ತುಮಕೂರು ಪ್ರಥಮ
ಚಿಕ್ಕನಾಯಕನಹಳ್ಳಿ: ಭಾರತೀಯ ಸಾಂಸ್ಕೃತಿಕ ಕಲೆಗಳು ಮನಸ್ಸು ಅರಳಿಸುವಲ್ಲಿ ವಿಶ್ವದಲ್ಲೇ ಯಶಸ್ವಿಯಾಗಿವೆ ಎಂದು ಶಾಸಕ ಸಿ.ಬಿ. ಸುರೇಶ್ಬಾಬು ಹೇಳಿದರು.
ಪಟ್ಟಣದ ಸಪ್ತಪತಿ ಸಭಾಂಗಣದಲ್ಲಿ ಅನ್ನಪೂರ್ಣಶ್ವರಿ ಕಲಾಸಂಘದಿಂದ ಏರ್ಪಡಿಸಿದ್ದ ರಾಜ್ಯ ಮಟ್ಟದ ನೃತ್ಯಸ್ಪರ್ಧೆಯಲ್ಲಿ ಗೆದ್ದ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು. ಕಾಸಂಘದ ಅಧ್ಯಕ್ಷ ಸಿ.ಎಸ್. ರೇಣುಕಾಮೂರ್ತಿ, ತಿಪ್ಪೇಸ್ವಾಮಿ ಇದ್ದರು. ನೃತ್ಯ ಸ್ಪರ್ಧೆಯಲ್ಲಿ ತುಮಕೂರಿನ ದಿ ಸ್ಕೂಲ್ ಆಫ್ ಡ್ಯಾನ್ಸ್ ತಂಡಕ್ಕೆ ಸೀನಿಯರ್ ವಿಭಾಗದಲ್ಲಿ ರು. 50 ಸಾವಿರ ಪ್ರಥಮ, ಮಮತ ಡ್ಯಾನ್ಸ್ ಟೀಂ, ದ್ವಿತೀಯ, ನ್ಯೂ ಸ್ಪಿರಿಟ್ ಡ್ಯಾನ್ಸ್ ತೃತೀಯ ಬಹುಮಾನ ಪಡೆಯಿತು. ಸೀನಿಯರ್ ವಿಭಾಗದ ಸೋಲೋ ಡ್ಯಾನ್ಸ್ನಲ್ಲಿ ಸಂತೋಷ್ ಪ್ರಥಮ, ನವೀನ್ರಾಜ್ ದ್ವಿತೀಯ, ಮಮತರಾಜ್ ತೃತೀಯ ಬಹುಮಾನ ಪಡೆದಿದ್ದಾರೆ. ಜೂನಿಯರ್ ವಿಭಾಗದ ಗ್ರೂಪ್ ಡ್ಯಾನ್ಸ್ನಲ್ಲಿ ಶಿವರಂಜಿನಿ ಡ್ಯಾನ್ಸ್ ಟೀಂ ಪ್ರಥಮ, ಕೂರ್ಗ್ ಸೈಕ್ಲೋನ್ ದ್ವಿತೀಯ ಬಹುಮಾನ, ಲಿಯೋ ಸ್ಟಾರ್ಸ್ ತೃತೀಯ ಬಹುಮಾನ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

