ಹೇಮಾವತಿ ನೀರು: ಬುಕ್ಕಾಪಟ್ಟಣ ಬಂದ್
ಶಿರಾ: ತಾಲೂಕಿನ ಬುಕ್ಕಾಪಟ್ಟಣ ಸೇರಿದಂತೆ ಹೋಬಳಿಯ ಹಲವು ಕೆರೆಗಳಿಗೆ ಹೇಮಾವತಿ ಮೂಲದಿಂದ ಕುಡಿಯುವ ನೀರು ಹರಿಸುವಂತೆ ಆಗ್ರಹಿಸಿ ಬುಕ್ಕಾಪಟ್ಟಣದ ವಿವಿಧ ಸಂಘಟನೆಗಳು, ಸರ್ವ ಪಕ್ಷಗಳು, ಸ್ತ್ರೀಶಕ್ತಿ ಸಂಘಟನೆಗಳು ಕರೆ ನೀಡಿದ್ದ ಬುಕ್ಕಾಪಟ್ಟಣ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು.
ಬೆಳಗ್ಗೆಯಿಂದಲೇ ಬುಕ್ಕಾಪಟ್ಟಣದಲ್ಲಿ ವ್ಯಾಪಾರಿಗಳು ಯಾವುದೇ ಅಂಗಡಿ ಮುಂಗ್ಗಟ್ಟುಗಳನ್ನು ತೆರೆದಿರಲಿಲ್ಲ. ಮಾತ್ರವಲ್ಲ, ಇಲ್ಲಿ ಯಾವುದೇ ವಾಹನಗಳು ಓಡಾಡದೆ, ಮೌನ ಆವರಿಸಿತ್ತು.
ಶಾಲಾ ಕಾಲೇಜುಗಳು, ಹೋಟೆಲ್‌ಗಳು ಕೂಡ ಬೆಳಗ್ಗೆಯಿಂದಲೇ ಬಂದ್ ಆಗಿದ್ದವು. ಶಿರಾ ಕಡೆಯಿಂದ ಮತ್ತು ಹುಳಿಯಾರು ಕಡೆಯಿಂದ ಯಾವುದೇ ಪ್ರಯಾಣಿಕ ಬಸ್ಸುಗಳು ಬುಕ್ಕಾಪಟ್ಟಣಕ್ಕೆ ಆಗಮಿಸಲಿಲ್ಲ. ಬುಕ್ಕಾಪಟ್ಟಣದ ಚೇಳೂರು, ತುಮಕೂರು ರಸ್ತೆ, ಈಶ್ವರ ದೇವಸ್ಥಾನ ರಸ್ತೆ, ಇಂದಿರಾ ಕಾಲೋನಿ, ಮಾರುತಿ ನಗರ, ಬನ್ನಿ ನಗರ, ವಿನಾಯಕ ನಗರ, ಬ್ರಾಹ್ಮಣರ ಬೀದಿ, ಬುಕ್ಕಾಪಟ್ಟಣ ಬಸ್‌ನಿಲ್ದಾಣ ಹಾಗೂ ವೀರಭದ್ರಸ್ವಾಮಿ ಚಿತ್ರಮಂದಿರದ ರಸ್ತೆ ಈ ಕಡೆಗಳಲ್ಲೆಲ್ಲ ಬೆಳಿಗ್ಗೆಯಿಂದಲೇ ಅಂಗಡಿ ಮುಗ್ಗಟ್ಟುಗಳು ಬಂದ್ ಆಗಿದ್ದವು.
ಮೆರವಣಿಗೆ: ಬುಕ್ಕಾಪಟ್ಟಣ ವೃತ್ತದಿಂದ ಬುಕ್ಕಾಪಟ್ಟಣ ಹೋಬಳಿ ಗೋಪಾಲ ದೇವರಹಳ್ಳಿ ಗ್ರಾಪಂ, ಬುಕ್ಕಾಪಟ್ಟಣ ಗ್ರಾಪಂ, ರಾಮಲಿಂಗಾಪುರ ಗ್ರಾಪಂ, ನೇರಲಗುಡ್ಡ ಗ್ರಾಪಂ, ಹುಯಿಲ್‌ದೊರೆ ಗ್ರಾಪಂ, ದೊಡ್ಡ ಅಗ್ರಹಾರ ಗ್ರಾಪಂಗೆ ಸೇರಿದ ಸಾವಿರಾರು ನಾಗರಿಕರು, ಸ್ತ್ರೀ ಶಕ್ತಿ ಸಂಘಟನೆಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ದೇವಸ್ಥಾನ ಆಡಳಿತ ಮಂಡಳಿ ಸದಸ್ಯರು, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸೇರಿದಂತೆ ಹಲವು ಪಕ್ಷಗಳು ಮುಖಂಡರು, ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಮುಖಂಡರು ಮತ್ತಿತರರು ಸಾವಿರಾರು ಸಂಖ್ಯೆಯಲ್ಲಿ ಬುಕ್ಕಾಪಟ್ಟಣದ ಮುಖ್ಯ ರಸ್ತೆಗಳಲ್ಲಿ ಬುಕ್ಕಾಪಟ್ಟಣ ವಲಯಕ್ಕೆ ಹೇಮಾವತಿ ನೀರು ಹರಿಸಿ ಎಂದು ಘೋಷಣೆ ಕೂಗುತ್ತ ಮೆರವಣಿಗೆ ನೆಡೆಸಿದರು.
