ರೈತನ ಮೇಲೆ ಕರಡಿ ದಾಳಿ
ಮಧುಗಿರಿ: ರೈತನೊಬ್ಬ ಜಮೀನು ಕೆಲಸಕ್ಕೆ ತೆರಳಿದ್ದಾಗ ಕರಡಿ ಏಕಾಏಕಿ ಆತನ ಮೆಲೆ ಎರಗಿ ತಲೆ, ಕೈ ಪರಚಿ, ಕಡಿದು ಗಾಯಗೊಳಿಸಿರುವ ಘಟನೆ ತಾಲೂಕಿನ ದೊಡ್ಡೇರಿ ಹೋಬಳಿ ಮಲ್ಲೇನಹಳ್ಳಿ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.
ಕರಡಿ ದಾಳಿಗೆ ಒಳಗಾಗಿರುವವರನ್ನು ರೈತ ನಾಗಣ್ಣ (60) ಎಂದು ಗುರುತಿಸಲಾಗಿದೆ. ಬೆಳಿಗ್ಗೆ ಹೊಲದ ಕೆಲಸಕ್ಕೆ ಜಮೀನಿನ ಹತ್ತಿರ ಹೋಗಿದ್ದಾಗ 2 ಕರಡಿಗಳು ಪ್ರತ್ಯಕ್ಷವಾಗಿವೆ. ಅದರಲ್ಲಿ ಒಂದು ಕರಡಿ ನಾಗಣ್ಣನ ಮೇಲೆ ದಾಳಿ ಮಾಡಿ ತಲೆ, ಕೈಗಳಿಗೆ ಬಾಯಿಂದ ಕಡಿದು ಪರಚಿದೆ.
ದಾಳಿ ವೇಳೆ ಕಿರುಚಿದ ನಾಗಣ್ಣ ಅವರನ್ನು ಅಕ್ಕಪಕ್ಕದಲ್ಲಿದ್ದವರು ಬಂದು ಕರಡಿ ಓಡಿಸಿದ್ದಾರೆ. ಗಾಯಾಳು ನಾಗಣ್ಣ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

