ತುಮಕೂರು

ದಾಸರ ಪದಗಳ ಗಾಯನ ಇಂದು

Published On :

ತುಮಕೂರು: ಇಲ್ಲಿನ ನಗೆ ಮುಗುಳು ಹಾಸ್ಯ ಪತ್ರಿಕೆ, ಪೂರ್ಣಿಮಾ ಸಾಹಿತ್ಯ ಮಂದಿರದ ಆಶ್ರಯದಲ್ಲಿ ಜು.11ರಂದು ಶುಕ್ರವಾರ ಸಂಜೆ 6.45ಕ್ಕೆ ಎಸ್ಐಟಿ 28ನೇ ಕ್ರಾಸ್ನಲ್ಲಿರುವ ಎಚ್ಎಸ್ಆರ್ ಸಭಾಂಗಣದಲ್ಲಿ ದಾಸರ ಪದ ಗಾಯನ ಕಾರ್ಯಕ್ರಮವಿದೆ. ಹಿರಿಯ ಸಂಗೀತ ವಿದ್ವಾಂಸ ಹಾಗೂ ಪ್ರವಚನಕಾರ ಡಾ.ಕೆ.ಎಸ್. ವಾಸುದೇವಮೂರ್ತಿ ಪ್ರವಚನ ನೀಡುವರು ಮತ್ತು ಪುರಂದರದಾಸರ ಕೃತಿಗಳನ್ನು ಹಾಡುವರು. ಸಂಗೀತ ವಿದುಷಿ ನಾದ ಚಿಂತಾಮಣಿ ವತ್ಸಲ ರಂಗರಾಜ್ ಮತ್ತು ವೃಂದದವರು ಶ್ರೀಪಾದರಾಜರ ಕೃತಿಗಳನ್ನು ಹಾಡುವರು. ಮೃದಂಗ ವಿದ್ವಾನ್ ಸಂಪತ್ ಕುಮಾರ್ ಮತ್ತಿತರ ವಿದ್ವಾಂಸರು ಪಕ್ಕವಾದ್ಯದಲ್ಲಿ ಸಹಕರಿಸುವರು. ತುಮಕೂರು ಜಿಲ್ಲಾ ಹೊಯ್ಸಳ ಕರ್ನಾಟಕ ಬ್ರಾಹ್ಮಣ ಸಂಘದ ಅಧ್ಯಕ್ಷ ಎನ್. ಸತ್ಯನಾರಾಯಣ, ತುಮಕೂರಿನ ಗಾಯತ್ರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿ.ಎನ್. ರಮೇಶ್ ಮತ್ತು ಪತ್ರಕರ್ತ ಆರ್.ಎಸ್. ಅಯ್ಯರ್ ಮುಖ್ಯ ಅತಿಥಿಗಳಾಗಿರುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.