟೆಗಳ ಕಾಲ ಹಾಸ್ಯಭರಿತ ಯಕ್ಷಗಾನ ಮತ್ತು ಮಾತನಾಡುವ ಬೊಂಬೆ ಖ್ಯಾತಿಯ ಇಂದುಶ್ರೀ ಅವರ ಕಾರ್ಯಕ್ರಮ ಹಾಗೂ ಜಾದೂ. ಐದನೇ ದಿನದಂದು ಡ್ಯಾನ್ಸ್ ಧಮಾಕಾ ಕಾರ್ಯಕ್ರಮ ಜರುಗಲಿದೆ.
ಡ್ಯಾನ್ಸ್ ಧಮಾಕಾ: ಫೆ. 10ರಂದು ಕುಮಟಾ ಉತ್ಸವ ಹಾಗೂ ರವಿರಾಜ ಸ್ಪೋರ್ಟ್ಸ್ ಕ್ಲಬ್ ಇವರು ಆಯೋಜಿಸುವ 3 ನೇ ವರ್ಷದ ರಾಜ್ಯಮಟ್ಟದ ಡ್ಯಾನ್ಸ್ ಧಮಾಕಾ ನೃತ್ಯ ಸ್ಪರ್ಧೆ ಏರ್ಪಡಲಿದ್ದು, ಸ್ಪರ್ಧೆಯ ಮೊದಲ ಸುತ್ತಿನ ಆಯ್ಕೆ ಫೆ. 3ರ ಬೆಳಗ್ಗೆ 9ಕ್ಕೆ ತಾಲೂಕಿನ ಹೆಗಡೆ ಕ್ರಾಸ್‌ನ ನಾದಶ್ರೀ ಕಲಾಕೇಂದ್ರದಲ್ಲಿ ನಡೆಯಲಿದೆ. ಸ್ಪರ್ಧಾಳುಗಳು ಮುಂಗಡವಾಗಿ ಹೆಸರನ್ನು ಸಂಘಟಕರಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು. ಆನಂತರ ಯೋಗೀಶ್ ಕಾಮತ್ ಮಾತನಾಡಿ, ಫೆ. 9ರಂದು ರೋಟ್ರಾಕ್ಟ್ ಕ್ಲಬ್ ಕುಮಟಾ ಮತ್ತು ಕುಮಟಾ ಉತ್ಸವ ಸಮಿತಿಯ ಆಶ್ರಯದಲ್ಲಿ ಗೋಗ್ರೀನ್ ಆಯೋಜಿಸಿರುವ 5 ಕಿ.ಮೀ. ವರೆಗೆ ಮ್ಯಾರಥಾನ್ ನಡೆಯಲಿದೆ ಎಂದರು. ಮ್ಯಾರಾಥಾನ್ ಓಟವು ತಾಲೂಕಿನ ನಾದಶ್ರೀ ಕಲಾಕೇಂದ್ರದಿಂದ ಚಾಲನೆ ಹೊಂದಿ ಮಾಸ್ತಿಕಟ್ಟೆ, ಬಸ್ತಿಪೇಟೆ, ರಥಬೀದಿ, ಸುಭಾಷ್ ರಸ್ತೆ ಮುಖಾಂತರ ಮಣಕಿಗೌಂಡವರೆಗೆ ತಲುಪುದಾಗಿದ್ದು, ಇದರಲ್ಲಿ ಪಾಲ್ಗೊಳ್ಳುವವರು ಫೆ. 7ರೊಳಗಾಗಿ ಅರ್ಜಿ ಸಲ್ಲಿಸಬಹುದು ಎಂದು ನುಡಿದರು. ಸುದ್ದಿಗೋಷ್ಠಿಯಲ್ಲಿ ಶಂಕರಮೂರ್ತಿ ಶಾಸ್ತ್ರಿ, ಕೃಷ್ಣಾನಂದ ವೆರ್ಣೆಕರ್, ಚೇತನ ಶೇಟ್, ಗಣಪತಿ ಶೆಟ್ಟಿ, ಅಮರನಾಥ ಶೆಟ್ಟಿ, ಗಣೇಶ ನಾಯ್ಕ, ಶ್ರೀಧರ ಶೆಟ್ಟಿ, ಶ್ರೀಧರ ನಾಯ್ಕ, ಗಣೇಶ ಭಟ್ಟ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.