ತುಮಕೂರು

ಪರಿಸರ ಕಾಪಾಡದಿದ್ದರೆ ಆಪತ್ತು

Published On :

ಕುಣಿಗಲ್: ಇಂದಿನ ಯುವಜನತೆ ಪರಿಸರದ ಬಗ್ಗೆ ಸೂಕ್ತ ಕಾಳಜಿ ವಹಿಸದಿದ್ದರೆ ಮುಂದೆ ಹಲವು ಮಾರಾಣಾಂತಿಕ ಸಮಸ್ಯೆಗಳಿಂದ ಇಡೀ ಮನುಕುಲವೇ ಬಳಲುವಂತಾಗಲಿದೆ. ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಯುವಜನಾಂಗವೇ ಮುಂದಾಳತ್ವ ವಹಿಸಬೇಕೆಂದು ತಾಪಂ ಪ್ರಭಾರ ಅಧ್ಯಕ್ಷ ಜಗದೀಶ್ ಹೇಳಿದರು.
ಸೋಮವಾರ ತಾಲೂಕಿನ ಕೊತ್ತಗೆರೆ ಹೋಬಳಿಯ ಭಕ್ತರಹಳ್ಳಿ ಪಪೂ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಯುವಶಕ್ತಿ ವನಮಹೋತ್ಸವ ಆಂದೋಲನ ಕಾರ್ಯಕ್ರಮದಲ್ಲಿ ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಸಸಿ ವಿತರಿಸಿ ಮಾತನಾಡಿ, ಯುವ ವಿದ್ಯಾರ್ಥಿಗಳು ಉತ್ತಮ ಭವಿಷ್ಯಕ್ಕಾಗಿ ಮೌಲ್ಯಯುತ ಶಿಕ್ಷಣ ಪಡೆಯುವುದು ಎಷ್ಟು ಅವಶ್ಯವೇ ನಾಳಿನ ಆರೋಗ್ಯಪೂರ್ಣ ಜೀವನ ನಿರ್ವಹಣೆಗೆ ಉತ್ತಮ ಪರಿಸರ ನಿರ್ಮಾಣವೂ ಅಗತ್ಯ. ಭಾರತದಲ್ಲಿ ಕಳೆದೊಂದು ದಶಕದಲ್ಲಿ 130 ಲಕ್ಷ ಹೆಕ್ಟೇರ್ ಆರಣ್ಯ ನಾಶವಾಗಿದ್ದು, ದೇಶದಲ್ಲಿ ಹಲವು ನೈಸರ್ಗಿಕ ಸಮಸ್ಯೆಗೆ ಕಾರಣವಾಗಿದೆ. ಈಗಾಗಲೇ ಮಾನವನ ಹಲವು ಸ್ವಾರ್ಥ ಪರ ಸಾಧನೆಗೆ ಗಿಡ, ಮರಗಳು ಬಲಿಯಾಗಿ ಹವಾಮಾನ ವೈಪರೀತ್ಯದಿಂದ ಸಕಾಲದಲ್ಲಿ ಮಳೆಯಾಗದೆ ಹಲವು ಸಮಸ್ಯೆಗಳು ತಾಂಡವವಾಡುತ್ತಿವೆ ಎಂದರು.
ತಾಪಂ ಮಾಜಿ ಅಧ್ಯಕ್ಷ ರಾಮಣ್ಣ, ಭಕ್ತರಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜು, ಹಾಲಿ ಅಧ್ಯಕ್ಷ ಕುಮಾರ್,  ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಜಿ.ಸಿದ್ದಯ್ಯ ಪ್ರಾಚಾರ್ಯೆ ಇಂದುಮತಿ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ಕ್ರಮ ಕೈಗೊಳ್ಳಬೇಕಾದ ಅಗತ್ಯತೆ ಬಗ್ಗೆ ವಿವರಿಸಿದರು. ಮುಖ್ಯೋಪಾಧ್ಯಾಯೆ ವರಲಕ್ಷ್ಮೀ, ಪರಿಸರ ಸಂರಕ್ಷಣೆಯಲ್ಲಿ ಯುವ ವಿದ್ಯಾರ್ಥಿಗಳ ಕೊಡುಗೆ ಬಗ್ಗೆ ಪ್ರಾಸ್ತಾವಿಕ ಭಾಷಣ ಮಾಡಿದರು. ಸೋಮವಾರದಂದು ತಾಲೂಕಿನ ತರೇದಕುಪ್ಪೆ, ಜಾಣಗೆರೆ ಸೇರಿದಂತೆ ಕೊತ್ತಗೆರೆ ಹೋಬಳಿಯ ವಿವಿಧ ಪ್ರೌಢಶಾಲೆಗಳ ಆವರಣದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಶಾಲಾ, ಕಾಲೇಜಿನ ವಿದ್ಯಾಥಿಗಳಿಗೆ ಆರು ಸಾವಿರಕ್ಕೂ ಹೆಚ್ಚು ಸಸಿಗಳನ್ನು ವಿತರಿಸಲಾಯಿತು. ಮೊದೂರು ಸುರೇಷ, ಪ್ರಕಾಶ್,ನಾಗರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.