ದೊಂಬಿದಾಸರ ಕಡೆಗಣನೆ: ಆರೋಪ
ತುಮಕೂರು: ಸಂಖ್ಯೆಯಲ್ಲಿ ವಿರಳವಾಗಿರುವ ದೊಂಬಿದಾಸರನ್ನು ಎಲ್ಲ ರಾಜಕೀಯ ಪಕ್ಷಗಳು ಕಡೆಗಣಿಸುತ್ತಿವೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸಾಧನ ರವಿಕುಮಾರ್ ಆತಂಕ ವ್ಯಕ್ತಪಡಿಸಿದರು.
ತುಮಕೂರಿನಲ್ಲಿ ನಡೆದ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ದೊಂಬಿದಾಸರು ಜೀವನೋಪಾಯಕ್ಕಾಗಿ ಅಲೆಮಾರಿಗಳಾಗಿದ್ದಾರೆ. ಹೀಗಾಗಿ ಮತಪಟ್ಟಿಯಲ್ಲೂ ಸಂಪೂರ್ಣವಾಗಿ ಸೇರ್ಪಡೆಯಾಗಿಲ್ಲ. ಮತ ಬ್ಯಾಂಕ್ ರಾಜಕಾರಣವನ್ನೇ ಮೂಲ ಮಂತ್ರವಾಗಿಸಿಕೊಂಡಿರುವ ರಾಜಕೀಯ ಪಕ್ಷಗಳು ದೊಂಬಿದಾಸರನ್ನು ಕಡೆಗಣಿಸಿವೆ. ಸರ್ಕಾರದ ಯೋಜನೆಗಳು ದೊಂಬಿದಾಸರಿಗೆ ಗಗನಕುಸುಮಗಳಾಗಿವೆ ಎಂದರು. ಜಿಲ್ಲಾಧ್ಯಕ್ಷೆ ಜಯಲಕ್ಷ್ಮಿ ಮಾತನಾಡಿ, ತುಮಕೂರು ನಗರ ಸಮುದಾಯದವರಿಗೆ ಹೃದಯಭಾಗವಾಗಿದೆ. ಇಲ್ಲಿ ಸಭೆಗಳನ್ನು ನಡೆಸಲು ಸ್ವಂತ ಕಟ್ಟಡವಿಲ್ಲದಿರುವುದರಿಂದ ಪ್ರತಿಯೊಂದು ಸಂದರ್ಭದಲ್ಲೂ ಮರದ ನೆರಳು, ದೇವಾಲಯಗಳ ಕಟ್ಟಡಗಳನ್ನೇ ಆಶ್ರಯಸಿತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಭೂಮಿ ಕೋರಿ ಸಂಬಂಧಪಟ್ಟ ಶಾಸಕರು, ಸಂಬಂಧಪಟ್ಟ ಶಾಸಕರು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಇನ್ನೊಮ್ಮೆ ಮರು ಮನವಿ ಸಲ್ಲಿಸಿದರೂ ನಿರ್ಲಕ್ಷಿಸಿದರೆ ಸಂಘದ ಪದಾಧಿಕಾರಿಗಳು ಸೇರಿದಂತೆ ಸಮುದಾಯರೆಲ್ಲಾ ಸೇರಿ ಸಂಬಂಧಪಟ್ಟವರೆಲ್ಲರ ಕಚೇರಿ ಎದುರು ಅಮರಾಣಂತ ಉಪವಾಸ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಗಂಗಾಧರಪ್ಪ, ಎಸ್.ಕೆ. ನಾಗರಾಜಪ್ಪ, ವೇದಮೂರ್ತಿ, ಕೆಂಚಣ್ಣ ಕೃಷ್ಣ, ರಂಗನಾಥ್, ರಾಜಣ್ಣ, ಕುಮಾರ್ ರೇವಣ್ಣ, ಎಲ್.ವಿ. ಸಿದ್ದರಾಜ್, ಪುಟ್ಟರಾಜ್, ರಾಜಪ್ಪ, ಗಂಗಾಧರ್, ನೆಟ್ಟಕಾಲಪ್ಪ ಪಾಲ್ಗೊಂಡಿದ್ದರು.
ಜಿಲ್ಲಾ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲು ಅವಕಾಶವಿರುವುದರಿಂದ ಆಸಕ್ತ ಜನಾಂಗದ ಯುವಕರು 9964164651, 9945313919 ಸಂಪರ್ಕಿಸುವಂತೆ ಕೋರಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

