ಇಂದು ಯುವ ವಿಜ್ಞಾನಿ ಪ್ರಶಸ್ತಿ ಪ್ರದಾನ
ತುಮಕೂರು: ಇಲ್ಲಿನ ಎಂಪ್ರೆಸ್ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಮಾ.30 ರಂದು ಬೆಳಿಗ್ಗೆ 9.30 ಕ್ಕೆ 2012-13ನೇ ಸಾಲಿನ ಜಿಲ್ಲಾ ಯುವ ವಿಜ್ಞಾನಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಕ.ರಾ.ವಿ.ಪ. ಅಧ್ಯಕ್ಷ ಡಾ. ಹೆಚ್.ಎಸ್.ನಿರಂಜನ ಆರಾಧ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಪ.ಪೂ.ಶಿ. ಇಲಾಖೆ ಉಪ ನಿರ್ದೇಶಕ ಜಯಪ್ರಕಾಶ್, ಸಾ.ಶಿ. ಇಲಾಖೆ ಉಪ ನಿರ್ದೇಶಕ ಬಿ.ಮೋಹನಕುಮಾರ್, ಟಿ.ಎಸ್. ಅಂಜಿನಪ್ಪ, ಎಲ್.ಪದ್ಮಾವತಿ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಪ್ರಾಚಾರ್ಯ ಬಿ. ಮರುಳಯ್ಯ ವಹಿಸಲಿದ್ದಾರೆ.
ಇಂದು ಪ್ರತಿಭಾ ಪುರಸ್ಕಾರ ಸಮಾರಂಭ
ತುಮಕೂರು: ಇಲ್ಲಿನ ಸರ್ವೋದಯ ಕಾಲೇಜು ಬಳಿ ಇರುವ ಕೆಇಬಿ ಇಂಜಿನಿಯರ್ಸ್ ಅಸೋಸಿಯೇಷನ್ ಹಾಲ್‌ನಲ್ಲಿ ಬೆಂಕಿಯ ಬಲೆ ಪತ್ರಿಕೆಯ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ, ಉಚಿತ ವಸ್ತ್ರ ವಿತರಣೆ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಸಾನ್ನಿಧ್ಯವನ್ನು ಮಾಯಸಂದ್ರದ ಕಲ್ಪತರು ಆಶ್ರಮದ ಶಿವಕುಮಾರನಾಥ ಸ್ವಾಮೀಜಿ ವಹಿಸಲಿದ್ದಾರೆ. ಬೆಟ್ಟದಹಳ್ಳಿ ಗವಿಮಠದ ಚಂದ್ರಶೇಖರ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಅನುರಾಗ್ ತಿವಾರ್ ನೆರವೇರಿಸುವರು. ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ಪತ್ರಕರ್ತರ ಅಕಾಡೆಮಿ ಅಧ್ಯಕ್ಷ ವಿ. ಲೋಕೇಶ್‌ಮೂರ್ತಿ ವಹಿಸಲಿದ್ದಾರೆ. ಟಿ.ಆರ್. ಸುರೇಶ್, ಜಿ. ಇಂದ್ರಕುಮಾರ್ ಆಗಮಿಸಲಿದ್ದಾರೆ.
ಇಂದು ದತ್ತಿ ಉಪನ್ಯಾಸ ಕಾರ್ಯಕ್ರಮ
ತುಮಕೂರು: ಇಲ್ಲಿನ ಸಿದ್ಧಗಂಗಾ ಡಿ.ಇಡಿ ಕಾಲೇಜಿನಲ್ಲಿ ಮಾ. 30 ರಂದು ಬೆಳಿಗ್ಗೆ 8.30 ಗಂಟೆಗೆ ಜಿಲ್ಲಾ ಹಾಗೂ ತಾಲೂಕು ಕಸಾಪ ವತಿಯಿಂದ ದಿ. ಆರ್.ಎಸ್.ಆರಾಧ್ಯ ದತ್ತಿ ಹಾಗೂ ಲೇಖಕಿಯರ ಸಮ್ಮೇಳನದ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಉದ್ಘಾಟನೆಯನ್ನು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಶಾಂತಾ ಸನ್ಮತಿಕುಮಾರ್ ನೆರವೇರಿಸುವರು. ಉಪನ್ಯಾಸವನ್ನು ವೆಂಕಟರೆಡ್ಡಿ ರಾಮರೆಡ್ಡಿ ನೀಡಲಿದ್ದಾರೆ. ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷ ಸಿ.ಎನ್.ಸುಗುಣಾದೇವಿ ಮಾತನಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಎಸ್.ಪ್ರಸನ್ನಮೂರ್ತಿ, ಕೆಂ.ಬ. ರೇಣುಕಯ್ಯ ಆಗಮಿಸುವರು. ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಸೋಮು ಭಾಸ್ಕರಾಚಾರ್ ವಹಿಸಲಿದ್ದಾರೆ.
ನಾಳೆ ರಾಜಣ್ಣಗೆ
ಅಭಿನಂದನೆ
ತುಮಕೂರು: ಇಲ್ಲಿನ ಕವಿತಾಕೃಷ್ಣ ಸಾಹಿತ್ಯ ಮಂದಿರದಲ್ಲಿ ಮಾ. 31 ರಂದು ಬೆಳಗ್ಗೆ 10.30 ಕ್ಕೆ ಪ್ರೆಸ್ ರಾಜಣ್ಣ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ. ಅಧ್ಯಕ್ಷತೆಯನ್ನು ಕವಿತಾಕೃಷ್ಣ ವಹಿಸಲಿದ್ದಾರೆ. ಎನ್.ಆರ್.ಜಯರಾಮ್ ಸನ್ಮಾನಿಸಲಿದ್ದಾರೆ. ಕೆ.ಬಿ. ಜಯಣ್ಣ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ವಿಶೇಷ ಅತಿಥಿಯಾಗಿ ವಿಜಯಲಕ್ಷ್ಮೀ ರಾಜಣ್ಣ ಆಗಮಿಸುವರು. ಕೆ.ಜಿ.ಎಲ್. ರವಿ, ವಿಜಯಕುಮಾರ್, ಕೇಶವಮೂರ್ತಿ ಮುಂತಾದವರು ಉಪಸ್ಥಿತರಿರುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

