ತುಮಕೂರು

ಕ್ರಷರ್ ಲಾರಿ ತಡೆದು ಪ್ರತಿಭಟನೆ

Published On :

ಕುಣಿಗಲ್: ಗ್ರಾಮದ ಮಧ್ಯಭಾಗದಲ್ಲಿ ಹಾದುಹೋಗಿದ್ದ ಮುಖ್ಯರಸ್ತೆಯಲ್ಲಿ ಅಧಿಕ ಭಾರದ ಕ್ರಷರ್ ಲಾರಿಗಳ ಸಂಚಾರದಿಂದ ಗ್ರಾಮದ ವಿವಿಧೆಡೆ ನೀರು ಪೂರೈಸುವ ಕೊಳವೆಗಳು ಜಖಂಗೊಂಡು, ಹಲವು ಬಾರಿ ದುರಸ್ತಿ ಮಾಡಿ ಬೇಸತ್ತ ಗ್ರಾಮಸ್ಥರು ಮಂಗಳವಾರ ಕ್ರಷರ್ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ತಾಲೂಕಿನ ಕಸಬಾ ಹೋಬಳಿಯ ಟಿ. ಹೊಸಹಳ್ಳಿ ಗ್ರಾಪಂ ವ್ಯಾಪ್ತಿಯ ಗಿರಿಗೌಡನಪಾಳ್ಯ, ಸಾಲಂತ್ರಿಪಾಳ್ಯದ ಕಾಲೋನಿಗಳ ಮಧ್ಯಭಾಗದಲ್ಲಿ ಗ್ರಾಮಾಂತರ ಸಂಪರ್ಕ ರಸ್ತೆ ಹಾದುಹೋಗಿದ್ದು, ರಸ್ತೆ ಇಕ್ಕೆಲಗಳಲ್ಲಿ ಗ್ರಾಮಗಳ ಇನ್ನರಕ್ಕೂ ಹೆಚ್ಚು ಮನೆಗಳಿಗೆ ಗ್ರಾಪಂ ಕುಡಿಯುವ ನೀರು ಪೂರೈಸುವ ಕೊಳವೆ ಅಳವಡಿಸಿದೆ. ಗ್ರಾಮದಿಂದ ಕೆಲವೆ ಕಿಮಿ ದೂರದ ತರೀಕೆರೆಯ ಕ್ರಷರ್‌ಗಳಿಂದ ದಿನವೂಂದಕ್ಕೆ 200ಕ್ಕೂ ಹೆಚ್ಚು ಆಧಿಕ ಭಾರ ಹೊತ್ತ ಜಲ್ಲಿ ತುಂಬಿದ ಲಾರಿಗಳ ಸಂಚಾರದಿಂದ ನೀರು ಪೂರೈಕೆ ಪೈಪ್ಗಳು ಒಡೆದು ಗ್ರಾಮಕ್ಕೆ ನೀರು ಸರಬರಾಜು ವ್ಯತ್ಯಯವಾಗಿ ಗ್ರಾಮಸ್ಥರು ಪರದಾಡುವಂತಾಯಿತು. ಈಬಗ್ಗೆ ಗ್ರಾಪಂಗೆ ದೂರಿದ್ದರ ಹಿನ್ನೆಲೆಯಲ್ಲಿ ಗ್ರಾಪಂ ಕೇವಲ ಎರಡು ಬಾರಿ ದುರಸ್ತಿಮಾಡಿದ್ದು, ದಿನ ಪೈಪ್‌ಗಳು ಜಖಂಗೊಂಡ ಕಾರಣ ಗ್ರಾಪಂ ದುರಸ್ತಿಮಾಡುವುದನ್ನು ಕೈಬಿಟ್ಟು ಕ್ರಷರ್ ಮಾಲೀಕರಿಗೆ ನೋಟಿಸ್ ಜಾರಿ ಮಾಡಿತ್ತು.
ಇದರಿಂದ ರೋಸಿಹೋದ ಗ್ರಾಮದ ಚಿಕ್ಕ ರಾಮಣ್ಣ, ರವಿಕುಮಾರ್, ವೆಂಕಟೇಶ್, ಕೃಷ್ಣಪ್ಪ, ನಂಜೇಶ, ಎಲ್ಲಮ್ಮ, ಗೌರಮ್ಮ ಇತರರು ಮಂಗಳವಾರ ಗ್ರಾಮದ ಮುಖ್ಯರಸ್ತೆಯಲ್ಲಿ ಸಂಚರಿಸುತ್ತಿದ್ದ ಕ್ರಷರ್ ಲಾರಿಗಳನ್ನು ತಡೆದು, ಪೈಪ್ ಸುರಕ್ಷತೆಗೆ ಶಾಶ್ವತ ಕ್ರಮ ಕೈಗೊಳ್ಳದೆ ಕ್ರಷರ್ ಲಾರಿ ಸಂಚರಿಸಲು ಬಿಡುವುದಿಲ್ಲವೆಂದು ಪಟ್ಟುಹಿಡಿದರು. ಗ್ರಾಮಸ್ಥರ ಪ್ರತಿಭಟನೆಗೆ ಮಣಿದ ಕ್ರಷರ್ ಕಂಪನಿ ವ್ವಸ್ಥಾಪಕ ನಾರಾಯಣ್ ಸ್ಥಳಕ್ಕಾಗಮಿಸಿ, ಜಖಂಗೊಂಡಿರುವ ನೀರು ಪೂರೈಕೆ ಪೈಪ್‌ಗಳನ್ನು ದುರಸ್ತಿಗೊಳಿಸಿ, ಮುಂದೆ ನೀರುಪೂರೈಕೆ ಪೈಪ್‌ಗೆ ಧಕ್ಕೆಯಾಗದ ರೀತಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಹಿಂಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.