ಕೈಗಾರಿಕೆ ಸ್ಥಾಪಿಸಿ
ತುಮಕೂರು,: ದೇಶದಲ್ಲಿ ಹೆಚ್ಚು ಉದ್ಯೋಗಗಳನ್ನು ನೀಡಿದ್ದ ಕೃಷಿ ವಲಯ ಸರ್ಕಾರದ ಜನವಿರೋಧಿ ನೀತಿಗಳಿಂದ ವಿನಾಶದ ಹಾದಿ ಹಿಡಿದಿದೆ ಎಂದು ಸಿಡಬ್ಲ್ಯೂಎಫ್ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಉಮೇಶ್ ವಿಷಾದಿಸಿದರು.
ನಗರ ಕೇಂದ್ರಿತ ಅಭಿವೃದ್ಧಿಯಿಂದ ಜನರು ಉದ್ಯೋಗಕ್ಕಾಗಿ ನಗರದತ್ತ ವಲಸೆ ಹೋಗುತ್ತಿದ್ದಾರೆ. ಇದನ್ನು ತಪ್ಪಿಸಲು ಕೃಷಿಗೆ ಪೂರಕ ಕೈಗಾರಿಕೆಗಳನ್ನು ಸರ್ಕಾರ ಸ್ಥಾಪಿಸಿದರೆ ಮಾತ್ರ ಜನರ ಆದಾಯದಲ್ಲಿ ಹೆಚ್ಚಳ, ಉದ್ಯೋಗ ಸೃಷ್ಟಿ, ಮತ್ತು ಅಭಿವೃದ್ಧಿಯನ್ನು ದೇಶದಲ್ಲಿ ಸಾಧಿಸಲು ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗುತ್ತಿಗೆದಾರ ಎಂ.ಟಿ. ದೇವರಾಜು ಮತ್ತು ಷಣ್ಮುಖಸ್ವಾಮಿ ಕಾರ್ಮಿಕರಿಗೆ ಗುರುತು ಚೀಟಿ ವಿತರಿಸಿದರು. ಸಿ.ಡಬ್ಲ್ಯೂ.ಎಫ್.ಐ ರಾಜ್ಯ ಉಪಾಧ್ಯಕ್ಷ ಶ್ರೀಧರ್, ಅಂಗನವಾಡಿ ಸಂಘಟನೆಯ ತಾಲೂಕು ಅಧ್ಯಕ್ಷೆ ವಸಂತಕುಮಾರಿ, ಕಟ್ಟಡ ಕಾರ್ಮಿಕ ಸಂಘಟನೆಯ ಮುಖಂಡರಾದ ಮಲ್ಲೇಶಯ್ಯ, ಗಂಗಣ್ಣ, ಬಿ.ಕೆ. ಶಿವರಾಜ್, ಅಕ್ಷರ ದಾಸೋಹ ನೌಕರರ ಮುಖಂಡರಾದ ಸಿದ್ದಗಂಗಮ್ಮ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪದಾಧಿಕಾರಿಗಳ ಆಯ್ಕೆ: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಫೆಡರೇಷನ್ ಸಂಪಿಗೆ ಗ್ರಾಮ ಪಂಚಾಯಿತಿ ಶಾಖೆಗೆ ಅಧ್ಯಕ್ಷರಾಗಿ ಶಂಕರಪ್ಪ, ಕಾರ್ಯದರ್ಶಿಯಾಗಿ ಬಿ.ಕೆ.ಶಿವರಾಜು, ಖಜಾಂಚಿಯಾಗಿ ವೇದಮೂರ್ತಿ, ಉಪಾಧ್ಯಕ್ಷರಾಗಿ ತಿಮ್ಮಯ್ಯ, ಆನಂದ್, ಮೋಹನ್ ಕುಮಾರ್, ನಾಗರಾಜ್, ಸಹಕಾರ್ಯದರ್ಶಿಗಳಾಗಿ, ಸುರೇಶ್, ನಂದೀಶ್ ಎಂ.ಎಸ್, ರಮೇಶ್ ಎ.ಟಿ. ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

