ಜೆಡಿಎಸ್ ಸೇರಿದ ಬಿಜೆಪಿ ಬೆಂಬಲಿಗರು
ಕ.ಪ್ರ. ವಾರ್ತೆ ್ಣ ಹುಳಿಯಾರು ್ಣ ಮಾ.30
ಹೋಬಳಿ ದಬ್ಬಕುಂಟೆ ಸಮೀಪದ ತಮ್ಮಣ್ಣಸ್ವಾಮಿಗುಡ್ಡೆ ಸನ್ನಿದಿಯಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ದಸೂಡಿ, ದಬ್ಬಕುಂಟೆ, ಮೇಲನಹಳ್ಳಿ ಸೇರಿದಂತೆ ಈ ಭಾಗದ ಸುಮಾರು ನೂರಕ್ಕೂ ಹೆಚ್ಚು ಬಿಜೆಪಿ ಬೆಂಬಲಿತ ಕಾರ್ಯಕರ್ತರು ತಮ್ಮ ಪಕ್ಷಕ್ಕೆ ಗುಡ್‌ಬೈ ಹೇಳಿ ಜೆಡಿಎಸ್‌ಗೆ ಸೇರುವ ಮೂಲಕ ಶಾಸಕ ಸಿ.ಬಿ.ಸುರೇಶ್‌ಬಾಬು ನೇತೃತ್ವದಲ್ಲಿ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಶಾಸಕ ಸುರೇಶ್ ಬಾಬು ಮಾತನಾಡಿ, ಜೀವನದಲ್ಲಿ ಯಾವುದು ಶಾಶ್ವತವಾದುದಲ್ಲ, ಅದರಂತೇ ಈ ರಾಜಕೀಯ, ಅಧಿಕಾರ ಎಂಬುದು ಯಾರೊಬ್ಬರಲ್ಲಿಯೂ ಶಾಶ್ವತವಾಗಿ ಉಳಿಯುವುದಿಲ್ಲ. ಅಧಿಕಾರದ ಅವಧಿಯಲ್ಲಿ ಜನರ ಪ್ರೀತಿ, ವಿಶ್ವಾಸವನ್ನು ಗಳಿಸಿಕೊಂಡು, ಜನಪರ ಕಾರ್ಯಗಳನ್ನು ಮಾಡಿದರಷ್ಟೆ ಜನಮನದಲ್ಲಿ ಶಾಶ್ವತವಾಗಿ ನೆಲೆಯೂರಬಹುದು. ಈ ತತ್ವ ಸಿದ್ಧಾಂತವನ್ನು ನಾನು ಹಿಂದಿನಿಂದಲೂ ಪಾಲಿಸಿಕೊಂಡು ಬಂದಿದ್ದು ಇದೇ ನನಗೆ ಶ್ರೀರಕ್ಷೆಯಾಗಿದೆ ಎಂದರು.
ನಾನು ಯಾವುದೇ ಅಧಿಕಾರವನ್ನು ಪಡೆಯಬೇಕೆಂಬ ಹಂಬಲ ಹೊಂದಿದವನಲ್ಲ. ನಾನು ಎಲ್ಲರಂತೆ ಪಕ್ಷದ ಕಾರ್ಯಕರ್ತ. ಈಗಲೂ ಯಾರಾದರೂ ತಮ್ಮ ಪಕ್ಷದಿಂದ ಸ್ಪರ್ಧಿಸಲು ಮುಂದಾದರೆ ಅವರಿಗೆ ಮುಕ್ತ ಅವಕಾಶ ಕೊಟ್ಟು, ಅವರ ಬೆಂಬಲಕ್ಕೆ ನಿಲ್ಲುವುದಾಗಿ ತಿಳಿಸಿದರು.
ಸಮರ್ಥ ಎಚ್‌ಡಿಕೆ: ಎಚ್.ಡಿ.ಕೆ.ಯವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ರೈತರ ಸಂಕಷ್ಟವನ್ನು ಅರಿತು ರೈತರ ಸಾಲ ಮನ್ನಾ ಮಾಡಿದ್ದಲ್ಲದೆ, ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ರಾಜ್ಯಾದಂತ ಪ್ರವಾಸ ಕೈಗೊಂಡು ಅಲ್ಪಸಂಖ್ಯಾತರ, ರೈತರ ನಿವಾಸಗಳಲ್ಲಿ ವಾಸ್ಥವ್ಯ ಹೂಡುವ ಮೂಲಕ ಜನರ ಸಂಕಷ್ಟವನ್ನು ಖುದ್ದಾಗಿ ಅರಿತು ಅವರ ಸಮಸ್ಯೆ ನಿವಾರಿಸಿದ್ದಾರೆ. ಪ್ರಸ್ತುತ ಚುನಾವಣೆಯ ಹಣಾಹಣಿಯಲ್ಲಿ ಕಳೆದ ಬಾರಿ ಚುನಾವಣೆಗಿಂತ ಹೆಚ್ಚಿನ ಮತವನ್ನು ಪಡೆಯಲು ಕಾರ್ಯಕರ್ತರು ದುಡಿಯಬೇಕೆಂದು ಕರೆ ನೀಡಿದರು. ಅಲ್ಲದೆ ಜೆಡಿಎಸ್ ಬರುವವರಿಗೆ ಪಕ್ಷದ ಬಾಗಿಲು ಸದಾ ತೆರೆದಿರುತ್ತದೆ. ನಮ್ಮಲ್ಲಿ ಯಾವುದೇ ಜಾತಿ ಭೇದಭಾವವಿಲ್ಲದೆ ಎಲ್ಲರನ್ನೂ ಸಮನಾಗಿ ಕಾಣುವುದಲ್ಲದೆ ಕಾರ್ಯಕರ್ತರಲ್ಲಿ ಹಳಬರು, ಹೊಸಬರೆಂಬ ತಾರತಮ್ಯ ಎಸಗುವುದಿಲ್ಲ ಎಂದರು.
