ಜೆಡಿಎಸ್ ಅಭ್ಯರ್ಥಿ ನಾನೇ: ಕೃಷ್ಣಪ್ಪ
ತುರುವೇಕೆರೆ: ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ನಿಂದ ಸ್ಪರ್ಧೆಗೆ ಇಳಿಯುವವನು. ನಾನೇ ಇದರಲ್ಲಿ ಯಾವುದೇ ಅನುಮಾನ ಬೇಡ. ಪಕ್ಷದ ಎಲ್ಲಾ ಕಾರ್ಯಕರ್ತರೂ ಈಗಿನಿಂದಲೇ ಪಕ್ಷದ ಬೆಳೆವಣಿಗೆಗೆ ಮುಂದಾಗಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಮುಂದಿನ ಮುಖ್ಯಮಂತ್ರಿಯನ್ನಾಗಿ ಮಾಡಲು ಪಣ ತೊಡಿ ಎಂದು ಜೆಡಿ ಎಸ್ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.
ದಂಡಿನಶಿವರದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಇದ್ದೂ ಇಲ್ಲದಾಗಿದೆ. ಜನಹಿತ ಕಾಪಾಡುವ ಮನಸ್ಸು ಈ ಪಕ್ಷಕ್ಕೆ ಇಲ್ಲ. ಎಲ್ಲೆಲ್ಲೂ ಭ್ರಷ್ಟಾಚಾರ ತುಂಬಿ ಹೋಗಿದೆ. ಜನಸಾಮಾನ್ಯರು ಎಂದು ಈ ಸರ್ಕಾರ ಕೊನೆಗೊಳ್ಳುವುದೋ ಎಂದು ಕಾದಿದ್ದಾರೆ. ಆದ್ದರಿಂದ ಈ ಬಾರಿ ಜೆಡಿಎಸ್ ಸ್ಪಷ್ಟ ಬಹುಮತ ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದರು.
ತುರುವೇಕೆರೆ ವಿಧಾನಸಭಾ ಕ್ಷೇತ್ರದಿಂದ ಹಲವಾರು ಮಂದಿ ಸ್ಪರ್ಧೆ ಬಯಸಿದ್ದಾರೆ. ಅದು ಪ್ರಜಾಪ್ರಭುತ್ವದ ನೀತಿ. ತಪ್ಪಲ್ಲ. ಆದರೆ, ತಾವು ಹಾಲಿ ಶಾಸಕರಾಗಿದ್ದು, ಸಹಜವಾಗಿ ತಮಗೇ ಟಿಕೇಟ್ ನೀಡುವುದು ಖಚಿತ. ತಾವು ಕಳೆದ ಎರಡೂ ಬಾರಿಯೂ ತಾಲೂಕಿನ ಜನರ ನಿರೀಕ್ಷೆಗಿಂತಲೂ ಉತ್ತಮವಾಗಿ ಕೆಲಸ ಮಾಡಿದ್ದೇನೆ. ಗ್ರಾಮ ಗ್ರಾಮಗಳ ಸರ್ವತೋಮುಖ ಅಭಿವೃಧ್ಧಿಗೆ ಶ್ರಮಿಸಿದ್ದೇನೆ. ಕಾರ್ಯಕರ್ತರು ಹಾಗೂ ಕ್ಷೇತ್ರದ ಅಭಿವೃಧ್ಧಿಗೆ ತಾವು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ. ಹೈಕಮಾಂಡ್ ಸಹ ತಮಗೇ ಹಸಿರು ನಿಶಾನೆ ತೋರಿದೆ. ಕ್ಷೇತ್ರದ ಎಲ್ಲಾ ಜೆಡಿಎಸ್ ಕಾರ್ಯಕರ್ತರು ಕುಮಾರಸ್ವಾಮಿ ಅವರು ಆಡಳಿತ ಮಾಡಿದ ಸಂದರ್ಭ ಮಾಡಿದ ಸಾಧನೆ ಹಾಗೂ ಹಾಲಿ ಸರ್ಕಾರದ ಪರಮಭ್ರಷ್ಟಾಚಾರದ ಸಂಗತಿಗಳನ್ನು ಮನೆ ಮನೆಗೆ ತಲುಪಿಸಿ ಎಂದು ಕಾರ್ಯಕರ್ತರಿಗೆ ಶಾಸಕ ಎಂ.ಟಿ. ಕೃಷ್ಣಪ್ಪ ಕರೆ ನೀಡಿದರು.
ದಂಡಿನಶಿವರದಲ್ಲಿ ನೂತನವಾಗಿ ನಿರ್ಮಿಸಿದ ಸರ್ಕಾರಿ ಪದವಿ ಕಾಲೇಜಿನ ಕಟ್ಟಡ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ವತಿಯಿಂದ ನಿರ್ಮಿಸಿರುವ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಕಟ್ಟಡವನ್ನು ಉದ್ಘಾಟಿಸಿದರು.
ಜಿಪಂ ಅಧ್ಯಕ್ಷೆ ಪ್ರೇಮಾ ಮಹಾಲಿಂಗಪ್ಪ, ವಿಧಾನಪರಿಷತ್ ಸದಸ್ಯ ಡಾ.ಹುಲಿನಾಯ್ಕರ್, ಮಾಜಿ ಶಾಸಕ ಎಚ್.ನಿಂಗಪ್ಪ, ಜಿ.ಪಂ. ಸದಸ್ಯರಾದ ಎ.ಬಿ. ಜಗದೀಶ್, ಲತಾ ವಿಶ್ವನಾಥ್, ಶ್ರೀನಿವಾಸಯ್ಯ, ತಾ.ಪಂ. ಅಧ್ಯಕ್ಷ ಎಂ.ಡಿ. ರಮೇಶ್ ಗೌಡ, ಉಪಾಧ್ಯಕ್ಷೆ ರತ್ನಾಮಣಿ ವೆಂಕಟೇಗೌಡ, ಸದಸ್ಯರಾದ ವೆಂಕಟರಾಮಯ್ಯ, ಕಾವ್ಯ ರಾಜಕುಮಾರ್, ಎಪಿಎಂಸಿ ಅಧ್ಯಕ್ಷ ದಂಡಿನಶಿವರ ಶಂಕರೇಗೌಡ, ನಿರ್ದೇಶಕರಾದ ಕೊಂಡಜ್ಜಿ ವಿಶ್ವನಾಥ್, ಜೆಡಿಎಸ್ ತಾಲೂಕು ಅಧ್ಯಕ್ಷ ಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ರೇಣುಕಾರಾಧ್ಯ, ದಂಡಿನಶಿವರ ಗಂಗಾಧರಗೌಡ ಮೊದಲಾದವರು ಇದ್ದರು.
ಕಾಲೇಜು ನಿರ್ಮಾಣಕ್ಕೆ ಜಮೀನು ನೀಡಿದ ಗಂಗಾಧರ್ ಹಾಗೂ ರಘು ರವರನ್ನು ಗೌರವಿಸಲಾಯಿತು. ದಂಡಿನಶಿವರ ಶಂಕರೇಗೌಡ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

