ಶಿವಮೊಗ್ಗ

ವರದಾಮೂಲದಲ್ಲಿ ಕಾರ್ಯಾಗಾರ

Published On :

ತ್ಯಾಗರ್ತಿ:  ಸಾಗರ ತಾಲೂಕಿನ ವರದಾಮೂಲದಲ್ಲಿ ಜು.2 ರಂದು ದೇವರ ಕಾಡುಗಳು ಮತ್ತು ನದಿಮೂಲ ಸಂರಕ್ಷಣೆ ಕುರಿತು ವೃಕ್ಷಲಕ್ಷ ಆಂದೋಲನ, ಗ್ರಾಮ ಅರಣ್ಯ ಸಮಿತಿ ಶಡ್ತೀಕೆರೆ ಹಾಗೂ ಭೀಮನಕೋಣೆ, ಸಮುದಾಯ ವಿಜ್ಞಾನ ಕೇಂದ್ರ ಶಡ್ತೀಕೆರೆ, ಶ್ರೀಕೃಪಾ ಯುವಕ ಸಂಘದ ಆಶ್ರಯದಲ್ಲಿ ಜಾಗೃತಿ ಕಾರ್ಯಾಗಾರ ನಡೆಯಲಿದೆ. ಶ್ರೀಸೋಂದಾ ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಸೊಪ್ಪಿನಬೆಟ್ಟದಲ್ಲಿ ಅರಣ್ಯವನ್ನು ಸಂರಕ್ಷಿಸಿ ಔಷಧಿ ಸಸ್ಯಗಳನ್ನು ಬೆಳೆದ ಪ್ರಕಾಶ್ ಮಂಚಾಲೆ ಅವರನ್ನು ಸನ್ಮಾನಿಸಲಾಗುವುದು. ಪಶ್ಚಿಮಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಸಮುದಾಯ ನರ್ಸರಿ ಯೋಜನೆಗೆ ಚಾಲನೆ ನೀಡುವರು. ಪರಿಸರ ವಿಜ್ಞಾನಿಗಳಾದ ಡಾ. ಟಿ.ವಿ. ರಾಮಚಂದ್ರ, ಡಾ. ಸುಭಾಷ್ ಚಂದ್ರನ್, ಡಾ. ವಾಸುದೇವ್, ಡಾ. ಹರೀಶ್ ಭಟ್, ಡಾ. ಶ್ರೀಕಾಂತ್ ಗುನಗಾ, ಸಾಗರ ಅರಣ್ಯ ಸಂರಕ್ಷಣಾ ಅಧಿಕಾರಿ ಪಿ.ಪಿ. ಬ್ಯಾನರ್ಜಿ ಭಾಗವಹಿಸುವರು. ಬಿ.ಎಚ್.ರಾಘವೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.