ಪಹಣಿ ತಿದ್ದುಪಡಿ ಆಂದೋಲನ 4ರಿಂದ ಆರಂಭ
ಕುಣಿಗಲ್: ತಾಲೂಕಿನ ಕೊತ್ತಗೆರೆ, ಹುತ್ರಿದುರ್ಗ, ಹುಲಿಯೂರುದುರ್ಗ, ಕಸಬಾ, ಅಮೃತೂರು ಹೋಬಳಿಗಳಲ್ಲಿ ಆ.4 ರಿಂದ ಸೆಪ್ಟೆಂಬರ್ 16ರವರೆಗೆ ಪಹಣಿ ತಿದ್ದು ಪಡಿ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ಶಂಭುಲಿಂಗಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೊತ್ತೆಗೆರೆ ಹೋಬಳಿ ನಾಡ ಕಚೇರಿಯಲ್ಲಿ 22ರಂದು, ಹುತ್ರಿದುರ್ಗ ಹೋಬಳಿ ನಾಡ ಕಚೇರಿಯಲ್ಲಿ 27ರಂದು ತಿದ್ದು ಪಡಿ ಆಂದೋಲನ ನಡೆಯಲಿದೆ. ಹುಲಿಯೂರುದುರ್ಗ ನಾಡ ಕಚೇರಿಯಲ್ಲಿ ಆ.18ರಿಂದ ಸೆಪ್ಟೆಂಬರ್ 3ರವರೆಗೆ ಅರ್ಜಿ ಸ್ವೀಕರಿಸಿ, ಸೆಪ್ಟಂಬರ್ 5ರಂದು ಆಂದೋಲನ ನಡೆಯಲಿದೆ. ಕಸಬಾ ಹೋಬಳಿ ಪಟ್ಟಣದ ಕಂದಾಯ ಭವನದಲ್ಲಿ ಆ.25ರಿಂದ ಸೆಪ್ಟೆಂಬರ್ 9ರವರೆಗೆ ಅರ್ಜಿ ಸ್ವೀಕರಿಸಿ, ಸೆಪ್ಟಂಬರ್ 12ರಂದು ತಿದ್ದು ಪಡಿ ಆಂದೋಲನ ನಡೆಯಲಿದೆ. ಅಮೃತೂರು ನಾಡ ಕಚೇರಿಯಲ್ಲಿ ಸೆಪ್ಟೆಂಬರ್19ರಂದು ತಿದ್ದು ಪಡಿ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆಯಾ ಹೋಬಳಿಯಲ್ಲಿ ನಿಗದಿ ಪಡಿಸಿದ ದಿನಾಂಕದೊಳಗೆ ದಾಖಲೆಗಳನ್ನು ಸಲ್ಲಿಸಿ, ಲೋಪದೋಷಗಳನ್ನು ಸರಿಪಡಿಸಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

