ತುಮಕೂರು

'ಜಾತಿವಾರು ಗಣತಿ ಅನುಷ್ಠಾನ ವಿಫಲ'

Published On :

ಚಿಕ್ಕನಾಯಕನಹಳ್ಳಿ: ಕೇಂದ್ರ ಸರ್ಕಾರ ಜಾತಿವಾರು ಗಣತಿಗೆ 2004-05ರಲ್ಲಿ ಅನುಮತಿ ನೀಡಿದ ಲಾಗಾಯ್ತು, ಎರಡು ಮೂರು  ಅಧ್ಯಕ್ಷರು  ಬದಲಾವಣೆಯಾದರು, ಉದಾಸೀನದಿಂದಾಗಿ ಜಾತಿವಾರು ಗಣತಿ ಅನುಷ್ಠಾನಗೊಳ್ಳುವಲ್ಲಿ ವಿಫಲವಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಶಂಕರಪ್ಪ ತಿಳಿಸಿದರು. ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕಿಗೆ ಶಾಲಾ ಕಾರ್ಯಕ್ರಮ ನಿಮಿತ್ತ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ನಾನು ಬಿಜೆಪಿ ಸರ್ಕಾರದಲ್ಲಿ ಅಧ್ಯಕ್ಷನಾದ ನಂತರ ಆಯೋಗದ ಮೊದಲ ಸಭೆಯಲ್ಲಿಯೇ, ಮತ್ತೊಮ್ಮೆ ಜಾತಿವಾರು ಜನಗಣತಿ ಕೈಗೊಳ್ಳಲು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಜಾತಿವಾರು ಜನಗಣತಿ ವರ್ಗೀಕರಣದ ಬಗ್ಗೆ ಹಿಂದುಳಿದ ವರ್ಗಗಳ ವಿಚಾರವಾಗಿ ಹೊಸದಾಗಿ ಸೇರಿಸುವುದು ಅಥವಾ ಕೈಬಿಡುವ ಬಗ್ಗೆ ಸಮಸ್ಯೆಯಿದ್ದರೆ ಕಾನೂನು ವ್ಯಾಪ್ತಿಯಲ್ಲಿ ಅಂತಹ ಪ್ರಕರಣಗಳನ್ನು ಪರಿಹರಿಸಲಾಗುವುದು. ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮದಲ್ಲಿ ಈ ವರ್ಗಗಳಿಗೆ ತೊಂದರೆ ಉಂಟಾಗಿ, ಆ ಬಗ್ಗೆ ನಮ್ಮ ಗಮನಕ್ಕೆ ತಂದರೆ ಪರಿಶೀಲಿಸಿ ನ್ಯಾಯ ದೊರಕಿಸಿಕೊಡುವುದಾಗಿ ತಿಳಿಸಿದರು.ಹಿಂದುಳಿದ ವರ್ಗದ ಜಾತಿಗಳ ಸಮಸ್ಯೆ ಬಗೆಹರಿಸಲು ಸಮೀಕ್ಷೆ ಮಾಡಿ ಮುಖ್ಯಂತ್ರಿಗಳಿಗೆ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಜಾತಿವಾರು ಪಟ್ಟಿ ಸಲ್ಲಿಸಿದ್ದೇನೆ. 1972ರಲ್ಲಿ ಆರಂಭಗೊಂಡ ಆಯೋಗದಿಂದ
ಇಲ್ಲಿಯವರೆಗೂ ಬೇರೆ ಯಾವ ಅಧ್ಯಕ್ಷರ ಕಾಲಾವಧಿಯಲ್ಲು ಇಷ್ಟು ತ್ವರಿತವಾಗಿ ಕ್ರಮಕೈಗೊಂಡ ಉದಾಹರಣೆ ಇಲ್ಲ. ಹಿಂದುಳಿದ ವರ್ಗಗಳ ಆರ್ಥಿಕ, ಶೈಕ್ಷಣಿಕ ಹಿನ್ನೆಲೆ, ಆಚಾರ ವಿಚಾರ, ಜಾತಿ ಪದ್ಧತಿ ಮತ್ತು ಸಾಮಾಜಿಕ ಸಂಸ್ಕಾರ ಹಿನ್ನೆಲೆಗಳನ್ನು ಅರಿತು ಮತ್ತೊಮ್ಮೆ ಜಾತಿ ಪುನರ್‌ವಿಂಗಡಣೆ ಮಾಡಲು ತಿಳಿಸಿರುವುದಾಗಿ ಹಾಗು ಈಗಿನ ಪರಿಸ್ಥಿತಿ ಬದಲಾಗಿರುವುದರಿಂದ 100 ವರ್ಷಗಳ ಹಿಂದೆ ಬ್ರಿಟಿಷ್ ಅಧಿಕಾರಿಗಳು  ಬರೆದಿದ್ದ ತಷ್ಟರ್ ಪುಸ್ತಕವನ್ನು ಬದಲಾಯಿಸಲು ಕುಲಶಾಸ್ತ್ರಜ್ಞರನ್ನು ಭೇಟಿ ಮಾಡಿ ವಿಶೇಷವಾಗಿರುವಂತಹ ಗ್ರಂಥವನ್ನು ರಚಿಸಲು ಮುಂದಾಗಿದ್ದು, ಉನ್ನತ ಅಧ್ಯಯನ ಮಾಡಲು ಈ ಗ್ರಂಥದಿಂದ ಪ್ರತಿಯೊಬ್ಬ ವಿದ್ಯಾರ್ಥಿಗೂ ಅನುಕೂಲವಾಗಲಿದೆ. ಈ ಗ್ರಂಥ ಸಿದ್ಧವಾಗಲು ಸುಮಾರು 2 ಕೋಟಿ  ಹಣ ವೆಚ್ಚವಾಗಲಿದ್ದು, ಗ್ರಂಥ ಮಾರಾಟದಿಂದ 6 ಕೋಟಿಗಳಷ್ಟು ಲಾಭವಾಗಲಿದೆ ಎಂದರು. ಮಾಜಿ ಶಾಸಕ ಕೆ.ಎಸ್. ಕಿರಣ್‌ಕುಮಾರ್, ತಾಲೂಕು ಅಧ್ಯಕ್ಷ ಮಿಲ್ಟ್ರಶಿವಣ್ಣ, ಮಡಿವಾಳ ಜನಾಂಗದ ಮುಖಂಡ ಸಿ.ಎಸ್. ನಟರಾಜು, ತಹಸೀಲ್ದಾರ್ ಎನ್.ಆರ್. ಉಮೇಶಚಂದ್ರ, ಜಿಪಂ ಸದಸ್ಯ ಎಚ್.ಬಿ.ಪಂಚಾಕ್ಷರಿ, ತಾಪಂ ಅಧ್ಯಕ್ಷ ಎಂ.ಎಂ. ಜಗದೀಶ್, ಕಾರ್ಯದರ್ಶಿ ನಾಗರಾಜು, ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.