ತುಮಕೂರು

ತೂಗಿರೇ ತೊಟ್ಟಿಲು ಕಂದನ...

Published On :

ತುಮಕೂರು: ಸರ್ಕಾರದ ವಿನೂತನ ಯೋಜನೆಯಾದ ತೊಟ್ಟಿಲು ಕಂದನ ಸ್ವಾಗತ ಕೇಂದ್ರಕ್ಕೆ ಶುಕ್ರವಾರ ದಂದು ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಚಾಲನೆ ನೀಡಲಾಯಿತು.
ಅನಾಥ, ನಿರ್ಗತಿಕ, ನವಜಾತ ಶಿಶುಗಳನ್ನು ರಕ್ಷಿಸಿ ಪೋಷಿಸುವ ದೃಷ್ಟಿಯಿಂದ ಸರ್ಕಾರದ ಸಮಗ್ರ ಮಕ್ಕಳ ಹಕ್ಕುಗಳ ರಕ್ಷಣಾ ಸೊಸೈಟಿ ಮೂಲಕ ಜಾರಿಗೆ ತಂದಿರುವ ಈ ಯೋಜನೆ ತುಮಕೂರಿನಲ್ಲಿ ಶುಕ್ರವಾರದಿಂದ ಕಾರ್ಯಾರಂಭ ಮಾಡಿತು.
ಜಿಲ್ಲಾ ಆಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ಹಾಗೂ ತುರ್ತು ಚಿಕಿತ್ಸಾ ವಿಭಾಗದಲ್ಲಿ ತಲಾ ಒಂದೊಂದು ತೊಟ್ಟಿಲು ಇಡಲಾಗಿದ್ದು, ನವಜಾತ ಶಿಶುಗಳನ್ನು ಈ ತೊಟ್ಟಿಲೊಳಗೆ ಹಾಕಲು ಅವಕಾಶವಿದೆ. ತುಮಕೂರಿನ ದತ್ತು ಕೇಂದ್ರದ ಗಂಗಾಶೇಖರ್ ಅವರು ಎರಡು ತೊಟ್ಟಿಲು ಉಚಿತವಾಗಿ ನೀಡಿದ್ದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಎನ್.ಸುಜಾತ ಅವರು ಜಿಲ್ಲಾ ಸರ್ಜನ್ ಡಾ.ರಜನಿ ಅವರಿಗೆ ತೊಟ್ಟಿಲುಗಳನ್ನು ಹಸ್ತಾಂತರಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ವಾಸಂತಿ ಉಪ್ಪಾರ್, ಜಿಲ್ಲಾ ಆಸ್ಪತ್ರೆ ಸ್ಥಾನಿಕ  ವೈದ್ಯಾಧಿಕಾರಿ ಡಾ.ರುದ್ರಮೂರ್ತಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಸಾ.ಚಿ. ರಾಜ್‌ಕುಮಾರ್, ದತ್ತು ಕೇಂದ್ರದ ಗಂಗಾಶೇಖರ್ ಉಪಸ್ಥಿತರಿದ್ದರು.
ಅನಾಥ, ನಿರ್ಗತಿಕ, ರಕ್ಷಣೆ ಬೇಕಿರುವ ನವಜಾತ ಶಿಶುಗಳನ್ನು ಎಲ್ಲಂದರಲ್ಲಿ ಬಿಸಾಕಿ ಹೋಗದೆ ಅಥವಾ ಪ್ರಾಣಿಗಳ ಕೈಗೆ ಸಿಗದಂತೆ ರಕ್ಷಿಸಲು ಈ ಕೇಂದ್ರ ಆರಂಭಿಸಿದ್ದು, ಸಂಬಂಧಪಟ್ಟವರು ಇದರ ಪ್ರಯೋಜನ ಪಡೆಯಲು ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.