ಉತ್ತರ ಕನ್ನಡ

ನಾಳೆ ಆರೋಗ್ಯ ದೀಕ್ಷೆ

Published On :


ಹೊನ್ನಾವರ:  ಶ್ರೀ ಅಮ್ಮಾ ಭಗವಾನ್ ಸೇವಾ ಸಮಿತಿ ಆಶ್ರಯದಲ್ಲಿ ಹೊನ್ನಾವರದಲ್ಲಿ ಫೆ. 3ರಂದು ಆರೋಗ್ಯ ದೀಕ್ಷೆ ಹಾಗೂ ಕಳಸಪೂಜೆ ನಡೆಯಲಿದೆ. ಪ್ರಪಂಚದ 163 ದೇಶಗಳಲ್ಲಿ ಲಕ್ಷಾಂತರ ಜನರಿಗೆ ಮಾನಸಿಕ, ದೈಹಿಕ ಹಾಗೂ ಆಧ್ಮಾತ್ಮಿಕ ಆರೋಗ್ಯವನ್ನು ಪ್ರಸಾದಿಸಿ ಜೀವನ್ಮುಕ್ತಿ ನೀಡುತ್ತಿರುವ ಅಮ್ಮ ಭಗವಾನರು ಫೆ. 3ರಂದು ಸಂಜೆ 5 ಗಂಟೆಗೆ ಇಲ್ಲಿನ ಸೇಂಟ್ ಥಾಮಸ್ ಮೈದಾನದಲ್ಲಿ ಈ ಕಾರ್ಯಕ್ರಮ ಸಂಕಲ್ಪಿಸಿದ್ದಾರೆ. ಅಮ್ಮ ಭಗವಾನರ ಶಿಷ್ಯೆ ಪವಿತ್ರಾ ದಾಸಾಜಿ ಅವರು ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಈ ಕಾರ್ಯಕ್ರಮ ನಡೆಯಲಿದ್ದು, 10 ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಳ್ಳಲಿದ್ದಾರೆ ಎಂದು ಸೇವಾ ಸಮಿತಿ ತಿಳಿಸಿದೆ.
4ರಂದು ತಮಟೆ ಚಳವಳಿ
ಕಾರವಾರ: ಕರ್ನಾಟಕ ದಲಿತ ರಕ್ಷಣಾ ವೇದಿಕೆ, ಕಾರವಾರ ಜಿಲ್ಲಾ ಘಟಕ  ದಲಿತರ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಫೆ. 4ರಂದು ತಮಟೆ ಚಳವಳಿ ಹಮ್ಮಿಕೊಂಡಿದೆ.  ಬೆಳಗ್ಗೆ 10.30ಕ್ಕೆ ನಗರದ ಮಿತ್ರಸಮಾಜದಿಂದ ರ್ಯಾಲಿ ಹೊರಡಲಿದ್ದು ನಗರದ ಸುಭಾಷ್ ಸರ್ಕಲ್, ಸವಿತಾ ಸರ್ಕಲ್, ಬಿಎಸ್‌ಎನ್‌ಎಲ್ ವೃತ್ತಗಳ ಮೂಲಕ ಸಂಚರಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದೇವೆ ಎಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಲಿಷಾ ಜಿ. ಎಲಕಪಾಟಿ   ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.