ನಾಳೆಯಿಂದ ಹಾಡು, ಕುಣಿತ...
ತುಮಕೂರು: ಮತ್ತೊಂದು ಜಿಲ್ಲಾ ಉತ್ಸವಕ್ಕೆ ಕಲ್ಪತರು ನಾಡಾದ ತುಮಕೂರು ಸಜ್ಜಾಗುತ್ತಿದೆ. ಇದೇ ತಿಂಗಳ 25 ರಿಂದ ಮೂರು ದಿವಸಗಳ ಕಾಲ ನಡೆಯುವ ವರ್ಣರಂಜಿತ ಉತ್ಸವಕ್ಕೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕಲಾವಿದರು ತಮ್ಮ ಪ್ತಿಭಾ ಪ್ರದರ್ಶನಕ್ಕೆ ಸಾಕ್ಷಿಯಾಗಲಿದ್ದಾರೆ.
ಅಂತಾರಾಷ್ಟ್ರೀಯ ಕಲಾವಿದರಾದ ಹರಿಹರ್ ಹಾಗೂ ಕೈಲಾಶ್ ಕೇರ್ ಅವರಿಂದ ಗಾಯನ, ತುಪ್ಪದ ಹುಡುಗಿ ರಾಗಿಣಿ ಮತ್ತು ತಂಡದಿಂದ ನೃತ್ಯ ಸಂಭ್ರಮ, ನಾಟ್ಯ ಶಾರದೆ ನಿರುಪಮಾ ರಾಜೇಂದ್ರ ಅವರಿಂದ ಕಥಕಿತತೋಮ್ ಕಾರ್ಯಕ್ರಮ ನಡೆಯಲಿದೆ.
ಇದರ ಜತೆಗೆ ಅಂತಾರಾಷ್ಟ್ರೀಯ ಖ್ಯಾತ ಹಿನ್ನಲೆ ಗಾಯಕ ವಿಜಯಪ್ರಕಾಶ್, ಡಾ.ಸಮಿತಾ ಮಲ್ನಾಡ್, ಶುಭ ಧನಂಜಯ, ಶಶಿಧರ್ ಕೋಟೆ, ಅಪ್ಪಗೆರೆ ತಿಮ್ಮರಾಜು ಅವರಿಂದ ಜಾನಪದ ಝೇಂಕಾರ, ಇದರ ಜತೆಗೆ ಅರ್ಚನ ಉಡುಪ, ಶಿವಮೊಗ್ಗ ಸುಬ್ಬಣ್ಣ ಅವರ ಗಾಯನ ಕಾರ್ಯಕ್ರಮಗಳು ಈ ಜಿಲ್ಲಾ ಉತ್ಸವದ ಹೈಲೈಟ್‌ಗಳು. ಇದರ ಜತೆಗೆ ಬಿಂಗಾ ಖ್ಯಾತಿಯ ಹನುಮಂತಗೌಡ ಅವರನ್ನು ಸನ್ಮಾನಿಸಲಾಗುವುದು.
ಮೂರು ದಿನಗಳ ಸಾಂಸ್ಕೃತಿಕ ಉತ್ಸವಕ್ಕೆ ತುಮಕೂರಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಭರದ ಸಿದ್ಧತೆ ಆರಂಭವಾಗಿದೆ. ಮತ್ತೊಂದೆಡೆ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡುವ ಸಲುವಾಗಿ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ವಿನೂತನ ಕಾರ್ಯಕ್ರಮ ಏರ್ಪಾಟಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಈ ಮೊದಲು ಅಮಾನಿಕೆರೆಯಲ್ಲಿ ಜಿಲ್ಲಾ ಉತ್ಸವ ಮಾಡುವ ಯೋಚನೆ ಇತ್ತು. ಆದರೆ, ಕೊನೆ ಕ್ಷಣದಲ್ಲಿ ತುಮಕೂರಿನ ಜೂನಿಯರ್ ಕಾಲೇಜು ಮೈದಾನದಲ್ಲೇ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಯಿತು.
