ಕಲ್ಪವೃಕ್ಷ ಅಭಿನಂದನಾ ಗ್ರಂಥ ಬಿಡುಗಡೆ
ಕ.ಪ್ರ. ವಾರ್ತೆ ್ಣ ತುಮಕೂರು ್ಣ ಮಾ.29
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಲ್ಪತರು ಸಾಂಸ್ಕೃತಿಕ ವೇದಿಕೆಯಿಂದ ಆಯೋಜಿಸಿದ್ದ ಅಮೃತ ಮಹೋತ್ಸವ ಮತ್ತು ಕಲ್ಪವೃಕ್ಷ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ ವಿಶಿಷ್ಟವಾಗಿ ಜರುಗಿತು.
ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಬಸವಾನಂದ ಸ್ವಾಮೀಜಿ, ನುಡಿ ದಾಸೋಹವನ್ನುಣಿಸುತ್ತ ಶ್ರೀಯುತರ ಜೀವನದ ರಸ ನಿಮಿಷ ಅವರ ಬದುಕಿನ ಪ್ರತಿಬಿಂಬವನ್ನು ಸಾರುತ್ತಿವೆ.ಇವರ ಕೃತಿಗಳನ್ನು ಓದಿ ಅದರಲ್ಲಿನ ವಿಚಾರವನ್ನು ಆಚರಣೆಗೆ ತರುತ್ತ ಕಸದಿಂದ ರಸ ಎಂಬುದನ್ನು ಇವರಿಂದ ಕಲಿತ ನಿದರ್ಶನ ನಾವಾಗಿದ್ದೇವೆ ಎಂದು ತಿಳಿಸಿದರು. ಡಾ.ಪ್ರದೀಪ್‌ಕುಮಾರ್ ಹೆಬ್ರಿ ಮಾತನಾಡಿ, ಉಸಿರು ಬರುವಾಗ ಹೆಸರಿರುವುದಿಲ್ಲ. ಉಸಿರು ಹೋಗುವಾಗ ನಮ್ಮ ಹೆಸರು ಇರಬೇಕು ಎಂದು ತಿಳಿಸುತ್ತಾ, ಮರಿದೇವರು ಜೀವನದಲ್ಲಿ ಹಿರಿದೇವರಾಗಿ ಬದುಕಿದ ಯಶಸ್ವಿ ಹೋರಾಟಗಾರರು ಎಂದರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಸೋಮು ಭಾಸ್ಕರಾಚಾರ್ ಮಾತನಾಡಿ, ಮರಿದೇವರ ಜೀವನವು ವಿಶಿಷ್ಟತೆಗಳಿಂದ ಕೂಡಿದುದ್ದಲ್ಲದೆ, ಶರಣ ಸಂಸ್ಕೃತಿ ಮೈಗೂಡಿಸಿಕೊಂಡ ಕೆಲವರಲ್ಲಿ ಇವರು ಒಬ್ಬರು. ಹೋರಾಟದ ಬದುಕಿನಲ್ಲಿ ನಿತ್ಯವೂ ಓದುಗರಲ್ಲಿ ನಮ್ಮ ಜೊತೆಯಲ್ಲಿರುವುದೇ ಪುಣ್ಯವಿಶೇಷ ಎಂದು ಬಣ್ಣಿಸಿದರು.
ಅಭಿನಂದನೆ ಸ್ವೀಕರಿಸಿದ ಮರಿದೇವರು, ಹಲವಾರು ದೇಶಗಳಲ್ಲಿನ ಪ್ರವಾಸದ ರಸ ಕ್ಷಣಗಳನ್ನು ವಿವರಿಸುತ್ತಾ ಅಲ್ಲಿಂದ ಪ್ರೇರಣೆ ಗೊಂಡು ರಾಜ್ಯದಲ್ಲಿ ವಿಶ್ವ ಮಟ್ಟದ ನೂರಾ ಒಂದು ಶಿಲಾಮೂರ್ತಿಗಳನ್ನು ಸ್ಥಾಪಿಸುವ ಕಾರ್ಯಕ್ಕೆ ಪ್ರೇರಣೇಯಾಗಿ ಜಗತ್ತಿನ ಕಣ್ಣುಗಳನ್ನು ಇಲ್ಲಿಗೆ ಸೆಳೆಯಲು ಕೋಟ್ಯಂತರ ರು. ವೆಚ್ಚದಲ್ಲಿ ನಿರ್ಮಿಸಲು ಹಾಕಿಕೊಂಡಿರುವ ಯೋಜನೆ ಪ್ರಕಟಪಡಿಸಿದರು. ಇದೆ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ತೋಟದ ಮನೆ ಜಯದೇವಪ್ಪ ಸೇರಿದಂತೆ ಸುಮಾರು 20 ಜನರನ್ನು ಸನ್ಮಾನಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

