ಸಹಕಾರ ಸಂಘಗಳು ಪ್ರಗತಿ ಹೊಂದಲಿ
ಚಿಕ್ಕನಾಯಕನಹಳ್ಳಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕುಗಳು ವ್ಯವಸಾಯೇತರ ಸಾಲಗಳನ್ನು ನೀಡುವ ಮೂಲಕ ಸಂಸ್ಥೆಯನ್ನು ಆರ್ಥಿಕವಾಗಿ ಸದೃಢಗೊಳಿಸುವ ದಿಕ್ಕಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದು ಜಿಲ್ಲಾ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜಕುಮಾರ್ ನುಡಿದರು.
ಅವರು ಶೆಟ್ಟೀಕೆರೆ ಪಿಎಸಿಬಿಯಲ್ಲಿ ನಡೆದ ಕೃಷಿ ಸಾಲದ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಗ್ರಾಮೀಣ ಸಹಕಾರಿ ಸಂಸ್ಥೆಗಳು ಜಿಲ್ಲಾ ಬ್ಯಾಂಕ್ನಿಂದ ಬಿಡುಗಡೆಯಾಗುವ ಅನುದಾನವನ್ನೇ ನಂಬಿ ಕೂತರೆ ಸಂಸ್ಥೆಯನ್ನು ಆರ್ಥಿಕವಾಗಿ ಸದೃಢವಾಗಿ ಕಟ್ಟಲು ಸಾಧ್ಯವಿಲ್ಲ. ಕೃಷಿಯೇತರ ಸಾಲ, ಅಂದರೆ ವಾಹನ ಸಾಲ, ಅಡಮಾನ ಸಾಲ, ಸ್ವಸಹಾಯ ಗುಂಪುಗಳಿಗೆ ಆರ್ಥಿವಾಗಿ ನೆರವಾಗುವ ಮೂಲಕ ಸಂಸ್ಥೆಗಳನ್ನು ಜನರ ಹತ್ತಿರ ಕೊಂಡೊಯ್ಯಬೇಕಾಗಿದೆ. ಇಂದು ತತ್ಕ್ಷಣದ ಆರ್ಥಿಕ ಬಿಕ್ಕಟ್ಟಿಗೆ ಖಾಸಗಿ ಲೇವಾದೇವಿಗಾರರ ಹತ್ತಿರ ತಮ್ಮ ಒಡವೆಗಳನ್ನು ಅಡಮಾನವಿಟ್ಟು, ಕೊನೆಗೆ ಅದನ್ನು ಕಳೆದುಕೊಳ್ಳುವ ಸಂಭವವೇ ಹೆಚ್ಚು. ಇದನ್ನು ತಪ್ಪಿಸಲು ಸಂಘಗಳು ಅಡಮಾನ ಸಾಲವನ್ನು ನೀಡುವ ಪ್ರವೃತ್ತಿಯನ್ನು ಕೈಗೊಳ್ಳಬೇಕು. ಶೂನ್ಯ ಬಡ್ಡಿಯಲ್ಲಿ ರೈತರಿಗೆ ಸಾಲವಿತಿರಿಸಿ, ಇನ್ನು ಸಾಲ ಸಿಗದ ರೈತರನ್ನು ಗುರುತಿಸಿ ಅವರಿಗೂ ಸಂಸ್ಥೆಯಲ್ಲಿ ಸಾಲನೀಡಿ, ಎಷ್ಟಾದರೂ ಚಿಂತೆಯಿಲ್ಲ ನಿಮಗೆ ಸಾಲ ಮಂಜೂರು ಮಾಡಿಸುವ ಜವಾಬ್ದಾರಿ ನನ್ನದು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಅಧ್ಯಕ್ಷ ಜಿ.ಎಂ. ನಾಗರಾಜು ಸಂಸ್ಥೆಯ ಇತಿಹಾಸದಲ್ಲೇ ಈ ಪ್ರಮಾಣದ ಸಾಲದ ಮೊತ್ತವನ್ನು ನಮ್ಮ ಸಂಘ ನೋಡಿರಲಿಲ್ಲ. ನಮ್ಮ ನಿರ್ದೇಶಕರಾದ ರಾಜ್ಕುಮಾರ್ ಅವರು ನಮ್ಮ ಸಂಸ್ಥೆಯನ್ನು ಆರ್ಥಿಕವಾಗಿ ಸದೃಢಗೊಳಿಸಬೇಕೆಂಬ ಸದುದ್ದೇಶದಿಂದ ನೆರವನ್ನು ನೀಡಿದ್ದಾರೆ. ಸಕಾಲದಲ್ಲಿ ಸಾಲ ಮರುಪಾವತಿ ಮಾಡುವ ಮೂಲಕ ಸಂಸ್ಥೆಯನ್ನು ಬೆಳಸಿ, ಜೊತೆಯಲ್ಲಿ ನೀವು ಬೆಳೆಯಿರಿ ಎಂದರು.
ಸಾಸಲು ನಾಗರಾಜು, ಶೆಟ್ಟೀಕೆರೆ ಭೈರೇಶ್, ನಂಜುಂಡಪ್ಪ, ಪ್ರಸನ್ನ, ಕೇಶವಮೂರ್ತಿ, ಕಮಲಮ್ಮ, ವ್ಯವಸ್ಥಾಪಕ ರಾಮಚಂದ್ರ ಮುಂತಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

