ಶಿವಮೊಗ್ಗ

ವಿಹಿಂಪ, ಬಜರಂಗ ದಳ ಪ್ರತಿಭಟನೆ

Published On :

ಶಿವಮೊಗ್ಗ: ಮೌಲ್ವಿಗಳಿಗೆ ಮಾಸಿಕ ರು. 3 ಸಾವಿರ ಕೊಡುವ ಸರ್ಕಾರದ ಪ್ರಸ್ತಾಪವನ್ನು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳ ತೀವ್ರವಾಗಿ ಖಂಡಿಸಿದೆ. ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಎರಡೂ ಸಂಘಟನೆಯ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ದೇವಾಲಯಗಳಿಂದ ಬರುವ ಹಣವನ್ನು ಯಾವುದೇ ಮಸೀದಿಯ ಮೌಲ್ವಿಗಳಿಗೆ ಮಾಸಿಕ ರು. 3 ಸಾವಿರ ವೇತನ ಕೊಡುವುದನ್ನು ಹಾಗೂ ಮಸೀದಿ ಮತ್ತು ಮದರಸ ಮತ್ತು ಚರ್ಚ್‌ಗಳಿಗೆ ಕೊಡುವುದನ್ನು ಖಂಡಿಸುವುದಾಗಿ ತಿಳಿಸಿದರು.
ಯಾವುದೇ ಮಸೀದಿ, ಮದರಸ ಹಾಗೂ ಚರ್ಚ್‌ಗಳು ಮುಜರಾಯಿ ಇಲಾಖೆಗೆ ಒಳಪಟ್ಟಿಲ್ಲ. ಅಲ್ಲಿ ಬರುವ ಹಣ ಸರ್ಕಾರಕ್ಕೂ ಬರುವುದಿಲ್ಲ. ಹೀಗಿದ್ದಾಗ ಸರ್ಕಾರ ಮುಜರಾಯಿ ಇಲಾಖೆಯಿಂದ ಮೌಲ್ವಿಗಳಿಗೆ ರು. 3 ಸಾವಿರ  ಕೊಡುವುದು, ಹಿಂದೂಗಳಿಗೆ ಮಾಡಿದ ಅಪಮಾನವಾಗುತ್ತದೆ.
ಮುಜರಾಯಿ ಇಲಾಖೆಗೆ ಸಂಬಂಧಪಟ್ಟ ಸುಮಾರು 34225ಕ್ಕೂ ಹೆಚ್ಚು ಹಿಂದೂ ದೇವಾಲಯಗಳು ಇವೆ. ಇದರಲ್ಲಿ ಎ ಗ್ರೇಡ್, ಬಿ ಗ್ರೇಡ್ ಹಾಗೂ ಇನ್ನಿತರೆ ಎಂಬಂತೆ ಆಯಾಯ ದೇವಾಲಯಗಳ ಅದಾಯಕ್ಕೆ
ಅನುಗುಣವಾಗಿ ವಿಂಗಡಿಸಲಾಗಿದೆ.
ಅನೇಕ ದೇವಾಲಯಗಳಲ್ಲಿ ಹಿಂದೂ ಭಕ್ತರು ದೇವರ ಹುಂಡಿಗೆ ಕಾಣಿಕೆಗಳನ್ನು ಅರ್ಪಿಸುತ್ತಾರೆ. ಇದರಲ್ಲಿ ಕೆಲವು ದೇವಾಲಯಗಳಲ್ಲಿ ಪ್ರತಿ ತಿಂಗಳು ಕೋಟ್ಯಂತರ ಹಾಗೂ ಇನ್ನು ಕೆಲವು ದೇವಾಲಯಗಳಲ್ಲಿ ಎರಡು ತಿಂಗಳಿಗೊಮ್ಮೆ ಹುಂಡಿ ತುಂಬಿ ಸುಮಾರು ರು. 3-4 ಲಕ್ಷ ಆದಾಯ ಬರುವಂತಹ ದೇವಾಲಯಗಳು 300ಕ್ಕೂ ಹೆಚ್ಚಿವೆ.
ಹೀಗೆ ಬರುವ ಕೋಟಿ ಕೋಟಿ ಹಣ ಸರ್ಕಾರದ ಮುಂಜರಾಯಿ ಇಲಾಖೆಗೆ ಜಮಾ ಆಗುತ್ತದೆ. ಆ ಹಣದಲ್ಲಿ ಮುಜರಾಯಿ ಇಲಾಖೆಯ ದೇವಾಲಯಗಳ ಅರ್ಚಕರಿಗೆ ಹಾಗೂ ದೇವಾಲಯಗಳ ಜೀರ್ಣೋದ್ಧಾರ ಅಭಿವೃದ್ಧಿಗೆ ಮಾತ್ರ ಬಳಸಬೇಕು. ಆದರ ಹೊರತಾಗಿ ಮೌಲ್ವಿಗಳಿಗೆ ವೇತನ ಕೊಡಲು ಹೊರಟರೆ ಸುಮ್ಮನಿರುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಅರ್ಚಕರಿಗೆ ಆಯಾ ದೇವಾಲಯಗಳ ಗ್ರೇಡಿಗೆ ತಕ್ಕಂತೆ ರು. 50 ಯಿಂದ ರು. 1750 ಮಾಸಿಕ ವೇತನ ಕೊಡಲಾಗುತ್ತಿದೆ. ಆದರೆ ದೇವಾಲಯಗಳ ಅರ್ಚಕರ ಜೀವನ ನಿರ್ವಹಣೆಗೆ ಈ ಹಣ ಸಾಕಾಗುವುದಿಲ್ಲ. ಅನೇಕ ದೇವಾಲಯಗಳಲ್ಲಿ ಪೂಜೆಗೆ ಹೂವು, ದೀಪಕ್ಕೆ ಎಣ್ಣೆ ಸಹ ಇರುವುದಿಲ್ಲ. ನೈವೇದ್ಯಕ್ಕೂ ಸಹ ಹಣದ ಕೊರತೆ ಇದೆ. ಆದ್ದರಿಂದ ದೇವಾಲಯದಿಂದ ಬರುವ ಹಣವನ್ನು ಎಲ್ಲಾ ದೇವಾಲಯಗಳ ಅರ್ಚಕರಿಗೆ ಕನಿಷ್ಠ ರು. 5 ಸಾವಿರ ವೇತನವನ್ನು ಕೊಡಬೇಕು. ಹಾಗೂ ಎಲ್ಲಾ ದೇವಾಲಯಗಳ ಅಭಿವೃದ್ಧಿಗೆ ಮಾತ್ರ ವಿನಿಯೋಗಿಸಬೇಕು ಎಂದು ಒತ್ತಾಯಿಸಿದರು.
ಮೌಲ್ವಿಗಳಿಗೆ ರು. 3 ಸಾವಿರ ಕೊಟ್ಟಿದ್ದೇ ಆದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಎಲ್ಲಾ ಹಿಂದು ಧಾರ್ಮಿಕ ಮುಖಂಡರು ಹಾಗೂ ಅರ್ಚಕರೊಂದಿಗೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಶಾಮರಾವ್ ಶಿರ್ಕೆ, ನಾರಾಯಣ, ಎಸ್.ಆರ್.ನಟರಾಜ್, ರಮೇಶ್‌ಬಾಬು, ದೀನದಯಾಳು, ಜಿ.ಮಾಲತೇಶ್, ಪ್ರಸನ್ನ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.