ಯೋಜನೆ ಶೀಘ್ರ ಪೂರ್ಣ: ಸಚಿವರ ಭರವಸೆ
ತುಮಕೂರು: ಇನ್ನು ಕೆಲವೇ ದಿವಸಗಳಲ್ಲಿ ಶೆಟ್ಟಿಹಳ್ಳಿ, ಉಪ್ಪಾರಹಳ್ಳಿ ಯೋಜನೆ ಪೂರ್ಣಗೊಳ್ಳುವ ಭರವಸೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣ ನೀಡಿದ್ದಾರೆ. ಅವರ ಪ್ರಕಾರ ಈ ಮೇಲ್ಸೇತುವೆ ನಿರ್ಮಾಣ ಸಂಬಂಧ ನಮ್ಮ ಮುಂದೆ ತಕರಾರು, ಸಮಸ್ಯೆಗಳ ದೊಡ್ಡ ಬೆಟ್ಟವೇ ಎದುರಿಗೆ ಬಂದಿತ್ತು. ಒಂದೊಂದಾಗಿ ಅವೆಲ್ಲಾವನ್ನು ನಿವಾರಣೆ ಮಾಡಿಕೊಂಡು ಮುಂದೆ ಬಂದಿದ್ದೇವೆ. ಅತಿ ಶೀಘ್ರದಲ್ಲೇ ಈ ಯೋಜನೆ ತುಮಕೂರು ನಗರದ ನಾಗರಿಕರಿಗೆ ಸಮರ್ಪಿಸುವ ಭರವಸೆಯನ್ನು ನೀಡಿದ್ದಾರೆ.
ಮರೆಯಬಾರದು ರವೀಶ್ರನ್ನು
ಶೆಟ್ಟಿಹಳ್ಳಿ-ಉಪ್ಪಾರಹಳ್ಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಸಂಬಂಧ ನಗರಸಭೆ ಮಾಜಿ ಅಧ್ಯಕ್ಷ ದಿ. ರವೀಶ್ ಅವರ ಹೋರಾಟವನ್ನು ಮರೆಯಬಾರದು. ರವೀಶ್ ಸೇರಿದಂತೆ ಒಂದಷ್ಟು ಮಂದಿ ಯುವಕರ ತಂಡವೊಂದು ಈ ಯೋಜನೆ ಈ ಹಂತದವರೆಗೆ ಬರುವ ಸಂಬಂಧ ಇಲಾಖೆಗಳಿಗೆ ಅಲೆದಾಡಿದ್ದಾರೆ. ಶಾಸಕರ ಜತೆ ಚರ್ಚಿಸಿದ್ದಾರೆ. ಸಂಬಂಧಪಟ್ಟ ಗುತ್ತಿಗೆದಾರರು, ಲೋಕೋಪಯೋಗಿ ಇಲಾಖೆಯವರ ಜತೆ ಚರ್ಚೆ ನಡೆಸಿದ್ದಾರೆ. ಕೆಲ ಸಲ ಸಂಘರ್ಷಕ್ಕೆ ಇಳಿದಿದ್ದಾರೆ. ದಾಖಲೆಗಳನ್ನು ಕ್ರೋಢೀಕರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

