ತುಮಕೂರು

ಅಂಧಕಾರದಲ್ಲಿ ತಿಪಟೂರು ಜನತೆ

Published On :

ತಿಪಟೂರು:  ಕಲ್ಪತರು ನಾಡು ತಿಪಟೂರು ಕಳೆದ ಹಲವಾರು ವರ್ಷಗಳಿಂದ ಭೀಕರ ಬರಗಾಲಕ್ಕೆ ಈಡಾಗಿರುವ ಈ ಸಮಯದಲ್ಲೇ ನಿರಂತರವಾಗಿ ವಿದ್ಯುತ್ ಸರಬರಾಜು ಕೈ ಕೊಡುತ್ತಿರುವ ಕಾರಣ ತಾಲೂಕಿನಾದ್ಯಂತ ಯಾವ ಕೆರೆ -ಕಟ್ಟೆಗಳಲ್ಲೂ ನೀರಿಲ್ಲ. ಇದರಿಂದ ತಾಲೂಕಿಗೆ ಭೀಕರ ಬರದ ಕಾರ್ಮೋಡ ಕರಿನೆರಳಿನ ಛಾಯೆ ಆವರಿಸಿದೆ. ಜನ- ಜಾನುವಾರುಗಳಿಗಂತೂ ಯಾವ ಕೆರೆ -ಕಟ್ಟೆಗಳಲ್ಲೂ ಕುಡಿಯಲು ನೀರಿಲ್ಲದ ಕಾರಣ ಎಲ್ಲರೂ ಬೋರ್ವೆಲ್ಗಳನ್ನೇ ಅವಲಂಬಿಸಬೇಕಾಗಿರುವ ಸ್ಥಿತಿ ನಿರ್ಮಾಣವಾಗಿದೆ.
ಒಂದು ತಿಂಗಳಿಂದ ನಗರ ಸೇರಿದಂತೆ ತಾಲೂಕಿನಾದ್ಯಂತ ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿದೆ. ಯಾವಾಗ ಕರೆಂಟ್ ಇರುತ್ತದೆ, ಯಾವಾಗ ಕೈ ಕೊಡುತ್ತದೆ ಎಂಬ ಮಾಹಿತಿಯೂ ಬೆಸ್ಕಾಂನಿಂದ ಇರುವುದಿಲ್ಲ. ಇಂಥ ಸಂದರ್ಭದಲ್ಲಿ ರೈತರ ಪಾಡಂತೂ ಹೇಳತೀರದಾಗಿದೆ. ಮಳೆಯೂ ಸಕಾಲಕ್ಕೆ ಆಗದ ಕಾರಣ ತಾಲೂಕಿನ ಜನತೆಯ ಜೀವನಾಡಿ ವಾಣಿಜ್ಯ ಬೆಳೆಯಾದ ತೆಂಗು ಈಗಾಗಲೆ ಸೊರಗಿ ಹೋಗಿದೆ.
ತಾಲೂಕಿನಲ್ಲಿ ಬಹುತೇಕ ತೆಂಗು ಬೆಳಗಾರರು ತೆಂಗಿನ ತೋಟಗಳಿಗೆ ನೀರುಣಿಸಲು ಬೋರ್ವೆಲ್ಗಳನ್ನೇ ಅವಲಂಬಿಸಿದ್ದಾರೆ. ತೆಂಗಿನ ಜೊತೆ ಹೆಚ್ಚಿನ ರೈತರು ಬಾಳೆ, ತರಕಾರಿ ಮತ್ತಿತರೆ ಬೆಳೆಗಳನ್ನು ತಮ್ಮ ನಿತ್ಯ ಬದುಕಿನ ಖರ್ಚಿಗಾಗಿ ಬೆಳೆಯುತ್ತಿದೆ. ಬೋರ್ಗಳಿಂದ ನೀರು ಹಾಯಿಸಿ ಬೆಳೆ ಬೆಳೆದುಕೊಳ್ಳುತ್ತಿದ್ದರು.
ಬೆಸ್ಕಾಂ ಅಧಿಕಾರಿಗಳ ಹುಚ್ಚಾಟಕ್ಕೆ ಕರೆಂಟ್ ಕಣ್ಣಾ ಮುಚ್ಚಾಲೆ ಆಡುತ್ತಿದೆ. ಇದರಿಂದ ರೈತರು ತೀವ್ರ ಆತಂಕಕ್ಕೀಡಾಗಿ ಬರದ ಬೇಗೆ ನಡುವೆ ಬದುಕಿನ ಜಟಕಾ ಬಂಡಿ ಸಾಗಿಸುವುದೇಗೆ ಎಂಬ ಚಿಂತೆಯಲ್ಲೇ ಮುಳುಗಿದ್ದಾರೆ.
ನಗರದ ನಾಗರಿಕರು, ನೇಕಾರರೂ, ಹೊಟೇಲ್ ಉದ್ಯಮಿಗಳು, ಶಾಲಾ -ಕಾಲೇಜು ಆಸ್ಪತ್ರೆ, ವ್ಯಾಪಾರಸ್ಥರು ಮತ್ತು ಕೈಗಾರಿಕೋದ್ಯಮಿಗಳು ನಿರಂತರ ಕರೆಂಟ್ ಕಿರಿಕಿರಿಯಿಂದ ಬೇಸತ್ತು ಹೋಗಿದ್ದಾರೆ.
ವಿದ್ಯುತ್ ಅವ್ಯವಸ್ಥೆಯಿಂದ ಕುಡಿಯುವ ನೀರು ಸರಬರಾಜಿನಲ್ಲಿಯೇ ಏರುಪೇರಾಗಿದೆ. ಜನರಂತೂ ಸರ್ಕಾರಕ್ಕೆ ಮತ್ತು ಬೆಸ್ಕಾಂ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಬೀದಿಗಳಲ್ಲಿ ಶಾಪ ಹಾಕುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.