ಸುಮಾರು 30 ಸಾವಿರಕ್ಕೂ ಹೆಚ್ಚು ಮಂದಿ ಕಾರ್ಯಕ್ರಮಕ್ಕೆ ಬರುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿ ಆರ್. ಕೆ. ರಾಜು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಜೂನಿಯರ್ ಕಾಲೇಜಿನ ಮುಖ್ಯ ವೇದಿಕೆಯಲ್ಲಿ ಸ್ಥಳೀಯ ಕಲಾವಿದರಿಗೂ ಆದ್ಯತೆ ನೀಡಲಾಗಿದೆ. 26 ರಂದು ಸಂಜೆ 5 ರಿಂದ 5.30 ರವರೆಗೆ ಮಲ್ಲಿಕಾರ್ಜುನ ಕೆಂಕೆರೆ ತಂಡದಿಂದ ಸುಗಮ ಸಂಗೀತ, 5.30 ರಿಂದ 6 ಗಂಟೆಯವರೆಗೆ ಡಾ.ಲಕ್ಷ್ಮಣದಾಸ್ ತಂಡದಿಂದ ಹರಿಕಥೆ ಹಾಗೂ ಸಂಜೆ 6 ರಿಂದ 6.30 ರವರೆಗೆ ಟಿ.ಎಸ್. ಸಾಗರ್ ತಂಡದಿಂದ ನೃತ್ಯ ರೂಪಕವಿದೆ. 27 ರಂದು ಕೆ.ಎಂ.ರಾಮನ್ ತಂಡದಿಂದ ನೃತ್ಯ ರೂಪಕ ಕಾರ್ಯಕ್ರಮವಿದೆ.
ಜಿಲ್ಲಾ ಉತ್ಸವ ಸಂಬಂಧ ತುಮಕೂರಿನ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ರಂಗಭೂಮಿ, ಸಾಹಿತ್ಯ, ಮಹಿಳಾ ಗೋಷ್ಠಿಗಳು ನಡೆಯಲಿವೆ. ರಂಗಭೂಮಿ ಗೋಷ್ಠಿಯನ್ನು ಜಾನಪದ ತಜ್ಞ ಹೆಚ್.ವಿ.ವೀರಭದ್ರಯ್ಯ ಉದ್ಘಾಟಿಸಲಿದ್ದಾರೆ. ಪತ್ರಕರ್ತ, ರಂಗಸಂಘಟಕ ಉಗಮಶ್ರೀನಿವಾಸ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತ್ಯ ಗೋಷ್ಠಿಯನ್ನು ಕವಿತಾಕೃಷ್ಣ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಸೋಮು. ಭಾಸ್ಕರಾಚಾರ್ ವಹಿಸಲಿದ್ದಾರೆ. ಮಹಿಳಾ ಗೋಷ್ಠಿ ಅಧ್ಯಕ್ಷತೆಯನ್ನು ಎನ್. ಸುಜಾತ ವಹಿಸಲಿದ್ದಾರೆ.
25 ರಂದು ಸಂಜೆ 3 ಗಂಟೆಗೆ ತುಮಕೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಿಂದ ಜಾನಪದ ತಂಡಗಳ ಮೆರವಣಿಗೆಯು ಜೂನಿಯರ್ ಕಾಲೇಜು ಮೈದಾನಕ್ಕೆ ಆಗಮಿಸುವ ಮೂಲಕ 3 ದಿವಸಗಳ ವರ್ಣರಂಜಿತ ಜಿಲ್ಲಾ ಉತ್ಸವಕ್ಕೆ ಚಾಲನೆ ನೀಡಲಾಗುವುದು.
ನಂದಿಧ್ವಜ, ಯಕ್ಷಗಾನ ವೇಷಧಾರಿಗಳು, ಪೂಜಾ ಕುಣಿತ, ಪಟದ ಕುಣಿತ,ಗೊರವರ ಕುಣಿತ, ವೀರಗಾಸೆ ಮುಂತಾದ ಜಾನಪದ ತಂಡಗಳು ಮೆರವಣಿಗೆಯಲ್ಲಿ ಸಾಥ್ ನೀಡಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

