ಮೋರಿ ಕೆಡವಿದ ಸೈಟ್ ಮಾಲೀಕ!
ಶಿವಮೊಗ್ಗ: “OÚßM·ÛÁÚ¬Væ ವರ್ಷ, ದೊಣ್ಣೆಗೆ ¬ÉßÎÚ’ ಎಂಬ ಗಾದೆಯಂತೆ ಇಲ್ಲೊಬ್ಬ ಖಾಸಗಿ ಸೈಟ್ ಮಾಲೀಕರೊಬ್ಬರು ನಗರ ಪಾಲಿಕೆಯ ಬಹುಉಪಯೋಗಿ ಯೋಜನೆಯೊಂದನ್ನು ಕುಟ್ಟಿ ಕೆಡವಿದ್ದಾರೆ.
ಕಾಶಿಪುರದಿಂದ ವಿಕಾಸ ಶಾಲೆ (ಆಲ್ಕೊಳ) ಕಡೆಗೆ ಹೋಗುವ ದಾರಿಯಲ್ಲಿ ಪ್ರತಿವರ್ಷ ಮಳೆಗಾಲದಲ್ಲಿ ನೀರು ನಿಲ್ಲುತ್ತಿತ್ತು. ಈ ಭಾಗದ ಜನರು, ಶಾಲಾ ಮಕ್ಕಳು ಈ ಕಾರಣದಿಂದ ಸಾಕಷ್ಟು ತೊಂದರೆ ಅನುಸರಿಸುತ್ತಿದ್ದರು. ರಸ್ತೆ ಮೇಲೆ ಮಣ್ಣು ಹಾಕಿ ಕಷ್ಟಪಟ್ಟು ಓಡಾಡುವ ಸ್ಥಿತಿನಿರ್ಮಾಣವಾಗುತ್ತಿತ್ತು.
ಈ ಹಿನ್ನೆಲೆಯಲ್ಲಿ ಜನರ ಅಪೇಕ್ಷೆಯಂತೆ ನಗರ ಪಾಲಿಕೆಯು 1 ತಿಂಗಳ ಹಿಂದಷ್ಟೇ ಇಲ್ಲೊಂದು 10 ಮೀಟರ್ ಡಕ್ (ಮೋರಿ) ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಂಡಿತು. ಅಚ್ಚರಿ ಎಂದರೆ ಇನ್ನೂ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಸಮೀಪದ ಸೈಟ್ ಮಾಲೀಕನೊಬ್ಬ ಮೋರಿಯನ್ನು ಜೆಸಿಬಿ ಬಳಸಿ ಕಿತ್ತುಹಾಕಿದ್ದಾನೆ. ಈ ಮೂಲಕ ನಗರಪಾಲಿಕೆಯ 3 ಲಕ್ಷ ವೆಚ್ಚದ ಕಾಮಗಾರಿ ಧರಾಶಾಯಿಯಾಗಿದೆ.
ಮೋರಿ ನಿರ್ಮಾಣ ಮಾಡಲಾದ ರಸ್ತೆಯ ಇಕ್ಕೆಲಗಳಲ್ಲಿ ಅಪ್ರೂವ್ಡ್ ಲೇಔಟ್ ಇಲ್ಲ. ಅದು ರೆವಿನ್ಯೂ ಜಾಗವಾಗಿದೆ. ರಸ್ತೆ ಕೂಡ ಅಪ್ರೂಲ್ಡ್ ಆಗಿಲ್ಲ. ಹೀಗಾಗಿ, ಕಾಮಗಾರಿ ನಡೆಸಿದ್ದೇ ಸರಿಯಲ್ಲ ಎಂದು ಸೈಟ್ ಮಾಲೀಕ ಕಾಮಗಾರಿಯನ್ನು ಒಡೆದು ಹಾಕಿದ್ದಾರೆ.
ಈ ನಡುವೆಯೇ ನಗರ ಪಾಲಿಕೆಯವರು ಸೈಟ್ ಮಾಲೀಕರ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ನಗರ ಪಾಲಿಕೆ ಸದಸ್ಯ ನರಸಿಂಹಮೂರ್ತಿ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಕಾಮಗಾರಿ ಆರಂಭದ ವೇಳೆಯೇ ಸೈಟ್ ಮಾಲೀಕರು ಕಾಮಗಾರಿಗೆ ಅಡ್ಡಿಪಡಿಸಲು ಬಂದರು. ಈ ಸಂದರ್ಭ ನಗರ ಪಾಲಿಕೆ ಎಂಜಿನಿಯರ್ ಅವರ ಗಮನಕ್ಕೆ ವಿಷಯ ತರಲಾಯಿತು. ಪೊಲೀಸರಿಗೆ ದೂರು ನೀಡಿ ಕಾಮಗಾರಿ ಮುಂದುವರಿಸುವಂತೆ ಸಲಹೆ ನೀಡಿದ್ದೆ. ಆದರೆ, ಆಗ ಅಧಿಕಾರಿಗಳು ಉದಾಸೀನ ಮಾಡಿದ ಪರಿಣಾಮ ಇಂದು ಕಾಮಗಾರಿ ನೆಲಕ್ಕುರುಳಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಾಮಗಾರಿ ಶೇ.70 ರಷ್ಟು ಮಾತ್ರ ಮುಗಿದಿದ್ದು ಗುತ್ತಿಗೆದಾರ ಕಂಗಾಲಾಗಿದ್ದಾರೆ. ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಈ ರೀತಿ ಆಗಿರುವುದರಿಂದ ಗುತ್ತಿಗೆದಾರನಿಗೆ ಬಿಲ್ ಪಾವತಿ ಮಾಡುವವರು ಯಾರು ಎಂಬ ಪ್ರಶ್ನೆಯೂ ಎದ್ದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

