ಅವಘಡದಲ್ಲಿ ಲೈನ್ಮನ್ ಸಾವು
ಚಿಕ್ಕನಾಯಕನಹಳ್ಳಿ: ವಿದ್ಯುತ್ ಮಾರ್ಗದಲ್ಲಿ ತಲೆದೋರಿದ ಸಮಸ್ಯೆ ಪರಿಹಾರಕಾರ್ಯಕ್ಕಾಗಿ ತೆರಳಿದ್ದ ಬೆಸ್ಕಾಂ ನೌಕರ ದುರ್ಮಣಕ್ಕೀಡಾದ ಘಟನೆ ತಾಲೂಕಿನಲ್ಲಿ ನಡೆದಿದೆ. ಜುಲೈ 7ರ ರಾತ್ರಿ 7.30ರ ಸಮಯದಲ್ಲಿ ಅಗಸರಹಳ್ಳಿ ವ್ಯಾಪ್ತಿಯಲ್ಲಿ ತಲೆದೋರಿದ್ದ ಮಾರ್ಗದ ಸಮಸ್ಯೆ ನಿವಾರಣೆಗಾಗಿ ಹೋದ ಬಿ.ಎಚ್. ಸತ್ಯಾನಂದ ವಿದ್ಯುತ್ ಅವಘಡಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಇಲಾಖೆ ನಿರ್ಲಕ್ಷ್ಯದಿಂದಲೇ ಆತನ ಸಾವು ಸಂಬಂವಿಸಿದೆ ಎಂದು ಸುತ್ತಮುತ್ತಲ ಗ್ರಾಮಗಳ ನೂರಾರು ಜನ ಆಸ್ಪತ್ರೆಯ ಬಳಿ ಜಮಾಯಿಸಿ ಗಲಾಟೆ ಮಾಡಿದರು. ಮೃತನ ಕುಟುಂಬದ ಸದಸ್ಯರಿಗೆ ಮಾಜಿ ಶಾಸಕ ಜೆ.ಸಿ. ಮಾಧುಸ್ವಾಮಿ ಮತ್ತು ಬಿ.ಸಿ. ನಾಗೇಶ್ ಆಸ್ಪತ್ರೆಗೆ ಬಂದು ಸಾಂತ್ವನ ಹೇಳಿದರು. ಸ್ಥಳಕ್ಕೆ ತಾಪಂ ಮಾಜಿ ಅಧ್ಯಕ್ಷ ಎಂ.ಎಂ. ಜಗದೀಶ್, ಎಪಿಎಂಸಿ ನಿರ್ದೇಶಕ ಅಗಸರಹಳ್ಳಿ ಶಿವರಾಜ್, ಬಿಳಿಗೆರೆ ಮಲ್ಲಿಕಾರ್ಜುನ್ ಭೇಟಿ ನೀಡಿದ್ದರು.
ಅರ್ಜಿ ಆಹ್ವಾನ
ತಿಪಟೂರು: ತಾಲೂಕು ಗಾಣಿಗೆ ಸಂಘದಿಂದ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.70ರಷ್ಟು ಫಲಿತಾಂಶ ಪಡೆದ ಗಾಣಿಗ ಜನಾಂಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಏರ್ಪಡಿಸಲಾಗಿದೆ ಎಂದು ಸಂಘ ತಿಳಿಸಿದೆ. ಅರ್ಹ ವಿದ್ಯಾರ್ಥಿಗಳು ಜು.12ರೊಳಗೆ ಎಸ್.ಸಿ. ಧನಂಜಯ, ಅಧ್ಯಕ್ಷರು, ಗಾಣಿಗರ ಸಂಘ, ಚಿನ್ನಪ್ಪ ಕಾಂಪೌಂಡ್ ಬಿ.ಹೆಚ್.ರಸ್ತೆ ತಿಪಟೂರು ಅಥವಾ ಮೊ. 9343210041 ಸಂಪರ್ಕಿಸಬಹುದಾಗಿದೆ.
ಉದ್ಯೋಗಿನಿ ಯೋಜನೆಗೆ ಅರ್ಜಿ
ಚಿಕ್ಕನಾಯಕನಹಳ್ಳಿ: 2014-15ನೇ ಸಾಲಿನಲ್ಲಿ ಉದ್ಯೋಗಿನಿ ಯೋಜನೆಯಡಿ ಸಾಲ ಮಂಜೂರಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದ್ದು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಪಡೆಯಲು ತಿಳಿಸಿದೆ. ಈಗಾಗಲೇ ಅರ್ಜಿ ಪಡೆದಿರುವ ಫಲಾನುಭವಿಗಳು 20ರ ಒಳಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ತ್ರಿ-ಪ್ರತಿಯಲ್ಲಿ ಸಲ್ಲಿಸಲು ತಿಳಿಸಿದ್ದಾರೆ.
ಮೀನುಗಾರರ ಮಹಾ ಮಂಡಲಿ ಸದಸ್ಯತ್ವ ಪಡೆಯಿರಿ
ತುರುವೇಕೆರೆ: ರಾಜ್ಯದಲ್ಲಿ ಅಧಿಕೃತವಾಗಿ ನೋಂದಣಿಯಾಗಿರುವ ಮೀನುಗಾರರ ಮಹಾ ಮಂಡಲದ ಸದಸ್ಯತ್ವ ಪಡೆದು ಮೀನು ಕೃಷಿಕರು ಸರ್ಕಾರದಿಂದ ದೊರೆಯುವ ಸವಲತ್ತು ಪಡೆಯುವಂತೆ ದಂಡಿನಶಿವರದ ಅಂಬೇಡ್ಕರ್ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಮೀನುಗಾರರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಅರಕೆರೆ ಬಸವರಾಜು ಮನವಿ ಮಾಡಿದ್ದಾರೆ. ಈಗ ದಂಡಿನಶಿವರದ ಮೀನುಗಾರರ ಸಹಕಾರ ಸಂಘ ಸೂಪರ್ ಸೀಡ್ ಆಗಿದ್ದು ಮುಂಬರುವ ದಿನಗಳಲ್ಲಿ ಹರಾಜಿನಲ್ಲಿ ಭಾಗವಹಿಸಲೂ ಸಾಧ್ಯವಿಲ್ಲದಂತಾಗಿದೆ. ಇದರಿಂದಾಗಿ ಮೀನು ಕೃಷಿ ಉದ್ಯಮವನ್ನೇ ನೆಚ್ಚಿಕೊಂಡಿದ್ದ ಹಲವಾರು ಜನರಿಗೆ ತೊಂದರೆಯಾಗಿದೆ. ಕೂಡಲೇ ಸಹಕಾರಿ ಸಂಘಗಳ ಅಧಿಕಾರಿಗಳು ಸಹಕಾರ ಸಂಘವನ್ನು ಪುನಶ್ಚೇತನಗೊಳಿಸಬೇಕು ಎಂದು ಅಧಿಕಾರಿಗಳನ್ನು ವಿನಂತಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

