'ಪಲಾಯನವಾದ ಶಿವರಾಂ ಸಾಧನೆ'
ಹಾಸನ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡ ನಂತರ ಕ್ಷೇತ್ರದತ್ತ ಮುಖ ಮಾಡದೆ, ಮತದಾರರಿಗೂ ಮುಖ ತೋರಿಸದೇ ಪಲಾಯನ ಮಾಡಿರುವುದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ. ಶಿವರಾಂ ಅವರ ಬಹು ದೊಡ್ಡ ಸಾಧನೆ ಎಂದು ಜಿಲ್ಲಾ ಯುನಿಯನ್ ಅಧ್ಯಕ್ಷ ಕಾರ್ಲೆ ಇಂದ್ರೇಶ್ ಟೀಕಿಸಿದರು. ಮುಂದಿನ ವಿಧಾನಸಭಾ ಚುನಾವಣಾ ನಂತರ ಕಾಂಗ್ರೆಸ್ಗೆ ದಯನೀಯ ಸ್ಥಿತಿಯನ್ನು ತರಲಿರುವ ಕಾಂಗ್ರೆಸ್ ಅಧ್ಯಕ್ಷ ಬಿ. ಶಿವರಾಂ ಅವರನ್ನು ಜೆಡಿಎಸ್ ವತಿಯಿಂದ ಅಭಿನಂದಿಸಲು ಏರ್ಪಾಟು ಮಾಡಿ ಕೊಳ್ಳುತ್ತಿರುವುದಾಗಿ ಅವರು ವ್ಯಂಗ್ಯವಾಡಿದ್ದಾರೆ. ಜಿಲ್ಲಾದ್ಯಂತ ಕಾಂಗ್ರೆಸ್ ಪಕ್ಷದ ಅವನತಿಗೆ ಮತ್ತು ಜೆಡಿಎಸ್ ಉತ್ತುಂಗ ಶಿಖರದಲ್ಲಿ ರಾರಾಜಿಸುತ್ತಿರುವುದು ಶಿವರಾಂ ಸಾಧನೆಯ ಪಟ್ಟಿಗೆ ಸೇರಬೇಕಾಗುತ್ತದೆ. ಕಾಂಗ್ರೆಸ್ ಅಧ್ಯಕ್ಷರಿಗೇ ಜಿಲ್ಲೆಯಲ್ಲಿ ಯಾವುದೇ ನಿರ್ದಿಷ್ಟವಾದ ವಿಧಾನಸಭಾ ಕ್ಷೇತ್ರ ಇಲ್ಲದಿರುವುದು ಕಾಂಗ್ರೆಸ್ನ ಸದ್ಯದ ಪರಿಸ್ಥಿತಿಯ ಕೈನ್ನಗಡಿಯಾಗಿದೆ ಎಂದು ಹೇಳಿದ್ದಾರೆ. ಮೂರು ಬಾರಿ ಪ್ರತಿನಿಧಿಸಿದ್ದ ಗಂಡಸಿ ವಿಧಾನಸಭಾ ಕ್ಷೇತ್ರದ ಸಾಲಗಾಮೆ, ದುದ್ದ ಹೋಬಳಿಯೂ ಸೇರಿದಂತೆ ಮತ್ತು ಹಾಸನ ವಿಧಾನಸಭಾ ಕ್ಷೇತ್ರದಲ್ಲಿ 5 ಬಾರಿ ಪ್ರತಿನಿಧಿಸಿದ್ದ ದುದ್ದ ಸಾಲಗಾಮೆ ಹೋಬಳಿಗಳು ಸೇರಿದಂತೆ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಜಿಪಂ ಮತ್ತು ತಾಪಂ ಸ್ಥಳೀಯ ಚುನಾವಣೆಗಳಲ್ಲಿ 25ಕ್ಕೆ 25ತಾಲೂಕು ಪಂಚಾಯ್ತಿ ಸದಸ್ಯರನ್ನು ಮತ್ತು 7 ಜಿಲ್ಲಾ ಪಂಚಾಯ್ತಿಯ ಎಲ್ಲ ಕ್ಷೇತ್ರಗಳನ್ನು ಜೆಡಿಎಸ್ಗೆ ಗೆಲ್ಲಿಸಿಕೊಟ್ಟಂತಹ ಕೀರ್ತಿಯೂ ಶಿವರಾಂ ಅವರಿಗೆ ಸಲ್ಲಬೇಕು ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

