ತುಮಕೂರು

ಮತದಾರರಾಗೇ ಉಳಿದ ದೊಂಬಿದಾಸರು: ವಿಷಾದ

Published On :

ಕ.ಪ್ರ. ವಾರ್ತೆ ್ಣ ತುಮಕೂರು ್ಣ ಮಾ.30
ಜನಸಂಖ್ಯೆಯಲ್ಲಿ ವಿರಳರಾಗಿರುವ ದೊಂಬಿದಾಸರು ಇದುವರೆಗೂ ಒಬ್ಬ ಶಾಸಕರನ್ನು ತಮ್ಮ ಸಮುದಾಯದಲ್ಲಿ ಕಾಣದಿರುವುದು ದುರಂತ ಹಾಗೂ ದೌರ್ಭಾಗ್ಯದ ವಿಷಯ ಎಂದು ದೊಂಬಿದಾಸರ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಸಾಧನಾ ರವಿಕುಮಾರ್ ವಿಷಾದಿಸಿದರು.
ಅವರು ತುಮಕೂರಿನ ನಗರಸಭೆ ಆವರಣದಲ್ಲಿ ನಡೆದ ದೊಂಬಿದಾಸರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಜೀವನ ನಿರ್ವಹಣೆಗಾಗಿ ಊರೂರು, ಕೇರಿ ಕೇರಿ ಅಲೆದು ಭಿಕ್ಷೆ ಬೇಡಿ ಹಸಿವು ನೀಗಿಸಿಕೊಂಡು ಕೂದಲು, ಕರೆಮಣಿ, ಸಣ್ಣಪುಟ್ಟ ಮಕ್ಕಳ ಆಟಿಕೆಗಳನ್ನು ಮಾರಿಕೊಂಡು ಜೀವನ ಸಾಗಿಸುತ್ತಿರುವ ಈ ಸಮುದಾಯದಲ್ಲಿ ಅವಿದ್ಯಾವಂತರೇ ಹೆಚ್ಚಾಗಿದ್ದಾರೆ ಎಂದರು.
ಕೈಗನ್ನಡಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅನಾಥರಂತೆ ಬದುಕುತ್ತಿರುವುದು ಅವರ ಶೋಚನೀಯ ಬದುಕಿಗೆ ಹಿಡಿದ ಕೈಗನ್ನಡಿಯಾಗಿದೆ. ಎಷ್ಟೋ ಮಂದಿಗೆ ಇನ್ನು ಹಸಿರು ಕಾರ್ಡು, ಮಾಸಾಶನ, ಗುರುತಿನ ಚೀಟಿ, ವಾಸಿಸಲು ಮನೆ, ಉಳುಮೆ ಮಾಡಲು ಭೂಮಿ ಇಲ್ಲದೆ ನಿರ್ಗತಿಕರಾಗಿದ್ದಾರೆ ಎಂದರು.
ಸರ್ಕಾರ ಅಲೆಮಾರಿಗಳಿಗಾಗಿ ಅನೇಕ ಯೋಜನೆಗಳನ್ನು ಪ್ರಕಟಿಸಿದರೂ ಅವುಗಳ ಪ್ರಯೋಜನ ಈ ಸಮುದಾಯಕ್ಕೆ ಸರಿಯಾದ ಪ್ರಮಾಣದಲ್ಲಿ ದೊರೆಯುತ್ತಿಲ್ಲ ಎಂದರು.
ಇಂದಿಗೂ ಹಳೆ ಮಂಟಪ, ಗುಡಿಗೋಪುರ, ಪಾಳುಬಿದ್ದ ದೇವಾಲಯ ಮತ್ತು ಮರಗಳಡಿ ಟೆಂಟ್‌ಗಳನ್ನು ಹಾಕಿಕೊಂಡು ಜೀವನ ಸಾಗಿಸುತ್ತಿರುವ ದೊಂಬಿದಾಸರು ಆಳುವ ನಾಯಕರಾಗದೆ ಆಳಿಸಿಕೊಳ್ಳುವ ಸೇವಕ ಮತದಾರರಾಗಿಯೇ ಉಳಿದಿರುವುದು ಇಂದಿನ ದುರ್ಗತಿಗೆ ಕಾರಣ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್. ಶಿವಣ್ಣ ಅವರಿಗೆ ಅಲೆಮಾರಿ ಜನಾಂಗಕ್ಕೆ ನಿವೇಶನ ಕಲ್ಪಿಸುವಂತೆ ಕೋರಿ ಮನವಿ ಸಲ್ಲಿಸಿದರು.
ನೂತನ ಪದಾಧಿಕಾರಿಗಳು: ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ರಾಜಣ್ಣ, ಅಧ್ಯಕ್ಷೆಯಾಗಿ ಜಯಲಕ್ಷ್ಮೀ, ಪ್ರಧಾನ ಕಾರ್ಯದರ್ಶಿಯಾಗಿ ಸಾಧನ ರವಿಕುಮಾರ್, ಖಜಾಂಚಿಯಾಗಿ ಸಣ್ಣರಂಗಯ್ಯ, ನಿರ್ದೇಶಕರಾಗಿ ನಾಗರಾಜ್ ಎಸ್.ಆರ್., ಕೆಂಚಣ್ಣ, ರೇವಣ್ಣ, ಎಲ್.ವಿ. ರಂಗನಾಥ್, ದೇವರಾಜು, ಸಿದ್ಧರಾಜು, ಕುಮಾರ್ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.