ತುಮಕೂರು

ನಿರಂತರ ಪುನಶ್ಚೇತನ ಕಾರ್ಯಾಗಾರ

Published On :

ಚಿಕ್ಕನಾಯಕನಹಳ್ಳಿ: ಬದಲಾದ ಹತ್ತನೇ ತರಗತಿಯ ಕನ್ನಡ ಪಠ್ಯ ಪುಸ್ತಕದ ನಿರಂತರ ಹಾಗೂ ವ್ಯಾಪಕ ಮೌಲ್ಯ ಮಾಪನ ಕುರಿತು ಪುನಶ್ಚೇತನ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಾ.ಚಿ. ನಾಗೇಶ್ ತಿಳಿಸಿದ್ದಾರೆ.
ಈ ಸಂಬಂಧ ಹೇಳಿಕೆ ನೀಡಿ, ಜುಲೈ 15ರಂದು 10 ಗಂಟೆಗೆ ಕಾರ್ಯಾಗಾರ ಹಮ್ಮಿಕೊಂಡಿದ್ದು, ಸಂನ್ಮೂಲ ವ್ಯಕ್ತಿಗಳಾಗಿ ಪಾವಗಡ ತಾಲೂಕು ರಾಜವಂಶಿ ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕ ಜಯರಾಂ ರೂಪಾತ್ಮಕ ಸಂಕಲನಾತ್ಕಮ ಹಾಗೂ ವಾರ್ಷಿಕ ಟಿಪ್ಪಣಿ ಕುರಿತು 10ನೇ ತರಗತಿ ಪಾಠ ಪದ್ಧತಿ ಬಗ್ಗೆ ಉಪನ್ಯಾಸ ಮಾಡಲಿದ್ದಾರೆ. ಭೋಜನಾನಂತರ ಸಿ.ಸಿ.ಇ ಪರಿಷ್ಕರಣೆಯಂತೆ  8 ಮತು ್ತ9ನೇ ತರಗತಿಗಳಿಗೆ 1.30 ರಿಂದ 5.30ರವರಗೆ ಬೋಧನಾ ಕ್ರಮದ ಬಗ್ಗೆ ಉಪನ್ಯಾಸ. 2.2.2014ರ ಆದೇಶದಂತೆ 10 ನೇ ತರಗತಿಗೆ ಮತ್ತು ಪರೀಕ್ಷಾ ವಿಧಾನದ ಬಗ್ಗೆ  8 ಮತ್ತು 9ನೇ ತರಗತಿಗಳಿಗೆ ಬೋಧನಾ ಕ್ರಮದ ಬಗ್ಗೆ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಸ್ಥಳ ಸರ್ಕಾರಿ ಪ್ರೌಢಶಾಲೆ ಯಳನಡುವಿನಲ್ಲಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.