ಮಹಿಳಾ ಸದಸ್ಯರ ಪತಿಯರದ್ದೇ ದರ್ಬಾರ್
ಪಾವಗಡ: ಪುರಸಭೆ ಕಾರ್ಯಕ್ರಮಗಳಲ್ಲಿ ಪುರಸಭೆಯ ಮಹಿಳಾ ಸದಸ್ಯರ ಪತಿಯರು ನಡೆಸುತ್ತಿರುವ ದರ್ಬಾರ್ಗಳ ವಿರುದ್ಧ ಸಾರ್ವಜನಿಕರು ಮತ್ತು ಹಿರಿಯ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಪುರಸಭೆಯಲ್ಲಿ ಒಟ್ಟು 23 ಸದಸ್ಯರಿದ್ದು ಈ ಪೈಕಿ 8 ಮಹಿಳಾ ಸದಸ್ಯರಿದ್ದಾರೆ. ಮಹಿಳಾ ಮೀಸಲಿನಿಂದ ಪುರಸಭೆಯ ಚುನಾವಣೆಗೆ ಸ್ವರ್ಧಿಸಿ ಜನರಿಂದ ಆಯ್ಕೆಯಾಗಿರುವ ಇವರು, ಚುನಾವಣೆಯಲ್ಲಿ ಮಾತ್ರ ಮತದಾರರು ಕಣ್ಣಿಗೆ ಕಂಡಿದ್ದು, ಗೆದ್ದ ನಂತರ ಪುರಸಭೆಗೆ ಆಗಮಿಸಿ ಪ್ರಮಾಣ ಪತ್ರ ಸ್ವೀಕರಿಸಿರುವುದು ಬಿಟ್ಟರೆ ಇದುವರೆವಿಗೆ ಸಾರ್ವಜನಿಕ ಸಮಾರಂಭಗಳಲ್ಲಿ ಕಂಡುಬಂದಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ನಾನಾ ಯೋಜನೆಗಳ ಕ್ರಿಯಾಯೋಜನೆ ಸಿದ್ಧಪಡಿಸಲು ಪುರಸಭೆಯಲ್ಲಿ ಏರ್ಪಡುವ ಸಭೆಗಳಿಗೆ ಮಾತ್ರ ಈ ಮಹಿಳಾ ಸದಸ್ಯರು ಹಾಜಾರಾಗುತ್ತಿದ್ದು ಮಿಕ್ಕ ದಿನಗಳಲ್ಲಿ ಅನಿವಾರ್ಯತೆ ಇದ್ದರೆ ಮಾತ್ರ ಪುರಸಭೆಗೆ ಆಗಮಿಸುತ್ತಾರೆ. ಚುನಾವಣೆಯಲ್ಲಿ ಮಹಿಳೆಯರು ಆಯ್ಕೆ ಯಾದರೆ ಸಮಸ್ಯೆಗಳು ಈಡೇರಿಕೊಳ್ಳಬಹುದೆಂಬ ಆಸೆ ಯಿಂದ ಬಹುತೇಕ ಮತದಾರರು ಮಹಿಳೆಯರಿಗೆ ಮತ ನೀಡಿ ಗೆಲ್ಲಿಸಿದ್ದಾರೆ. ಆದರೆ ನಂತರ ಮತದಾರರಿಗೆ ಸಿಗದ ಕಾರಣ ಪ್ರತಿಯೊಂದು ಪುರಸಭೆಯ ಕೆಲಸಕ್ಕೆ ಸದಸ್ಯರ ಪತಿಯರನ್ನು ಭೇಟಿಯಾಗಿ ಸಮಸ್ಯೆ ಹೇಳಿಕೊಳ್ಳುವ ಅನಿವಾರ್ಯತೆ ಇದೆ.
ಪುರಸಭೆ ಅವರಣದಲ್ಲಿ ಸೋಮವಾರ ಏರ್ಪಾಡಿಸಿದ್ದ ಪೌರ ಕಾರ್ಮಿರಿಗೆ ಉಪಾಹಾರ ಕಾರ್ಯಕ್ರಮದಲ್ಲಿ ಬಹುತೇಕ ಮಹಿಳಾ ಸದಸ್ಯರ ಪತಿರಾಯರು ವೇದಿಕೆ ಅಲಂಕರಿಸಿದ್ದರು. ಇದನ್ನು ಗಮನಿಸಿದ ಶಾಸಕ ಕೆ.ಎಂ. ತಿಮ್ಮರಾಯಪ್ಪ ಸಮಾರಂಭಗಳಿಗೆ ಚುನಾಯಿತ ಮಹಿಳಾ ಸದಸ್ಯರನ್ನು ಕರೆ ತನ್ನಿ ಅವರಗೂ ಕಾರ್ಯಕ್ರಮದ ಬಗ್ಗೆ ಅರಿವು ಆಗಲಿ ಎಂದು ಸೂಕ್ಷ್ಮವಾಗಿ ಎಚ್ಚರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

