'ರೇಷ್ಮೆ ಬೆಳೆಯಿಂದ ಆರ್ಥಿಕ ಭದ್ರತೆ ಸಾಧ್ಯ'
ತುಮಕೂರು: ಜಿಲ್ಲೆಯ ರೈತರು ತೆಂಗು, ಅಡಕೆ ಜತೆಗೆ ನಿಶ್ಚಿತ ಅದಾಯ ತರುವ ರೇಷ್ಮೆಯನ್ನು ಪರ್ಯಾಯ ಬೆಳೆಯಾಗಿ ಬೆಳೆಯುವ ಮೂಲಕ ತಮ್ಮ ಆರ್ಥಿಕ ಭದ್ರತೆ ಉತ್ತಮ ಪಡಿಸಿಕೊಳ್ಳುವ ಬಗ್ಗೆ ಆಲೋಚಿಸಬೇಕಾಗಿದೆ ಎಂದು ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಂಕರಲಿಂಗೇಗೌಡ ಸಲಹೆ ನೀಡಿದ್ದಾರೆ.
ನಗರದ ಡಾ.ಗುಬ್ಬಿವೀರಣ್ಣ ರಂಗಮಂದಿರದಲ್ಲಿ ಜಿಲ್ಲಾ ರೇಷ್ಮೆ ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನೆ ಹಾಗೂ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತೆಂಗು, ಅಡಿಕೆ, ಕಬ್ಬಿನಂತಹ ಬೆಳೆಗಳಿಗೆ ಹೋಲಿಸಿದರೆ ರೇಷ್ಮೆ ಬೆಳೆ ಬೆಳೆಯುವುದರಿಂದ ಹೆಚ್ಚಿನ ಆದಾಯ ಪಡಯಬಹುದು ಎಂದರು.
ಒಂದು ಎಕರೆ ಭೂಮಿಯಲ್ಲಿ ಒಂದು ವರ್ಷಕ್ಕೆ ಕನಿಷ್ಠ ರು.1.50 ಲಕ್ಷ ಗಳಿಸಬಹುದು. ಆದ್ದರಿಂದ ಇತರೆ ಬೆಳೆಗಳ ಜೊತೆಗೆ, ರೇಷ್ಮೆಯನ್ನು ಜಿಲ್ಲೆಯ ರೈತರು ಬೆಳೆಯಲು ಮುಂದಾಗಬೇಕು ಎಂದರು.
ಭಾರತ ದೇಶಕ್ಕೆ ಒಂದು ವರ್ಷಕ್ಕೆ ಮೂವತ್ತು ಸಾವಿರ ಮೆಟ್ರಿಕ್ ಟನ್ ರೇಷ್ಮೆ ನೂಲಿನ ಅಗತ್ಯವಿದೆ. ಆದರೆ ಭಾರತದಲ್ಲಿ ಇದುವರೆಗೂ ಉತ್ಪತ್ತಿಯಾಗಿರುವ ರೇಷ್ಮೆ ನೂಲಿನ ಪ್ರಮಾಣ 17 ರಿಂದ 18 ಸಾವಿರ ಮೆಟ್ರಿಕ್‌ಟನ್ ಮಾತ್ರ. ಉಳಿದ ರೇಷ್ಮೆ ನೂಲನ್ನು ಹೊರದೇಶಗಳಿಂದ ಅಮದು ಮಾಡಿಕೊಳ್ಳಲಾಗುತ್ತಿದೆ. ಕರ್ನಾಟಕದಲ್ಲಿ ವರ್ಷಕ್ಕೆ 7 ಸಾವಿರ ಮೆಟ್ರಿಕ್‌ಟನ್ ರೇಷ್ಮೆ ಉತ್ಪಾದಿಸಲಾಗುತ್ತಿದ್ದು, ಅದರಲ್ಲಿ ತುಮಕೂರು ಜಿಲ್ಲೆಯ ಪಾಲು 300 ಮೆ.ಟ.ಆಗಿದೆ. ರಾಷ್ಟ್ರದ ಒಟ್ಟಾರೆ ರೇಷ್ಮೆ ಉತ್ಪಾದನೆಗೆ ಶೇ.1ರಷ್ಟು ಕೊಡುಗೆ ನೀಡುತ್ತಿರುವ ತುಮಕೂರು ಜಿಲ್ಲೆಯ ಅಧುನಿಕ ಸಲಕರಣೆ ಮತ್ತು ಹೊಸ ತಳಿಯ ಬೆಳೆಗಳ ಮೂಲಕ ಶೇ.1 ರಷ್ಟಿರುವ ಪ್ರಮಾಣವನ್ನು ಶೇ.2 ಕ್ಕೆ ಹೆಚ್ಚಿಸಬೇಕೆಂದು ಅವರು ರೇಷ್ಮೆ ಬೆಳೆಗಾರರಿಗೆ ಸಲಹೆ ನೀಡಿದರು.
