ತುಮಕೂರು

ದೇಸಿ ಆರ್ಟಿಸಾನ್ ಹಬ್ ಸ್ಥಾಪನೆಗೆ ಶ್ರೀಗಳ ಹರ್ಷ

Published On :

ತುಮಕೂರು: ಗ್ರಾಮೀಣ ಪ್ರದೇಶದಲ್ಲಿನ ನೈಪುಣ್ಯತೆ, ನೈಜಕಲೆ, ತನ್ನದೇ ಆದ ಚಾಕಚಕ್ಯತೆಯಿಂದ ಗ್ರಾಮೀಣ ಕುಲ ಕಸುಬುದಾರರು ಒಂದು ಕಾಲದಲ್ಲಿ ಕ್ರಾಂತಿಯನ್ನೇ ಉಂಟುಮಾಡಿದ್ದರು. ಇಂದು ಕುಲಕಸುಬು ನಶಿಸುವ ಹಂತ ತಲುಪಿದೆ. ಇಂತಹ ಸಂದರ್ಭದಲ್ಲಿ ದೇಸಿ ಆರ್ಟಿಸಾನ್ ಹಬ್ ಸ್ಥಾಪನೆ ಹರ್ಷದ ಸಂಗತಿ ಎಂದು ಸಿದ್ಧಗಂಗಾ ಶ್ರೀಗಳು ಪ್ರತಿಪಾದಿಸಿದರು.  ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತುಮಕೂರಿನಲ್ಲಿ ಉದ್ಯೋಗ ದೊರಕುವಂತಹ ಬೃಹತ್ ಯೋಜನೆಗೆ ಮಂಜೂರಾತಿ ನೀಡಿರುವುದು ಸ್ವಾಗತ ಹಾಗೂ ಅಗತ್ಯವೂ ಕೂಡ. ಇದರಿಂದ ರೈತರ ಬದುಕಿಗೆ ಹಾಗೂ ಪರಿಸರಕ್ಕೆ ಧಕ್ಕೆ ತರದ ರೀತಿಯಲ್ಲಿ ಯೋಜನೆ ರೂಪಿಸಬೇಕು. ಈ ಬಗ್ಗೆ ವಿಶೇಷ ಗಮನವಿರಲಿ ಎಂದು ಮಾರ್ಮಿಕವಾಗಿ ಎಚ್ಚರಿಸಿದರು.
ಜಿ.ಎಸ್.ಬಿ ಮನವಿ: ತುಮಕೂರು ಜಿಲ್ಲೆಯಲ್ಲಿ ರೈತರು ಬೆಳೆದ ಪ್ರತಿಯೊಂದು ಉತ್ಪನ್ನಗಳಿಗೆ ಮೌಲ್ಯವರ್ಧಿತ ಬೆಲೆ ದೊರಕಬೇಕು, ಪ್ರತಿಯೊಬ್ಬ ರೈತರು ತಮ್ಮ ಬೆಳೆಗಳನ್ನು ಉತ್ಪನ್ನಗಳನ್ನಾಗಿ ಪರಿವರ್ತಿಸಬೇಕು. ದೇಸಿ ಕುಲ ಕಸುಬು ಉಳಿಯುವಂತಾಗಬೇಕು. ಕುಲ ಕಸುಬುದಾರರ ಉತ್ಪನ್ನಗಳು ಮಲ್ಟಿ ನ್ಯಾಷನಲ್ ಕಂಪನಿಗಳಿಗೆ ಸೆಡ್ಡು ಹೊಡೆಯುವಂತಿರಬೇಕು. ಈ ರೀತಿಯ ಒಂದು ಅಂತಾರಾಷ್ಟ್ರೀಯ ಮಟ್ಟದ ಕೇಂದ್ರ ಸ್ಥಾಪಿಸಲು ತಮ್ಮ ಅನುಭವದ ಮಾರ್ಗದರ್ಶನ ನೀಡಬೇಕು ಎಂದು ಶತಾಯುಷಿ  ಸಿದ್ಧಗಂಗಾ ಶ್ರೀಗಳಲ್ಲಿ ತುಮಕೂರು ಸಂಸದ ಜಿ.ಎಸ್.ಬಸವರಾಜ್ ಮನವಿ ಮಾಡಿದರು. ಅವರು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ನೇತೃತ್ವದಲ್ಲಿ ತುಮಕೂರು-ನಿಮ್ಜ್, ಆರ್ಟಿಸಾನ್ ಹಬ್ ರೀಸರ್ಚ್ ಹಬ್ ಕ್ಲಸ್ಟರ್ ಹಬ್ ವಿಜ್ಞಾನ ಗುಡ್ಡ ಯಶಸ್ವಿ ಯೋಜನೆ ಅನುಷ್ಠಾನಗೊಳಿಸಲು, ಪಬ್ಲಿಕ್ ಮಾಸ್ಟರ್ ಪ್ಲಾನ್ ಸಿದ್ದಪಡಿಸಲು ಚಿಂತನೆ ನಡೆಸಿದ್ದು, ಈ ಬಗ್ಗೆ ಜನಾಂದೋಲನವನ್ನು ಹಮ್ಮಿಕೊಂಡಿದ್ದರ ಹಿನ್ನೆಲೆಯಲ್ಲಿ ಸಿದ್ದಗಂಗಾ ಶ್ರೀಗಳಿಗೆ ಕಿರುಹೊತ್ತಿಗೆ ಸಮರ್ಪಿಸುವ ಸಂದರ್ಭದಲ್ಲಿ ಮನವಿ ಮಾಡಿದರು. ಆರ್.ರಘೋತ್ತಮರಾವ್, ವಾಮನರಾವ್, ಹೆಚ್.ಜಿ. ಬಸವರಾಜ್, ಕೊಪ್ಪಳ ನಾಗರಾಜ್, ಕೆ.ವಿ.ಪ್ರಕಾಶ್, ಪ್ರದೀಪ್ ಹೆಂಗವಳ್ಳಿ, ಅನಿತ ಪ್ರದೀಪ್, ಹೊನ್ನೇಶ್ ಕುಮಾರ್, ಕೃಷ್ಣಸ್ವಾಮಿ, ಬಂಡೇಪಾಳ್ಯ ಸಿದ್ದು, ಫೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್ ಉಪಸ್ಥಿತರಿದ್ದರು.
ಅಕ್ರಮ ಮರಳು ಸಾಗಾಣೆ: 6 ಲಾರಿ ವಶ
ಶಿರಾ: ರಾತ್ರಿವೇಳೆ ಕಾರ್ಯಾಚರಣೆ ನಡೆಸಿದ ತಹಸೀಲ್ದಾರ್ ನೇತೃತ್ವದ ತಂಡ ಕಳ್ಳಂಬೆಳ್ಳ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳು ತುಂಬುತ್ತಿದ್ದ 6 ಲಾರಿಗಳನ್ನು ವಶಪಡಿಸಿಕೊಂಡು ಕಳ್ಳಂಬೆಳ್ಳ ಠಾಣೆಗೆ ಒಪ್ಪಿಸಿದ್ದಾರೆ. ವಶಪಡಿಸಿಕೊಂಡ ಲಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ತಹಸೀಲ್ದಾರ್ ಕಾಂತರಾಜು ತಿಳಿಸಿದ್ದಾರೆ. ಅಲ್ಲದೆ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ 7 ಮರಳು ತುಂಬಿದ ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದ್ದು,  ದಂಡ ವಿಧಿಸಲಾಗಿದೆ. ಮತ್ತೆ ಕೆಲವು ವಾಹನ ಮತ್ತು ಅದರ ಮಾಲಿಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.