ಬೃಹತ್ ಸಮಾರಂಭ: ಮೆರವಣಿಗೆ ನಂತರ ಬುಕ್ಕಾಪಟ್ಟಣ ಬಸ್‌ನಿಲ್ದಾಣದ ವಿಎಸ್‌ಎಸ್‌ಎನ್ ಕಚೇರಿ ಮುಂಭಾಗದಲ್ಲಿ ಬೃಹತ್ ಸಮಾರಂಭ ಏರ್ಪಡಿಸಲಾಗಿತ್ತು. ಸಮಾರಂಭದಲ್ಲಿ ಪಟ್ಟನಾಯಕನಹಳ್ಳಿ ಕ್ಷೇತ್ರದ ನಂಜಾವಧೂತ ಸ್ವಾಮೀಜಿ, ಕಪ್ಪೂರು ಮಠದ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ, ಶಿಡ್ಲೇಕೋಣದ ವಾಲ್ಮೀಕಿ ಸಂಜಯ ಕುಮಾರ ಸ್ವಾಮೀಜಿ, ಆದಿ ಜಾಂಬವ ಬೃಹನ್ ಮಠದ ಮಾರ್ಕಾಂಡೇಯ ಮುನಿ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಈ ಭಾಗಕ್ಕೆ ಕುಡಿವ ನೀರಿನ ಸಮಸ್ಯೆ ಇದೆ. ಮಳೆ ವೈಫಲ್ಯದಿಂದ ಅಂತರ್ಜಲ ಕುಸಿದಿದೆ. ಇಲ್ಲಿ 1000 ಅಡಿ ಭೂಮಿ ಕೊರೆದರೂ, ನೀರು ಸಿಗುತ್ತಿಲ್ಲ. ಒಂದು ವೇಳೆ ಸಿಕ್ಕರೂ ಫ್ಲೋರೈಡ್ ಯುಕ್ತವಾಗಿದೆ. ಈ ಕಾರಣಕ್ಕೆ ಇಲ್ಲಿನ ಜನರ ಹೋರಾಟ ಪರಿಗಣಿಸಿ ಈ ಭಾಗಕ್ಕೆ ಹೇಮಾವತಿ ನೀರು ಹರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಹೆಚ್.ಜಿ. ಲಿಂಗಯ್ಯ, ಶಿವಕುಮಾರ್, ಜಯಪ್ರಕಾಶ್, ಮುದ್ದುಗಣೇಶ್, ನವೀನ್, ಜಿ.ಪಂ.ಸದಸ್ಯೆ ಪುಟ್ಟಮಣಿ ಬೊಮ್ಮಣ್ಣ, ಆರ್.ವಿ.ಪುಟ್ಟಕಾಮಣ್ಣ, ಚನ್ನೇಗೌಡ, ತಾಪಂ ಮಾಜಿ ಅಧ್ಯಕ್ಷ ಬುಕ್ಕಾಪಟ್ಟಣ ಮಂಜುನಾಥ್, ತಾಪಂ ಸದಸ್ಯೆ ಶೈಲಜ, ನೇರಲಗುಡ್ಡ ಶಿವಕುಮಾರ್, ಕೆಂಕೆರೆ ಸತೀಶ್, ಶಿವಶಕ್ತಿ ಸಂಘದ ಸದಸ್ಯರು, ಬುಕ್ಕಾಪಟ್ಟಣ ಹೋಬಳಿ 6 ಗ್ರಾಪಂಗಳ ಜನಪ್ರತಿನಿಧಿಗಳು, ಮಾಜಿ ಜಿಪಂ ಸದಸ್ಯ ರಾಮಚಂದ್ರಪ್ಪ, ಬುಕ್ಕಾಪಟ್ಟಣ ಗ್ರಾಪಂ ಅಧ್ಯಕ್ಷೆ ಪಾರ್ವತಮ್ಮ, ಉಪಾಧ್ಯಕ್ಷ ಪ್ರಕಾಶ್ ಹಾಗೂ ಸರ್ವ ಪಕ್ಷದ ಮುಖಂಡರು ಸೇರಿದಂತೆ 5000 ಕ್ಕೂ ಹೆಚ್ಚು ಮಂದಿ ನಾಗರಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