ರೇಷ್ಮೆ ಬೆಳೆ ವಿಸ್ತರಿಸಲು ರೈತರು ಮುಂದೆ ಬಂದರೆ ಸರಕಾರ ಎಲ್ಲಾ ರೀತಿಯ ನೆರವು ನೀಡಲು ಸಿದ್ದವಿದೆ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಬಜೆಟ್ ಪೂರ್ವಭಾವಿಯಾಗಿ ನಡೆದ ಸಭೆಯಲ್ಲಿ ರೇಷ್ಮೆ ಬೆಳೆಯುವ ರೈತರನ್ನು ಹೊರತು ಪಡಿಸಿ ಉಳಿದ ಎಲ್ಲಾ ಬೆಳೆಗಳನ್ನು ಬೆಳೆಯುವ ರೈತರು ಭಾಗವಹಿಸಿ 2013-14ರ ಬಜೆಟ್‌ನಲ್ಲಿ ಕೆಲವು ಸವಲತ್ತು ಕೇಳಿದ್ದಾರೆ. ಅದರೂ ಸರಕಾರ ರೇಷ್ಮೆ ಬೆಳೆಗಾರರ ಬೇಡಿಕೆ ಈಡೇರಿಸಲು ಸಿದ್ದವಿದೆ ಎಂದರು.
ಭಾರತದ ರೇಷ್ಮೆ ಅಲ್ಲಾಡಿಸಲು ಸಾಧ್ಯವಿಲ್ಲ: ಕೇಂದ್ರ ರೇಷ್ಮೆ ಅಭಿವೃದ್ಧಿ ಮಂಡಳಿ ನಿವೃತ್ತ ಅಧಿಕಾರಿ ಡಾ.ಸೋಮಶೇಖರ್ ಮಾತನಾಡಿ,1980 ರಿಂದ ಕರ್ನಾಟಕಕ್ಕೆ ಪರಿಚಯ ರೇಷ್ಮೆ ಬೆಳೆ ಇಂದು ಒಂದು ಪ್ರಮುಖ ಬೆಳೆಯಾಗಿದೆ. ಡಬ್ಲ್ಯುಟಿಒ ಒಪ್ಪಂದ ನಂತರ ಇತರೆ ಕೃಷಿ ಬೆಳೆಗಳಂತೆ ರೇಷ್ಮೆಯೂ ಚೈನಾ ಶಿಲ್ಕ್‌ನ ಒತ್ತಡ ಎದುರಿಸುತ್ತಿದೆ. ಆದರೆ, ನಮಲ್ಲಿ ಕೈಮಗ್ಗಗಳು ಇರುವವರೆಗೆ ಚೈನಾ ಶಿಲ್ಕ್ ಭಾರತದ ರೇಷ್ಮೆಯನ್ನು ಅಲ್ಲಾಡಿಸಲು ಸಾಧ್ಯವಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆತಂಕ ಪಡುವ ಅಗತ್ಯವಿಲ್ಲ: ನಮ್ಮ ರೇಷ್ಮೆಗೆ ಇರುವಂತಹ ಮೃದುತ್ವ, ಹೊಳಪು, ಗರಿಗರಿಯಾದ ಬಟ್ಟೆಯನ್ನು ಚೈನಾ ಶಿಲ್ಕ್‌ನಿಂದ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ರೇಷ್ಮೆ ಬೆಳೆಗಾರರು ಆತಂಕ ಪಡುವ ಅಗತ್ಯವಿಲ್ಲ ಎಂದು ಕಿವಿಮಾತು ಹೇಳಿದರು.
ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕ ಹರವಣಸಿ, ನಾಗರಾಜ್,ಮುತ್ಸಫ್ಹ,ಚಿಕ್ಕಬಳ್ಳಾಪುರ ರೇಷ್ಮೆ ಬೆಳೆಗಾರರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಮಳ್ಳೂರು ಶಿವಣ್ಣ, ತುಮಕೂರು ಜಿಲ್ಲಾ ರೇಷ್ಮೆ ಬೆಳೆಗಾರರ ಸಂಘದ ಪದಾಧಿಕಾರಿಗಳಾದ ಎಸ್.ವಿ. ಸ್ವಾಮಿ, ಶಿವಾನಂದಯ್ಯ, ವೀರಣ್ಣ, ರೈತ ಸಂಘದ ಜಿಲ್ಲಾಧ್ಯಕ್ಷ ಗೋವಿಂದರಾಜ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