ಜೆಡಿಎಸ್‌ಗೆ ಸೇರ್ರ್ಪಡೆಯಾದ ಮೋಹನ್ ಮಾತನಾಡಿ, ಕಳೆದ ಅನೇಕ ವರ್ಷಗಳಿಂದ ಬಿಜೆಪಿ ಪಕ್ಷಕ್ಕಾಗಿ ದುಡಿದ ತಾವು, ಬಿಜೆಪಿ ತೊರೆಯಲು ಕಾರಣ ಬಿಜೆಪಿಯಲ್ಲಿನ ಜಾತಿ ಮನೋಭಾವ, ತಾರತಮ್ಯ ಮನೋಭಾವ, ನಾಯಕರ ಸಿದ್ಧಾಂತಗಳು ಕಾರ್ಯಕರ್ತರಲ್ಲಿ ಅಸಮಾಧಾನ ಮೂಡುವಂತೆ ಮಾಡಿತ್ತಲ್ಲದೆ ಪಕ್ಷದ ಮೇಲಿನ ಗೌರವನ್ನು ಕ್ಷಿಣಿಸುವಂತಾಯಿತು ಎಂದರು.
ಕ್ಷೇತ್ರದ ಬಗ್ಗೆ ಕಾಳಜಿ ಹೊಂದಿರುವ ಶಾಸಕ ಸಿ.ಬಿ.ಸುರೇಶ್‌ಬಾಬು ಅವರ ಸೇವಾ ಮನೋಭಾವ, ಮೃದು ಸ್ವಭಾವನ್ನು ಒಪ್ಪಿ ಅವರ ಬೆಂಬಲಕ್ಕೆ ನಿಂತಿರುವುದಾಗಿ ತಿಳಿಸಿದರು.
ಜೆಡಿಎಸ್‌ಗೆ ಸೇರ್ಪಡೆಯಾದ ಪ್ರಮುಖರು: ವಕೀಲ ಬಿ.ಕೆ. ಸದಾಶಿವಯ್ಯ, ತಾ.ಪಂ. ಮಾಜಿ ಸದಸ್ಯರಾದ ಮೋಹನ್ ಹಾಗೂ ಶಿವನಂಜಪ್ಪ, ದಸೂಡಿ ಗ್ರಾ.ಪಂ.ಅಧ್ಯಕ್ಷ ಹೆಂಜಪ್ಪ, ಮಾಜಿ ಅಧ್ಯಕ್ಷ ದಬ್ಬಗುಂಟೆ ಡಿ.ಬಿ.ರವಿಕುಮಾರ್, ಕಲ್ಲೇನಹಳ್ಳಿ ಮಂಜುನಾಥ್, ಯಶೋಧ, ರಾಜಮ್ಮ, ದೇವರಾಜಮ್ಮ, ದೇವರಾಜು, ಎಂ.ಕೆ.ಪರಮೇಶ್, ಚಂದ್ರಶೇಖರ್, ಶಿವಣ್ಣ, ವಕೀಲ ಶಂಕರ್, ತಾಲೂಕು ದಲಿತ ಸಹಾಯವಾಣಿ ಅಧ್ಯಕ್ಷ ಹನುಮಂತಯ್ಯ, ಕ್ಯಾಪ್ಟನ್ ಕೆಂಚಯ್ಯ, ಕೆ.ಎಸ್.ಮರುಳಯ್ಯ ಹಾಗೂ ಇತರರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ನಂದಿಹಳ್ಳಿ ಶಿವಣ್ಣ, ಜಲಾಲ್‌ಸಾಬ್, ಜಿ.ಪಂ.ಸದಸ್ಯೆ ಮಂಜುಳಾ, ಹುಳಿಯಾರು ಗ್ರಾ.ಪಂ.ಅಧ್ಯಕ್ಷೆ ಪುಟ್ಟಿಬಾಯಿ, ಮಾಜಿ ಅಧ್ಯಕ್ಷ ಅನ್ಸರ್ ಅಲಿ, ಹಂದನಕೆರೆ ರಘುನಾಥ್, ಮೇಲನಹಳ್ಳಿ ಬಸಣ್ಣ, ಬಸ್ ಏಜೆಂಟ್ ಗಂಗಣ್ಣ ಹಾಗೂ ಜೆಡಿಎಸ್ ಕಾರ್ಯಕರ್ತರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

